ದಾಖಲಾತಿ ಪರಿಶೀಲನೆ
Update: 2016-03-09 22:44 IST
ಬೆಂಗಳೂರು, ಮಾ. 9: ಲೋಕಸೇವಾ ಆಯೋಗವು ಮಾ.14 ಮತ್ತು ಮಾ.15ರಂದು ಬೆಳಗ್ಗೆ 9:30 ಮತ್ತು ಮಧ್ಯಾಹ್ನ 2:30ಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರ 121 ಹುದ್ದೆಗಳ ನೇಮಕಾತಿಗಳ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಆಯೋಗದ ಕೇಂದ್ರ ಕಚೇರಿ, ಉದ್ಯೋಗ ಸೌಧ, ಬೆಂಗಳೂರು ಇಲ್ಲಿ ನಡೆಸಲಾಗುವುದು.
ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಈಗಾಗಲೇ ಕಳು ಹಿಸಲಾಗಿದೆ. ಆಹ್ವಾನಿಸಲಾದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿದ್ದು, ವೆಬ್‌ಸೈಟ್ htpp://kpsc.kar.nic.in ನಲ್ಲಿ ಅರ್ಹತಾ ಪಟ್ಟಿ ನೋಡ ಬಹುದು. ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರ ತಲುಪದೇ ಇದ್ದಲ್ಲಿ ಮೂಲ ದಾಖಲಾತಿಗಳ ಪರಿಶೀಲನೆಯ ದಿನಾಂಕಕ್ಕೆ ಮುನ್ನ ಲೋಕಸೇವಾ ಆಯೋಗದ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು.