ರಾಷ್ಟ್ರಪತಿಯ ಮಗ ಮತ್ತು ಕೂಲಿಯವನ ಮಗ ಒಂದೇ ಶಾಲೆಯಲ್ಲಿ ಓದುವಂತಾಗಲಿ
ಕನ್ಹಯ್ಯಾ ಮೇಲೆ ನಾವು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಿನ ಬೆಳವಣಿಗೆ ನಡೆದು ಹೋಗಿದೆ.. ನಿರೀಕ್ಷೆಗೂ ಮೀರಿ ಬೆಂಬಲ ಅವರಿಂದ ನಿರೀಕ್ಷೆ ಅನ್ನುವುದಕ್ಕಿಂತಲೂ ಹಲವಾರು ವಿಚಾರಗಳನ್ನು ದೇಶವೇ ತಿಳಿದುಕೊಂಡಿದೆ.. ಹೌದು ನಮಗೆ ಸ್ವಾತಂತ್ರ್ಯ ಬೇಕು.. ದೇಶದೊಳಗೆ ಸ್ವಾತಂತ್ರ್ಯ ಬೇಕು.. ಅಸಮಾನತೆಯಿಂದ ಸ್ವಾತಂತ್ರ್ಯ ಬೇಕು.. ಜಾತಿವಾದದಿಂದ ಸ್ವಾತಂತ್ರ್ಯ ಬೇಕು.. ಅದಕ್ಕಾಗಿ ಎಲ್ಲರೂ ಒಂದಾಗಬೇಕು ನಕಲಿ ದೇಶಭಕ್ತರ ಬಣ್ಣ ಬಯಲಾಗಬೇಕು... ರಾಷ್ಟ್ರಪತಿ ಮಗ ಹಾಗೂ ಕೂಲಿಯವನ ಮಗ ಒಂದೇ ಶಾಲೆಯಲ್ಲಿ ಕಲಿಯುವಂತಾಗಬೇಕು ಖಾಸಗೀಕರಣ ನಿಲ್ಲಬೇಕು ಶಿಕ್ಷಣ ಬಡವನ ಕೈಗೆಟುಕಬೇಕು.. ಕನ್ಹಯ್ಯಾ, ರೋಹಿತ್ ವೇಮುಲಾ ಲಾಲ್ ಸಲಾಮ್, ಜೈ ಭೀಮ್ ಒಟ್ಟಾಗಿಸಿದ್ದಾರೆ ಸ್ವಾತಂತ್ರ್ಯದ ಹೊಸ ಭರವಸೆ ದೇಶದಲ್ಲಿ ಹುಟ್ಟಿಕೊಂಡಿದೆ.. ಖಾಸಗಿ ಲಾಬಿಗೆ ಮಣಿದು ಸರಕಾರಿ ಕ್ಷೇತ್ರವನ್ನು ಮುಚ್ಚಿ ಹಾಕುವ ಹುನ್ನಾರ ಕೊನೆಗೊಳಿಸಬೇಕು..
ಕನ್ಹಯ್ಯಾ ಹೋರಾಟ ಮುಂದುವರೀಬೇಕು ದೇಶದೊಳಗಿನ ಸ್ವಾತಂತ್ರ್ಯಕ್ಕಾಗಿ , ಬಡವರ, ದಲಿತರ ಪರವಾಗಿ. ಖಾಸಗೀಕರಣ, ಕೋಮುವಾದ, ಕೇಸರೀಕರಣದ ವಿರುದ್ಧವಾಗಿ.. ಅವರ ಮೇಲೆ ನಿರೀಕ್ಷೆ ಅನ್ನುವುದಕ್ಕಿಂತಲೂ ವಿಶ್ವಾಸ ಹೆಚ್ಚಾಗಿದೆ.. JNU ಹೊಸ ಇತಿಹಾಸ ನಿರ್ಮಿಸಿದೆ ವಿಶ್ವದ ಗಮನ ತನ್ನತ್ತ ಸೆಳೆದಿದೆ.. ಲಾಭದ ಉದ್ದೇಶದಿಂದ ಅಲ್ಲ ಬದಲಾವಣೆಯ ಉದ್ದೇಶ.. ಇದೆಲ್ಲಾ ಮುಂದುವರಿಯಬೇಕು ನಾವದರಲ್ಲಿ ಪಾಲ್ಗೊಳ್ಳಬೇಕೆಂಬ ಬಯಕೆ..