ಮಮ್ಮುಟ್ಟಿಯ ಕಂಚಿನ ಕಂಠದಲ್ಲಿ ಫೋರ್ಟ್ ಸೈಂಟ್ ಎಂಜೆಲೊದ ಇತಿಹಾಸ ಕೇಳಿ
Update: 2016-02-27 12:23 IST
ಫೋರ್ಟ್ ಸೈಂಟ್ ಎಂಜೆಲೊ (ಕಣ್ಣೂರ್ ಕೊಟ್ಟ) ದ ೫೦೦ ವರ್ಷಗಳ ಇತಿಹಾಸವನ್ನು ಈಗ ಮಮ್ಮುಟ್ಟಿ ಧ್ವನಿಯಲ್ಲಿ ಕೇಳಿ. ಕೇರಳದ ಕಣ್ಣೂರಿನಲ್ಲಿರುವ ಈ ಐತಿಹಾಸಿಕ ಕೋಟೆಯ ಕುರಿತು ಕೇರಳ ಸರಕಾರದ ಪ್ರವಾಸೋದ್ಯಮ ಇಲಾಖೆ ರಾಜ್ಯದ ಪ್ರಪ್ರಥಮ ಧ್ವನಿ ಮತ್ತು ಬೆಳಕಿನ ಹೈಬ್ರಿಡ್ ಶೋ ಒಂದನ್ನು ನಿರ್ಮಿಸಿದೆ. ೫೩ ನಿಮಿಷಗಳ ಈ ವಿಶಿಷ್ಟ ಶೋ ನಲ್ಲಿ ಮಮ್ಮುಟ್ಟಿ ಪ್ರಧಾನ ಪಾತ್ರಧಾರಿಯ ಧ್ವನಿಯಲ್ಲಿ ಈ ಕೋಟೆಯ ಇತಿಹಾಸವನ್ನು ವೀಕ್ಷಕರ ಮುಂದಿಡಲಿದ್ದಾರೆ. ಇದಕ್ಕಾಗಿ ಅವರು ಯಾವುದೇ ಶುಲ್ಕ ಪಡೆದಿಲ್ಲ. ಅದರ ಟ್ರೇಲರ್ ಇಲ್ಲಿದೆ: