×
Ad

ಮತ್ತೆ ಸಂಕಷ್ಟದಲ್ಲಿ ಪಾಲ್ಕನ್ ಕಾರ್ಮಿಕರು

Update: 2016-03-02 23:58 IST

ಬೇಡಿಕೆ ಈಡೇರಿಕೆಗೆ ಒತ್ತಾಯ; ಕಾರ್ಮಿಕರಿಂದ ಆತ್ಮಹತ್ಯೆಗೆ ಯತ್ನ
ಮೈಸೂರು, ಮಾ.2: ನೂರು ದಿನಗಳ ನಿರಂತರ ಹೋರಾಟದ ಬಳಿಕೆ ಪುನರಾರಂಭ ಕಂಡ ಪ್ರತಿಷ್ಠಿತ ಪಾಲ್ಕನ್ ಟಯರ್ಸ್‌ ಕಾರ್ಖಾನೆ ಮತ್ತೆ ಸುದ್ದಿ ಮಾಡಿದೆ. ಬಹು ಆಶಯಗಳೊಂದಿಗೆ ಕಾರ್ಖಾನೆ ಆರಂಭ ಕಂಡರೂ, ಕಾರ್ಮಿಕರ ಬದುಕು ಹಸನಾಗುವ ಯಾವ ಸೂಚನೆಯೂ ಇಲ್ಲ. ಪರಿಣಾಮ ಮತ್ತೆ ಪ್ರತಿಭಟನೆಯ ಹಾದಿ ಹಿಡಿದಿರುವ ಪಾಲ್ಕನ್ ಟಯರ್ಸ್‌ ಕಾರ್ಮಿಕರು, ಆತ್ಮಹತ್ಯೆಗೂ ಯತ್ನಿಸಿದ್ದಾರೆ.

ಬುಧವಾರ ನಗರದ ಕೆ.ಆರ್.ಎಸ್ ರಸ್ತೆಯಲ್ಲಿರುವ ಪಾಲ್ಕನ್ ಟಯರ್ಸ್‌ ಮುಂಭಾಗ ಪ್ರತಿಭಟನೆ ನಡೆಸಿ ರಿಂಗ್ ರೋಡ್ ವರೆಗೂ ಮೆರವಣಿಗೆ ನಡೆಸಿದ ಕಾರ್ಮಿಕರು, ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಕೆಲ ಕಾರ್ಮಿಕರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ಳೆದ 6 ತಿಂಗಳ ಹಿಂದೆ ಪುನರಾರಂಭ ಕಂಡ ಪಾಲ್ಕನ್ ಟಯರ್ಸ್‌ ಕಾರ್ಖಾನೆಯಲ್ಲಿ ದುಡಿಯುವ ವರ್ಗಗಳಿಗೆ ವೇತನ ತಡೆ ಹಿಡಿಯಲಾಗಿದ್ದು, ಉತ್ಪಾದನೆಯನ್ನೂ ಸ್ಥಗಿತಗೊಳಿಸಿ ಕಾರ್ಖಾನೆಯನ್ನು ಅವನತಿಗೆ ಕೊಂಡೊಯ್ಯಲಾಗಿದ್ದು, ಕಾರ್ಮಿಕರ ಪಾಡು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.ಾರ್ಮಿಕರ ಬಗ್ಗೆ ಮೊಸಳೆ ಕಣ್ಣೀರಿಟ್ಟು ಕಾರ್ಖಾನೆಯನ್ನು ಪುನರಾರಂಭಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಪವನ್ ಕುಮಾರ್ ರೂಹಿಯಾ, ಇದೀಗ ಕಾರ್ಮಿಕರಿಗೆ ಬರಬೇಕಾದ ವೇತನ ತಡೆ ಹಿಡಿದು, ಉತ್ಪಾದನೆಯನ್ನೂ ಸ್ತಗಿತಗೊಳಿಸಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾ ನಿರತ ಕಾರ್ಮಿಕರು ಸರಕಾರ ಮತ್ತು ಆಡಳಿತ ಮಂಡಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ದೇ ಸಂದರ್ಭದಲ್ಲಿ ಕಾರ್ಮಿಕ ಅಬ್ದುಲ್ ಕಲೀಂ ಮತ್ತು ಧರಣೀಶಯ್ಯ ಎಂಬವರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ಜರಗಿತು. ಇದರಿಂದ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಈ ಇಬ್ಬರನ್ನು ತಡೆದ ಸಹದ್ಯೋಗಿಗಳು ಮತ್ತು ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕರನ್ನು ತಮ್ಮ ವಶಕ್ಕೆ ಪಡೆದರು. ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡ ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕ ಅಬ್ದುಲ್ ಕಲೀಂ, ಕಳೆದ 30 ವರ್ಷಗಳಿಂದ ಪಾಲ್ಕನ್ ಟಯರ್ಸ್‌ ಕಾರ್ಖಾನೆಯಲ್ಲಿ ದುಡಿಯುತ್ತಿದ್ದು, ಈಗಾಗಲೇ ವಯಸ್ಸಾಗಿದೆ. ಒಂದು ವೇಳೆ ಕಾರ್ಖಾನೆ ಮುಚ್ಚಿದರೆ, ಬೇರೆ ಎಲ್ಲೂ ಕೆಲಸ ಸಿಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಸಂಸಾರವನ್ನು ನೀಗಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News