ಕಸಾಪ ಚುನಾವಣೆಯಲ್ಲಿ ಭ್ರಷ್ಟಾಚಾರ: ಕೆ.ರಾಜು ಆರೋಪ
Update: 2016-03-02 23:53 IST
ಮೈಸೂರು, ಮಾ.2: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭ್ರಷ್ಟಾಚಾರದ ಗೂಡಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮತದಾರರಿಗೆ ಹಣ ಹಾಗೂ ಮದ್ಯದ ಆಮಿಷವನ್ನು ಒಡ್ಡಲಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆಯಲ್ಲಿ ಪ್ರತಿಸ್ಪರ್ಗಳು ತಮ್ಮನ್ನು ಸೋಲಿಸಲು ಇಲ್ಲ ಸಲ್ಲದ ವಾಮಾ ಮಾರ್ಗವನ್ನು ಅನುಸರಿಸಿದ್ದರು. ವೈ.ಡಿ.ರಾಜಣ್ಣ ಅವರ ಗೆಲುವು ನ್ಯಾಯಯುತವಾದುದಲ್ಲ. ಗ್ರಾಮೀಣ ಭಾಗದ ಕಸಾಪ ಮತದಾರರಿಗೆ ಹಣ, ಹೆಂಡವನ್ನು ಹಂಚುವ ಮೂಲಕ ಗೆಲುವು ಸಾಸಿದ್ದಾರೆ ಎಂದು ದೂರಿದರು. ಇತ್ತೀಚೆಗೆ ನಡೆದ ಕಸಾಪ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಕೂಡಲೇ ಸರಕಾರ ಹಾಗೂ ಚುನಾವಣಾ ಆಯೋಗ ಈ ಕುರಿತು ತನಿಖೆ ನಡೆಸಬೇಕು. ಈ ಮೂಲಕ ಕಸಾಪವನ್ನು ಭ್ರಷ್ಟಾಚಾರ ಮುಕ್ತ ಪರಿಷತ್ತನ್ನಾಗಿ ಮಾಡಬೇಕಿದೆ ಎಂದರು.