ಹೋರಾಟದ ಕಿಚ್ಚನ್ನು ಹೊತ್ತಿಸಿ ಹೊರಬಂದ ಕನ್ಹಯ್ಯ
ಕನ್ಹಯ್ಯ ಜಾಮೀನಿನೊಂದಿಗೆ ಬಿಡುಗಡೆಗೊಂಡು ಸಂಘ ಪರಿವಾರಕ್ಕೆ ಭಾರಿ ಮುಜುಗರದೊಂದಿಗೆ ಭಾರತದ ಭವ್ಯ ಭವಿಷ್ಯದ ಸಂದೇಶವನ್ನು ರವಾನಿಸಿದ್ದಾರೆ. ಸತ್ಯದ ಮೇಲೆ ಎಷ್ಟೇ ಪರದೆಗಳನ್ನು ಮುಚ್ಚಿದರೂ ಸತ್ಯ ಸುಳ್ಳನ್ನು ಸರ್ವ ನಾಶ ಮಾಡಿ ನೆಲೆ ನಿಲ್ಲಲಿದೆ ಎಂಬುದನ್ನು ಸಾಬೀತು ಪಡಿಸಿದೆ. ಕನ್ನಯ್ಯರ ಮೇಲೆ ಈ ಭಾರತದ ಯುವ ತಲೆಮಾರು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ ಅದನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಾದ ಮತ್ತು ಯಾವ ದೌರ್ಜನ್ಯದಿಂದ ಕನ್ಹಯ್ಯ ಸ್ವಾತಂತ್ರ್ಯಕ್ಕಾಗಿ ಕೂಗನ್ನು ಎಬ್ಬಿಸಿದ್ದರೂ ಆ ಕೂಗಿನ ಆಶಯವನ್ನು ಪೂರ್ಣಗೊಳಿಸಲು ಯುವ ತಲೆಮಾರಿಗೆ ಧ್ವನಿಯಾಗಬೇಕಾದ ದೊಡ್ಡ ಜವಾಬ್ದಾರಿ ಅವರ ಹೆಗಲ ಮೇಲಿದೆ ಮತ್ತು ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸಲೇ ಬೇಕಾಗಿದೆ. ಸಂಘಪರಿವಾರ ಹಲವಾರು ವಿಧಾನದಲ್ಲಿ ಇಲ್ಲಿನ ದಲಿತರನ್ನು, ಅಲ್ಪಸಂಖ್ಯಾತರನ್ನು, ಆದಿವಾಸಿಗಳನ್ನು ಶೋಷಿಸಲು ಪ್ರಯತ್ನಿಸಿದೆ ಹಾಗೂ ಕೆಲವು ಕಡೆ ಅತೀ ಕ್ರೂರವಾಗಿ ದೌರ್ಜನ್ಯ ಎಸಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಇಂತಹ ಅನ್ಯಾಯದ ವಿರುದ್ಧ ಧ್ವನಿಯೆತ್ತಲು, ಸಂವಿಧಾನ ಬದ್ದವಾದ ಹಕ್ಕನ್ನು ಮರಳಿ ಪಡೆಯಲು ಇಂದು ಕನ್ಹಯ್ಯ ಮತ್ತು JNU ನ ವಿದ್ಯಾರ್ಥಿಗಳು ನಮಗೊಂದು ದಾರಿ ತೋರಿದ್ದಾರೆ. ಆ ದಾರಿಯನ್ನು ಅನುಸರಿಸಿ ಈ ದೇಶದ ಬಡ ರೈತರ, ಅನ್ಯಾಯಕ್ಕೊಳಗಾದವರ, ಮರ್ದಿತರ, ಮಾನವ ಹಕ್ಕುಗಳಿಂದ ವಂಚಿತರಾದವರ, ಅನ್ಯಾಯವಾಗಿ ಮಾಡದ ತಪ್ಪಿಗೆ ಜೈಲಿನಲ್ಲಿ ಕೊಳೆಯುತ್ತಿರುವ ನಿರಪರಾಧಿಗಳ ಧ್ವನಿಯಾಗಬೇಕಾದ ತುರ್ತು ಪರಿಸ್ಥಿತಿಯನ್ನು ಕನ್ಹಯ್ಯ ನಮಗೆ ನೆನಪಿಸಿದ್ದಾರೆ.
ಒರ್ವ ಕನ್ಹಯ್ಯನನ್ನು ಬಂಧಿಸಿದರೆ, ಏನಾಯಿತು ಪ್ರತಿಯೊಂದು ಮನೆಯಿಂದ ಕನ್ನಯ್ಯ ಹೊರಬರುವ ಸಮಯ ಇದಾಗಬೇಕಾಗಿದೆ.