×
Ad

'ಲಂಕೇಶ್-81': 12ರಂದು ವಿಚಾರಗೋಷ್ಠಿ

Update: 2016-03-09 22:49 IST

ಬೆಂಗಳೂರು: ಹಿರಿಯ ಪತ್ರಕರ್ತ, "ಲೇಖಕ ಲಂ ಕೇಶ್-81" ಅವರ ನೆನಪು ಹಿನ್ನೆಲೆಯಲ್ಲಿ ಮಾ.12ರ ಶನಿವಾರ ಇಲ್ಲ್ಲಿನ ಸೈಂಟ್ ಜೊಸೆಫ್ಸ್ ಕಾಲೇಜಿನ ಕ್ಸೇವಿಯರ್ ಹಾಲ್‌ನಲ್ಲಿ ಱಸಮಾಕಾಲೀನ ಸಂದರ್ಭದಲ್ಲಿ "ಲಂಕೇಶ್ ಚಿಂತನೆ" ಗೋಷ್ಠಿಯನ್ನು ಏರ್ಪಡಿಸಲಾಗಿದೆ.
ಯುವ ಲೇಖಕ ಟಿ.ಕೆ.ದಯಾನಂದ ವಿಚಾರ ಮಂಡನೆ ಮಾಡಲಿದ್ದು, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಗೋಷ್ಠಿ ಆರಂಭವಾಗಲಿದೆ.
 ಱಆಝಾದಿ ಒಂದು ಚರ್ಚೆೞಕುರಿತು ಹೊಸದಿಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮುಖಂಡರಾದ ಶೆಹ್ಲಾ ರಶೀದ್, ಮೋಹಿತ್ ಪಾಂಡೆ, ಹೈದ್ರಾಬಾದ್‌ನ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸ್ಸೋಸಿಯೇಷನ್ ಉಮಾ ಮಹೇಶ್ವರ ರಾವ್, ಅನಂತನಾಯಕ್, ಸಂತೋಷ್, ಹರಿರಾಮ್, ಸರೋವರ ಬೆಂಕಿಕೆರೆ ಮಾತನಾಡಲಿದ್ದಾರೆ.
 ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಲೇಖಕ ನೂರ್ ಶ್ರೀಧರ್ ಮಾತನಾಡಲಿದ್ದು, ಅದೇ ದಿನ ಸಂಜೆ 7ಗಂಟೆಗೆ "ಮೈಥಿಲಿ"ಏಕವ್ಯಕ್ತಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಲಂಕೇಶ್ ಪತ್ರಿಕೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News