×
Ad

ಅನಂತ್ ಕುಮಾರ್ ಹೆಗಡೆ ಮೂಲಕ ಬೆಳಕಿಗೆ ಬಂದ ಆರೆಸ್ಸೆಸ್ ನ ರಹಸ್ಯ ಅಜೆಂಡಾ: ಅನೀಸ್ ಕೌಸರಿ

Update: 2016-02-29 14:56 IST

ಬೆಂಗಳೂರು: ಓರ್ವ ಜನಪ್ರತಿನಿಧಿಯಾಗಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಾ ಕೋಮು ಹಿಂಸೆಗೆ ಪ್ರಚೋದನೆ ನೀಡುತ್ತಿರುವ  ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಸಂಸದರ ಮಾತು ಸಂಘ ಪರಿವಾರಗಳ ಒಳ ಅಜೆಂಡಾವನ್ನು ಪ್ರತಿಧ್ವನಿಸುತ್ತಿದ್ದು, ಭವಿಷ್ಯದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

 ಭಯೋತ್ಪಾದನೆಯೊಂದಿಗೆ ಧರ್ಮವನ್ನು ಸಮೀಕರಿಸಬೇಡಿ ಎಂದು ಸ್ವತಃ ಪ್ರಧಾನಿಯವರು ಹೇಳಿಕೆ ನೀಡುತ್ತಿರುವಾಗ  ಅದಕ್ಕೆ ತದ್ವಿರುದ್ಧವಾಗಿ ಆಡಳಿತ ಪಕ್ಷದ ಸಂಸದರೇ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಚುನಾಯಿತ ಸರಕಾರದ ಘನತೆಯನ್ನೇ ಪ್ರಶ್ನಿಸಿದಂತಿದೆ. ಶಾಂತಿ ಸಹನೆ ಸಹಬಾಳ್ವೆಯನ್ನು ಜಗತ್ತಿಗೆ ಕಲಿಸಿದ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಈ ದೇಶದ ಕೋಟ್ಯಾಂತರ ದೇಶಪ್ರೇಮಿ ಮುಸ್ಲಿಮರಿಗೆ ನೋವುಂಟು ಮಾಡಿದೆ. ಆದ್ದರಿಂದ ಅವರು ದೇಶದ ಜನರ ಕ್ಷಮೆ ಯಾಚಿಸಬೇಕೆಂದು ಅನೀಸ್ ಕೌಸರಿ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News