ಚರಂಡಿ ಸ್ವಚ್ಛ ಮಾಡುವಾತನೂ ಹುತಾತ್ಮ

Update: 2016-02-27 18:31 GMT

ಭಾರತದಲ್ಲಿ ಪ್ರತೀ ವರ್ಷ ಸಾವಿರಾರು ಪೌರ ಕಾರ್ಮಿಕರು ಒಳಚರಂಡಿಗಳನ್ನು ಸ್ವಚ್ಛ ಮಾಡುವಾಗ ಪ್ರಾಣ ಕಳೆದುಕೊಳ್ಳುತ್ತಾರೆ. ಅವರ ಬಲಿದಾನ ಸಶಸ್ತ್ರಪಡೆಗಳಿಗಿಂತ ಕಡಿಮೆಯೇ?

ನಾವೀಗ ಹುತಾತ್ಮರಾಗಿರುವವರ ಬಗ್ಗೆ ಹೆಚ್ಚು ಉಲ್ಲೇಖವಾಗುತ್ತಿರುವ ದಿನಗಳನ್ನು ಕಾಣುತ್ತಿದ್ದೇವೆ. ಸಿಯಾಚಿನ್‌ನಲ್ಲಿ ಕೆಲ ವಾರಗಳ ಹಿಂದೆ ಹತ್ತು ಸೈನಿಕರು ಪ್ರಾಣ ಕಳೆದುಕೊಂಡರು. ಅವರಲ್ಲಿ ಒಬ್ಬರಾದ ಲಾನ್ಸ್ ನಾಯಕ್ ಹನಮಂತಪ್ಪ ಕೊಪ್ಪದ ಬಹುತೇಕ ದುರಂತದಲ್ಲಿ ಬದುಕುಳಿಯಬಹುದಾದ ಸಾಹಸ ಮಾಡಿದರು. ಕೆಲ ದಿನಗಳ ನಂತರ ಭದ್ರತಾಪಡೆಯ ಐವರು ಯೋಧರು ಕಾಶ್ಮೀರದ ದಾಳಿಯಲ್ಲಿ ಮಡಿದರು. ಅವರಲ್ಲಿ ಇಬ್ಬರು ಕ್ಯಾಪ್ಟನ್ ಪವನ್ ಕುಮಾರ್ ಮತ್ತು ತುಷಾರ್ ಮಹಾಜನ್ ಆಫೀಸರುಗಳಾಗಿದ್ದ ಕಾರಣ ಪ್ರತ್ಯೇಕ ಪ್ರಶಂಸೆ ಗಳಿಸಿದರು. ನಾನು ಇತರ ಹುತಾತ್ಮರ ಬಗ್ಗೆ ಮಾತನಾಡಲು ಬಯಸುತ್ತೇನೆ.

ಭಾರತದಲ್ಲಿ ಅತೀ ಮಾರಕ ಕೆಲಸ ಯಾವುದು? ಅದನ್ನು ತಮ್ಮ ಕೆಲಸ ಅಪಾಯಕಾರಿ ಎಂದು ತಿಳಿದೇ ಮಾಡಲಾಗುತ್ತಿರುತ್ತದೆ ಮತ್ತು ಮರಣ ಮತ್ತು ಗಾಯಗಳ ಸಾಧ್ಯತೆ ಅಧಿಕವಿರುತ್ತದೆ.

ದಿಲ್ಲಿಯಲ್ಲಿ ಈ ಕೆಲಸ ಮಾಡುವವರಲ್ಲಿ, ಶೇ.2ರಷ್ಟು ಮಂದಿಯನ್ನು ಇದು ಕೊಲ್ಲುತ್ತಿದೆ. ಝೀ ನ್ಯೂಸ್ ವೆಬ್‌ತಾಣದಲ್ಲಿರುವಂತೆ 2014ರ ವರದಿಯ ಪ್ರಕಾರ 5000 ಇರುವ ಸಮುದಾಯದಲ್ಲಿ 100 ಮರಣಗಳು ದಾಖಲಾಗಿವೆ. ಈ ಅನುಪಾತವನ್ನು ಸಶಸ್ತ್ರಪಡೆಗಳಿಗೆ ಅನ್ವಯಿಸಿದಲ್ಲಿ ವರ್ಷಕ್ಕೆ 40,000 ಯೋಧರು ಸಾವನ್ನಪ್ಪುವುದನ್ನು ನಿರೀಕ್ಷಿಸಬೇಕು. ಆಗ ಇಂತಹ ಸುದ್ದಿ ಕವರೇಜ್‌ಗೆ ಕೊನೆಯೇ ಇರುವುದಿಲ್ಲ. ಆದರೆ ನಾನು ಹೇಳುತ್ತಿರುವಂತಹ ಈ ಹುತಾತ್ಮರಿಗೆ ಮಾಧ್ಯಮಗಳ ಕವರೇಜ್ ಸಿಗುವುದಿಲ್ಲ ಮತ್ತು ಗೌರವವೂ ಸಿಗುವುದಿಲ್ಲ. ಏಕೆಂದರೆ ಅವರು ಒಳಚರಂಡಿಗಳಲ್ಲಿ ಕೆಲಸ ಮಾಡುತ್ತಾರೆ.

ದಿಲ್ಲಿಯ ಒಳಚರಂಡಿ ಕಾರ್ಮಿಕರು ಔದ್ಯೋಗಿಕವಾಗಿ ಮತ್ತು ಆರೋಗ್ಯ ಅಪಾಯದ ಜತೆಗೆ ಗುತ್ತಿಗೆ ವಿಚಾರವಾಗಿ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಡೌನ್ ದ ಡ್ರೈನ್ ಎನ್ನುವ ನಾನ್ ಪ್ರಾಫಿಟ್ ಪ್ರಾಕ್ಟಿಸ್ ಇಂಡಿಯಾದ 2014ರ ಜನವರಿಯ ಅಧ್ಯಯನವೊಂದು ಆಘಾತಕಾರಿ ಸತ್ಯ ಹೊರ ಹಾಕಿದೆ. ಒಳಚರಂಡಿ ಮತ್ತು ಮ್ಯಾನ್‌ಹೋಲ್‌ಗಳ ಅತಿಯಾದ ತಾಪ, ಜಾರುವ ಗೋಡೆಗಳು, ನೆಲಗಳು ಮತ್ತು ವಿಷಕಾರಿ ಅನಿಲಗಳಿಂದಾಗಿ ಅದರೊಳಗೆ ಸಾಗುವ ಪೌರ ಕಾರ್ಮಿಕರಲ್ಲಿ ಪ್ರತೀ ವರ್ಷ ದಿಲ್ಲಿಯಲ್ಲಿಯೇ 100 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರದಿಯ ಪ್ರಕಾರ ದ್ಯಕೀಯ ಗಮನದ ಕೊರತೆಯಿಂದಾಗಿ ಹೃದಯ ರೋಗ, ಮಸ್ಕ್ಯುಲೋಸ್ಕೆಲಿಟಲ್ ರೋಗ, ಸೋಂಕುಗಳು, ಚರ್ಮದ ಸಮಸ್ಯೆಗಳು ಮತ್ತು ಶ್ವಾಸಕೋಶದ ಸಮಸ್ಯೆಗಳಂತಹ ಹಲವಾರು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಸೇರ್ಪಡೆಯಾಗಿದೆ: ಆರೋಗ್ಯ ಸಮಸ್ಯೆಗಳ ಜೊತೆಗೆ ಇವರನ್ನು ಬಾಧಿಸುವ ಇತರ ವಿಚಾರಗಳೆಂದರೆ, ಕಡಿಮೆ ವೇತನ, ಜಾತಿ ಆಧಾರಿತ ತಾರತಮ್ಯ, ಪೂರ್ವಾಗ್ರಹ, ಔದ್ಯೋಗಿಕ ಭದ್ರತೆಯ ಕೊರತೆ ಮತ್ತು ಸರಕಾರಿ ಸಂಘಟನೆಗಳ ನಿರ್ಲಕ್ಷ್ಯ. ನಾವು ಈ ಜನರನ್ನು ಹೇಗೆ ನೋಡುತ್ತೇವೆ?

ವರದಿ ಹೇಳುವಂತೆ, ಬಹುತೇಕ ಪ್ರಕರಣಗಳಲ್ಲಿ, ಒಳಚರಂಡಿ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಆದರೆ ಅವರ ಅವಧಿ ಮುಗಿಯುವ ಮೊದಲೇ ನಿರಾಕರಿಸಲಾಗುತ್ತದೆ ಮತ್ತು ಒಪ್ಪಂದದ ಪ್ರಕಾರ ವೇತನವನ್ನೂ ನೀಡಲಾಗುವುದಿಲ್ಲ. ಡೆತ್ಸ್ ಇನ್ ದ ಡ್ರೈನ್ಸ್ ವರದಿ ಬರೆದ ಎಸ್.ಆನಂದ್ ಪ್ರಕಾರ, 2007ರಲ್ಲಿ ನಾನು ಮಾಡಿರುವ ಅಂದಾಜಿನಂತೆ ಭಾರತದಲ್ಲಿ ಪ್ರತೀ ವರ್ಷ 22,327 ಪುರುಷರು ಮತ್ತು ಮಹಿಳೆಯರು ವಿವಿಧ ನೈರ್ಮಲ್ಯ ಕೆಲಸದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಬಹುತೇಕ ಭಾರತವು ಜನಸಂಖ್ಯೆಯ ಈ ಭಾಗದತ್ತ ಗಮನ ಕೊಡದೆ ಇರುವ ಕಾರಣ ಮರಣದ ಕಾಳಜಿ ಅತೀ ಕಡಿಮೆ ಇರುವ ಕಾರಣ ಸರಿಯಾದ ಅಂಕಿ ಅಂಶಗಳೂ ಲಭ್ಯವಿಲ್ಲ. ಪೌರ ಕಾರ್ಮಿಕರ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿದ್ದ ಸಂತೋಷ್ ಚೌಧುರಿ ಆಗ ನನಗೆ ಹೇಳಿರುವಂತೆ, 2007ರಲ್ಲಿ ಕನಿಷ್ಠ ಭಾರತದಾದ್ಯಂತ ಮ್ಯಾನ್‌ಹೋಲ್‌ಗಳಲ್ಲಿ ಪ್ರತೀ ದಿನ ಇಬ್ಬರು ಅಥವಾ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಇದು ದಿಗ್ಭ್ರಮೆಗೊಳಿಸುವ ಸಂಖ್ಯೆಗಳು ಮತ್ತು ನಮಗೆ ಈ ಬಗ್ಗೆ ಹೆಚ್ಚು ವಿವರಗಳು ತಿಳಿಯದಿರುವುದು ಮತ್ತು ಒಟ್ಟಾಗಿ ಈ ಪ್ರಮಾಣದ ತ್ಯಾಗದ ಬಗ್ಗೆ ಅಲಕ್ಷ್ಯ ತೋರುವುದು ನಮ್ಮ ಸಮಾಜದ ಬಗ್ಗೆ ಸಾಕಷ್ಟು ಹೇಳುತ್ತದೆ. ಇದ್ಯಾವುದೂ ಉತ್ತಮವಲ್ಲ. ನಮ್ಮಲ್ಲಿ ಬಹುತೇಕರಿಗೆ ಹುತಾತ್ಮರೆನ್ನುವ ಕಲ್ಪನೆಯು ಸಮವಸ್ತ್ರ ಧರಿಸಿದ ವ್ಯಕ್ತಿಯ ಸಾವಿಗೇ ಸೀಮಿತವಾಗಿದೆ. ನಮ್ಮ ಭಾವನೆಗಳು ಅದರ ಜೊತೆಗೆ ಮಿಳಿತವಾಗಿದೆ. ಅವರ ಕೃತ್ಯಗಳನ್ನು ನಮ್ಮನ್ನು ದುಷ್ಟರಿಂದ ರಕ್ಷಿಸುವಂತೆ ಕಾಣುತ್ತದೆ ಮತ್ತು ಅವರ ತ್ಯಾಗವು ಉದ್ದೇಶಪೂರ್ವಕವಾಗಿ ಪವಿತ್ರ ಎಂದು ತೋರಿಸಲಾಗುತ್ತಿದೆ. ನಾವು 1947 ಆಗಸ್ಟ್ 14ರಂದು ಒಂದು ಸೇನೆಯನ್ನು ಪಡೆದುಕೊಂಡೆವು ಮತ್ತು ಆ ಸೇನೆ ಆ ಮಧ್ಯರಾತ್ರಿಯ ಒಂದು ಕ್ಷಣಕ್ಕೆ ಮೊದಲಿನವರೆಗೂ ಬಾಡಿಗೆಗಾಗಿ ಯುದ್ಧ ಮಾಡುತ್ತಿತ್ತು. ಜನರಲ್ ಡೈಯರ್ ಜಲಿಯನ್‌ವಾಲಾ ಬಾಗ್ ಅಲ್ಲಿ ಒಂದು ಆದೇಶವನ್ನಷ್ಟೇ ಕೊಟ್ಟಿದ್ದ: ಗುರಿಯನ್ನು ಇಟ್ಟದ್ದು ಮತ್ತು ಬಂದೂಕಿನ ನಳಿಕೆಯನ್ನು ಎಳೆದದ್ದು ಗುರ್ಖಾ ರೆಜಿಮೆಂಟ್ ಮತ್ತು ಬಲೋಚ್ ರೈಫಲ್ಸ್.

ಆದರೆ ಹಾಗಿದ್ದರೂ, ಸೇವೆಯಲ್ಲಿರುವ ಎಲ್ಲಾ ಮರಣಗಳಿಗೂ ನಮ್ಮ ಗೌರವ ಮತ್ತು ನಮ್ಮ ಮೆಚ್ಚುಗೆಯ ಅಗತ್ಯವಿದೆ. ಮತ್ತು ನಮ್ಮ ಸೈನಿಕರಿಗೂ ಸಹ ಇದು ಅನ್ವಯವಾಗುತ್ತದೆ. ಆದರೆ ಅವರಂತೆಯೇ ನಮ್ಮಲ್ಲಿ ಇನ್ನೂ ಕೆಲವರು ದೇಶಕ್ಕಾಗಿ ಉದ್ದೇಶಪೂರ್ವಕವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ, ವೌನವಾಗಿ ಮತ್ತು ಯಾವುದೇ ಗುರುತುಗಳಿಲ್ಲದೆಯೂ ಸಹ.

Writer - ಆಕಾರ್ ಪಟೇಲ್

contributor

Editor - ಆಕಾರ್ ಪಟೇಲ್

contributor

Similar News