×
Ad

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭ

Update: 2016-03-09 22:38 IST

ಬೆಂಗಳೂರು, ಮಾ.9: ನಾಳೆಯಿಂದ (ಮಾ.11) ಮಾ.28 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ರಾಜ್ಯದ 1,032 ಒಟ್ಟು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಅದರಲ್ಲಿ 206 ಸೂಕ್ಷ್ಮ, 73 ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಒಟ್ಟಾರೆಯಾಗಿ 3,29,187 ಬಾಲಕರು ಹಾಗೂ 3,10,846 ಬಾಲಕಿಯರು ಪರೀಕ್ಷೆಯನ್ನು ಬರೆಯಲಿದ್ದಾರೆ. ಇದಕ್ಕಾಗಿ ಪೂರ್ವ ಸಿದ್ಧತೆಯನ್ನು ಕೈಗೆತ್ತಿಕೊಂಡಿರುವ ಪರೀಕ್ಷಾ ಇಲಾಖೆ ತಾಲೂಕು ಮಟ್ಟದಲ್ಲಿ ವಿಶೇಷ ಜಾಗೃತ ದಳ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಜಾಗೃತದಳವನ್ನು ರಚಿಸಲಾಗಿದ್ದು, ಪ್ರತಿಯೊಂದು ಕೇಂದ್ರಕ್ಕೂ ಜಿಲ್ಲಾ ಮಟ್ಟದ ಅಧಿಕಾರಿಯನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ವೇಳಾಪಟ್ಟಿ: ಮಾ.11 ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್; ಮಾ.12 ಇತಿಹಾಸ, ಗಣಕ ವಿಜ್ಞಾನ; ಮಾ.14 ಭೂಗೋಳಶಾಸ್ತ್ರ, ಗಣಿತ; ಮಾ.15 ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್; ಮಾ.16 ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ; ಮಾ.17 ಮನಃಶಾಸ್ತ್ರ, ಭೌತಶಾಸ್ತ್ರ; ಮಾ.18 ತರ್ಕಶಾಸ್ತ್ರ, ಶಿಕ್ಷಣ; ಮಾ.19 ಐಚ್ಛಿಕ ಕನ್ನಡ, ಸಂಖ್ಯಾಶಾಸ್ತ್ರ, ಗೃಹವಿಜ್ಞಾನ; ಮಾ.21 ವ್ಯವಹಾರ ಅಧ್ಯಯನ, ರಾಸಾಯನ ಶಾಸ್ತ್ರ; ಮಾ.22 ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್; ಮಾ.23 ಹಿಂದಿ, ತೆಲುಗು; ಮಾ.24 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ; ಮಾ.26 ಇಂಗ್ಲಿಷ್; ಮಾ.28 ಕನ್ನಡ, ತಮಿಳು, ಮಳಯಾಳಂ, ಅರೆಬಿಕ್. ಪರೀಕ್ಷೆಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 12:15 ರವರೆಗೆ ನಡೆಯಲಿವೆ. ಹಾಗೂ ಮಾ.17 ರಂದು ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ಮಧ್ಯಾಹ್ನ 2 ರಿಂದ ಸಂಜೆ 5:15 ರವರೆಗೆ ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.

ಸಹಾಯವಾಣಿ ಪ್ರಾರಂಭ
ಬೆಂಗಳೂರು, ಮಾ. 9: ಇದೇ ತಿಂಗಳ 11ರಿಂದ ಆರಂಭಗೊಳ್ಳ ಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಸಂಬಂಧಿಸಿ ದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉದ್ಭವಿಸುವ ಸಂದೇಹ, ಸಂಶಯಗಳನ್ನು ನಿವಾರಿಸಲು ಮಾ.31ರ ವರೆಗೆ ಬೆಂ.ಗ್ರಾ.ಜಿಲ್ಲೆಯ ಉಪನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ.
 ಸಹಾಯವಾಣಿಯು ಬೆಳಗ್ಗೆ 9ರಿಂದ ರಾತ್ರಿ 9ಗಂಟೆಯವರೆಗೆ ತೆರೆದಿರುತ್ತದೆ. ದೂ.ಸಂಖ್ಯೆ: 080-2667 0615, 2667 0625ರ ಸಹಾಯವಾಣಿಗೆ ಕರೆಮಾಡಿ ವಿದ್ಯಾರ್ಥಿಗಳು, ಪೋಷಕರು ತಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News