ನನ್ನನ್ನು ನೋಡಿದಾಗ ನಿಮಗೆ ಏನನ್ನಿಸುತ್ತದೆ ?
Update: 2016-02-28 22:58 IST
ನನ್ನನ್ನು ನೋಡಿದಾಗ ಧಾರ್ಮಿಕ ನಂಬಿಕೆ ಇರುವ ಒಬ್ಬ ಸುಶಿಕ್ಷಿತ ಮಹಿಳೆ , ಒಬ್ಬ ತಾಯಿ ಅಥವಾ ಒಬ್ಬ ಸೋದರಿಯಾಗಿ ಕಾಣುತ್ತೀನಾ ? ಅಲ್ಲ, ನಾನೊಬ್ಬ ದಮನಿತ, ಬ್ರೈನ್ ವಾಶ್ ಗೊಳಗಾಗಿರುವ ಸಂಭಾವ್ಯ ಭಯೋತ್ಪಾದಕಿಯಂತೆ ಕಾಣುತ್ತೀನಾ ? ನಾನು ಇಸ್ಲಾಮ್ ಧರ್ಮದ ಕುರುಡು ಅನುಯಾಯಿ ಅಲ್ಲ . ನನಗೆ ಅದು ಸರಿ ಎಂದು ಸಂಪೂರ್ಣವಾಗಿ ಮನವರಿಕೆಯಾದ ಮೇಲೆಯೇ ನಾನದನ್ನು ಒಪ್ಪಿಕೊಂಡೆ ಎಂದು ಹೇಳುವ ಲೇಖಕಿ, ಸಮಾಲೋಚಕಿ ದಾಲಿಆ ಮೊಗಾಹೆದ್ ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ಮಾಧ್ಯಮಗಳು ಪೂರ್ವಗೃಹ ಪೀಡಿತವಾಗಿ ರೂಪಿಸಿರುವ ಅಭಿಪ್ರಾಯಗಳನ್ನು ಬಿಟ್ಟು ಮುಕ್ತ ಮನಸ್ಸಿನಿಂದ ನೋಡಿ ಎಂದು ಮನಮುಟ್ಟುವಂತೆ ಮಾತನಾಡಿದ್ದಾರೆ ಈ ಭಾಷಣದಲ್ಲಿ.
courtesy : www.ted.com