ಶೌಚಾಲಯ ನಿರ್ಮಾಣ ಕಾರ್ಯ ನಿರೀಕ್ಷೆಯಂತೆ ನಡೆದಿಲ್ಲ: ಸುಭಾಷ್‌ಚಂದ್ರ
ಬೆಂಗಳೂರು, ಮಾ. 9: ಕರ್ನಾಟಕದ ಐದು ಜಿಲ್ಲೆಗಳಲ್ಲಿ ಹೊರತುಪಡಿಸಿದರೆ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣದ ಕಾರ್ಯ ನಿರೀಕ್ಷೆಯಂತೆ ನಡೆದಿಲ್ಲ ಎಂದು ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ದೂರಿದ್ದಾರೆ. ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕಮ್ಯುನಿಕೇಷನ್ ಾರ್ ಡೆವಲಪ್‌ಮೆಂಟ್ ಆಂಡ್ ಲರ್ನಿಂಗ್ (ಸಿಡಿಎಲ್) ಸಂಸ್ಥೆಯು ಆಯೋಜಿಸಿದ್ದ ನೈರ್ಮಲ್ಯ ವಿಷಯ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉಡುಪಿ, ಕೊಡಗು, ಮಂಡ್ಯ, ರಾಯಚೂರು ಮತ್ತು ಮಂಗಳೂರು ಜಿಲ್ಲೆಗಳು ನೈರ್ಮಲ್ಯ ಹಾಗೂ ಶೌಚಾಲಯ ನಿರ್ಮಾಣದಲ್ಲಿ ಸುಧಾರಣೆ ಕಂಡಿದ್ದು, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಮಾಧಾನ ಪ್ರಗತಿ ಸಾಧಿಸಿ ದರೆ, ಉಳಿದ ಎಲ್ಲ ಜಿಲ್ಲೆಗಳು ನೈರ್ಮಲ್ಯ ಕಾಪಾಡುವಲ್ಲಿ ವಿಲವಾಗಿದೆ ಎಂದು ಮಾಹಿತಿ ನೀಡಿದರು.
ಇಲಾಖೆಯು 2010-11ರಲ್ಲಿ ಸರ್ವೇ ಆಧಾರದ ಮೇಲೆ ಗ್ರಾಮೀಣ ಪ್ರದೇಶಗಳಲ್ಲಿ 55 ಲಕ್ಷಗ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಪ್ರಸ್ತುತ 21 ಲಕ್ಷ ಶೌಚಾಲಯ ಗಳನ್ನು ಕಟ್ಟಲಾಗಿದೆ. ಈ ಆರ್ಥಿಕ ವರ್ಷದಲ್ಲಿ 6.27 ಲಕ್ಷ ಶೌಚಾಲಯ ನಿರ್ಮಿಸಿದ್ದು, ಮಾ.31ರಒಳಗೆ 10 ಲಕ್ಷವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳ, ರಾಜಸ್ತಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಬಡತನ ಹಾಗೂ ಜನಸಂಖ್ಯೆ ಹೆಚ್ಚಿದ್ದರೂ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಿದ್ದಾರೆ. ಅಲ್ಲಿನ ಗ್ರಾಮೀಣ ಭಾಗದ ರೈತರು ತಮ್ಮ ಹಣದಿಂದ ಶೌಚಾಲಯ ನಿರ್ಮಿಸಿ, ಅನಂತರದಲ್ಲಿಯೇ ಸರಕಾರ ನೀಡುವ ಸಹಾಯಧನ ಪಡೆಯುತ್ತಾರೆ. ಅದೇ ರೀತಿ, ರಾಜ್ಯದ ಜನರು ನೈರ್ಮಲ್ಯದ ಮಹತ್ವವನ್ನು ಅರಿತುಕೊಂಡು ಶೌಚಾಲಯ ನಿರ್ಮಾಣ ಕಾರ್ಯಗಳಿಗೆ ಮುಂದಾಗಬೇಕಿದೆ ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಮಂಜುನಾಥ್ ನಾಯಕ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸರಕಾರವು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಒಂದು ಶೌಚಾಲಯ ನಿರ್ಮಾಣಕ್ಕೆ 12 ಸಾವಿರ ರೂ. ನೀಡಲಾಗುತ್ತಿದೆ. ಅದೇ ರೀತಿ, ಪರಿಶಿಷ್ಟ ಜಾತಿ-ಪಂಗಡದ ವರ್ಗದವರಿಗೆ 15 ಸಾವಿರಕ್ಕೆ ಏರಿಸಲಾಗಿದೆ. ಶೌಚಾಲಯ ನಿರ್ವಹಣೆಗೆ ನೀರಿನ ಕೊರತೆ ಕಂಡುಬರುತ್ತಿದ್ದು, ಇದಕ್ಕಾಗಿಯೇ 9 ಸಾವಿರ ಅಂಗನವಾಡಿ ಮತ್ತು ಶಾಲೆಗಳಲ್ಲಿರುವ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.