×
Ad

ಬೆಂಕಿ ಹಚ್ಚಿ ವ್ಯಕ್ತಿ ಆತ್ಮಹತ್ಯೆ

Update: 2016-03-01 23:45 IST

ಮೈಸೂರು, ಮಾ.1: ಬೇಕರಿ ವ್ಯಾಪಾರಿ ಒಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಮುಂಜಾನೆ ಮೈಸೂರು ನಗರದಲ್ಲಿ ಜರಗಿದೆ.

ನಗರದ ಕುವೆಂಪು ಕೆ ಬ್ಲಾಕ್‌ನ ನಿವಾಸಿ ರಘುನಾಥ್ (57) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.ುವೆಂಪು ನಗರದ ಬಿಜಿಎಸ್ ಹೈಸ್ಕೂಲ್ ಆವರಣದಲ್ಲಿ ಬೇಕರಿಯೊಂದನ್ನು ನಡೆಸುತ್ತಿದ್ದ ಅವರು, ಮಂಗಳವಾರ ಮುಂಜಾನೆ ಬೇಕರಿ ಪಕ್ಕದಲ್ಲಿರುವ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುತ್ರ ಮಾಡಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದೆ ರಘುನಾಥ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶೋಕಪುರಂ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News