ಕನ್ಹಯ್ಯಾ ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಾಗದಿರಲಿ..!
ಕ್ರಾಂತಿಕಾರಿ ಹೆಜ್ಜೆಯನ್ನು ಇಡುವುದರ ಮೂಲಕ ಕ್ರಾಂತಿಕಾರಿ ಹೋರಾಟಕ್ಕೆ,ಅಸತ್ಯದ ವಿರುದ್ಧದ ಕೂಗಿಗೆ ಹೊಸ ಭಾಷ್ಯವನ್ನು ಬರೆದ ಕನ್ಹಯ್ಯಾ ಆಡಿದ " ದೇಶದಿಂದ ನಮಗೆ ಸ್ವಾತಂತ್ರ್ಯ ಬೇಡ, ದೇಶದೊಳಗೆ ನಮಗೆ ಸ್ವಾತಂತ್ರ್ಯ ಬೇಕು " ಅನ್ನುವ ಭಾಷಣವು ಅಸಂಖ್ಯಾತ ಭಾರತೀಯರ ಮನವನ್ನು ತಟ್ಟುವಂತೆ ಮಾಡಿದೆ.
ಇಲ್ಲಿನ ಸಂಘಪರಿವಾರದ ವ್ಯವಸ್ಥಿತವಾದ ಷಡ್ಯಂತ್ರದ ಭಾಗವಾಗಿರುತ್ತದೆ ಕನ್ಹಯ್ಯಾ ದೇಶದ್ರೋಹಿಯಾಗಿ ಚಿತ್ರೀಕರಿಸಲ್ಪಡಲು ಕಾರಣ.ಸುಳ್ಳನ್ನು ಸತ್ಯವಾಗಿ ಬಿಂಬಿಸಿ ಅಧರ್ಮದ ಮೂಲಕ ಸತ್ಯ,ನ್ಯಾಯವನ್ನು ಸಾಯಿಸುವ ಸಂಘಪರಿವಾರದ ಕುತಂತ್ರಕ್ಕೆ ಬಲಿಪಶುವಾದ ಕನ್ಹಯ್ಯಾರಿಗೆ ದೇಶದ ಅಸಂಖ್ಯಾತ ಜನರು ಬೆಂಬಲವಾಗಿ ನಿಂತರು.ತನ್ನ ಹೋರಾಟದ ಕಿಚ್ಚನ್ನು ಇನ್ನಷ್ಟು ವಿಸ್ತರಿಸಬೇಕು.ಒಂದು ಸಮುದಾಯ,ಒಂದು ವರ್ಗವನ್ನು ಭಯೋತ್ಪಾದಕರಾಗಿಯೂ,ದೇಶದ್ರೋಹಿಗಳಾಗಿಯೂ ಚಿತ್ರೀಕರಿಸಿ ಅವರೊಳಗಿನ ಹೋರಾಟ,ಅಸ್ತಿತ್ವದ ಶಕ್ತಿಯನ್ನು ಇಲ್ಲವಾಗಿಸುವ ಸಂಘಪರಿವಾರದ ನೀಚ ವ್ಯವಸ್ಥೆಯನ್ನು ಇಲ್ಲವಾಗಿಸಬೇಕಾಗಿರುವುದು ಕಾಲಸಂದರ್ಭದ ಅನಿವಾರ್ಯವಾಗಿದೆ.
ಕನ್ಹಯ್ಯಾನಾಗಿ ಮಾತ್ರ ಗುರುತಿಸುತ್ತಿದ್ದ ಬಿಹಾರದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕನ್ಹಯ್ಯಾ ಇಂದು ಕೇವಲ ಒಬ್ಬ ಕನ್ಹಯ್ಯಾನಾಗಿ ಮಾತ್ರ ಉಳಿದಿಲ್ಲ.ದೇಶದ ಒಂದು ಶಕ್ತಿಯಾಗಿ ಬದಲಾಗಿಬಿಟ್ಟಿದ್ದಾನೆ,ಅದಲ್ಲದೆ ಸಹಸ್ರ ಸಂಖ್ಯೆಯ ಜನರ ಮನದಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚುವಂತೆ ಮಾಡಿ,ಯುವ ಸಮುದಾಯದ ಪಾಲಿನ ತಾರೆಯಾಗಿ ಮಾರ್ಪಾಡಾಗಿದ್ದಾನೆ.
ಅದೆಷ್ಟೋ ಹೋರಾಟಗಾರರನ್ನು ಕಂಡಂತಹ ದೇಶದಲ್ಲಿ ಕಾಲಕ್ರಮೇಣ ಅವರು ಒಂದು ವರ್ಗದ ಅಥವಾ ಒಂದು ರಾಜಕೀಯ ಪಕ್ಷದ ಕೈಗೊಂಬೆಗಳಾಗಿ ತಮ್ಮ ಹೋರಾಟವನ್ನು ಒಂದು ಪಕ್ಷದ ಧ್ವಜದಡಿಗೆ ಮಾತ್ರ ಸೀಮಿತಗೊಳಿಸಿದ್ದಾರೆ.ಕನ್ಹಯ್ಯಾ ಅಂತವರ ಸಾಲಿಗೆ ಸೇರದಂತಾಗಲಿ.ಇಡೀ ದೇಶ ಈ ಯುವಕನಿಂದ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ,ಅಸತ್ಯ, ಅಧರ್ಮ ದ ವಿರುದ್ಧದ ಹೋರಾಟ ಮುಂದುವರಿಸುತ್ತಾ, ತನ್ನ ಕ್ರಾಂತಿಕಾರಿ ಹೋರಾಟವನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವಂತಾಗಲಿ ಎಂದು ಆಶಿಸೋಣ.