ನಕಲಿ ದೇಶಭಕ್ತರೆಡೆಯಲ್ಲಿ ಭವಿಷ್ಯದ ಆಶಾಕಿರಣ- ಕಣ್ಣಯ್ಯ
ಸದಾ ನಕಲಿ ದೇಶಭಕ್ತರಿಂದ ದೇಶಪ್ರೇಮದ ಪಾಠವನ್ನು ಕೇಳಿ ಕೇಳಿ ರೋಸಿ ಹೋಗಿದ್ದ ದೇಶಕ್ಕೆ ಹಾಗೂ ದೇಶದ ಆಡಳಿತ ಶಕ್ತಿಗಳಿಗೆ ಜನತೆಯಿಂದ ಆರಿಸಲ್ಪಟ್ಟ ವಿರೋದಪಕ್ಷಗಳಿಗಿಂತ ಒಂದು ಸಮರ್ಥ ವಿರೋಧಪಕ್ಷವಾಗಿ ಜೆಎನ್ ಯು ವಿದ್ಯಾರ್ಥಿಗಳು ಮೂಡುತ್ತಿದ್ದಾರೆ, " ಭಾರತದಿಂದ ನಮಗೆ ಸ್ವಾತಂತ್ರ್ಯ ಬೇಡ ಭಾರತದಲ್ಲಿ ಮನುವಾದ,ಜಾತೀಯತೆ,ಅಸ್ಪ್ಯಶ್ಯತೆ ಸಂಘಪರಿವಾರದ ಅನೈತಿಕ ಗೂಂಡಾಗಿರಿ, ಬಂಡವಾಳಶಾಹಿ ಗಳಿಂದ ನಮಗೆ ಸ್ವಾತಂತ್ರ್ಯ ಬೇಕು " ಎಂದು ಭಾಷಣ ಮಾಡಿದ.
" ಕಣ್ಣಯ್ಯ" ಎಂಬ ವಿದ್ಯಾರ್ಥಿ ಈಗ ದೇಶದ ಗಮನ ಸೆಳೆದಿದ್ದಾನೆ. ನಕಲಿ ಭಕ್ತರ ನಕಲಿ ದೇಶದ್ರೋಹದ ಆರೋಪಕ್ಕೆ ಒಳಗಾಗಿ ಅಕ್ರಮ ಬಂಧನಕ್ಕೊಳಗಾಗಿ ದೇಶದ ಜನತೆಯಿಂದ ಭಾರಿ ಬೆಂಬಲ ಪಡೆದು ಜಾಮೀನು ಪಡೆದು ಬಂದು ಕಣ್ಣಯ್ಯ ಮಾಡಿರುವ ಭಾಷಣ ದೇಶದಲ್ಲಿ ಓರ್ವ ಯುವ ನಾಯಕನ ನ್ನು ದೇಶಕ್ಕೆ ಪರಿಚಯಿಸಿದಂತಾಗಿದೆ. ಲೋಹಿಯಾ ಚಳವಳಿ ಹೇಗೆ ದೇಶದಲ್ಲಿ ಒಂದು ಬದಲಾವಣೆಗೆ ಕಾರಣವಾಯಿತೋ ಹಾಗೆಯೇ ಕಣ್ಣಯ್ಯ, ಉಮರ್ ಖಾಲಿದ್, ಅನಿರ್ಬಣ್ ಹಾಗೂ ಜೆಏನ್ ಯುಹಾಗೂ ದೇಶದ ಇತರ ವಿದ್ಯಾರ್ಥಿ ಶಕ್ತಿಗಳ ಈ ಚಳವಳಿಯು ದೇಶದ ಸರಕಾರದ ಜನವಿರೋದಿ ನೀತಿಯ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಯ ವಿರುದ್ದ ಒಂದು ಸಮರ್ಪಕವಾದ ಚಳುವಳಿಯಾಗಳಿದೆ. ಭಾರತದ ಸಮಕಾಲೀನ ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಸಂಘಪರಿವಾರ, ಮನುವಾದಿ, ಧಾರ್ಮಿಕ ಮೂಲಭೂತವಾದಿ, ಜಾತೀಯತೆ ಮುಂತಾದ ಶಕ್ತಿಗಳಿಂದ ಎದುರಿಸುತ್ತಿರುವ ಜನವಿರೋದಿ ಕ್ರತ್ಯಗಳು ಅಸಹಿಷ್ಣುತೆಯ ಕರಿಛಾಯೆ ಇವುಗಳೆಲ್ಲದರ ವಿರುದ್ಧವಾಗಿ "ಕಣ್ಣಯ್ಯ" ಶೋಷಿತ ವರ್ಗಗಳ ಪ್ರತಿನಿಧಿಯಂತೆ ಕಾಣುತ್ತಾನೆ.