ಅಪರಿಚಿತ ಶವ ಪತ್ತೆ
Update: 2016-03-01 23:46 IST
ರಾಮನಗರ, ಮಾ.1: ತಾಲೂಕಿನ ಕಾಕರಾಮನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಶವ ಗುರುತು ಸಿಗದ ರೀತಿಯಲ್ಲಿದ್ದು, ಬೇರೆ ಕಡೆ ಕೊಲೆ ಮಾಡಿ ಶವಕ್ಕೆ ಇಲ್ಲಿ ಬೆಂಕಿ ಇಟ್ಟಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.