ಮಂಗಳೂರು: ಕರಾವಳಿ ಉತ್ಸವ: ಮಾರ್ಚ್ 13ವರೆಗೆ ವಿಸ್ತರಣೆ
Update: 2016-03-06 21:09 IST
ಮಂಗಳೂರು, ಮಾ. 6: ದ.ಕ. ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಜನವರಿ 23ರಿಂದ ಮಾರ್ಚ್ 7ರವರೆಗೆ ಉತ್ಸವ ಮೈದಾನದಲ್ಲಿ ಹಮ್ಮಿಕೊಂಡಿರುವ ಕರಾವಳಿ ಉತ್ಸವವನ್ನು ಮಾರ್ಚ್ 13ರವರೆಗೆ ವಿಸ್ತರಿಸಲಾಗಿದೆ.ಕಳೆದ ಕೆಲವು ದಿನಗಳಿಂದ ಕರಾವಳಿ ಉತ್ಸವ ಮಳಿಗೆಗಳಿಗೆ ಭೇಟಿ ನೀಡುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಗ್ರಾಹಕರ ಅಪೇಕ್ಷೆಯ ಮೇರೆಗೆ ಉತ್ಸವವನ್ನು 6 ದಿನಗಳ ಕಾಲ ಹೆಚ್ಚುವರಿಯಾಗಿ ವಿಸ್ತರಿಸಲಾಗಿದೆ ಎಂದು ರೋಯಲ್ ಕಾರ್ನಿವಲ್ ಎಕ್ಸಿಬ್ಯೂಟ್‌ನ ಮುಷ್ತಾಕ್ ಅಹ್ಮದ್ ಹಾಗೂ ಮುಹಮ್ಮದ್ ಹಫೀಝ್ ತಿಳಿಸಿದ್ದಾರೆ.