×
Ad

ಜನರ ಮನಸ್ಸು, ವಿಚಾರಗಳನ್ನು ಕೊಲ್ಲುವ ಕಾರ್ಯಕ್ರಮ

Update: 2016-03-10 22:45 IST

ಬೆಂಗಳೂರು, ಮಾ.10: ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಮುನಾ ತೀರ ದಲ್ಲಿ ಶುಕ್ರವಾರದಿಂದ ಮೂರು ದಿನ ಕಾಲ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯ ಕ್ರಮವನ್ನು ವಿರೋಧಿಸಿ ಪೀಪಲ್ ಸಾಲಿ ಡಾರಿಟಿ ಕನ್ಸರ್ನ್ಸ್ ಸಂಘಟನೆ ಇಂದು ನಗರದ ಪುರಭವನ ಮುಂಭಾಗ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಹಿರಿಯ ಚಿಂತಕ ಪ್ರೊ.ಜಿ.ಕೆ. ಗೋವಿಂದರಾವ್ ಮಾತನಾಡಿ, ಪರಿಸರ ದೃಷ್ಟಿಯಿಂದ ಈ ಕಾರ್ಯಕ್ರಮ ಅತ್ಯಂತ ಹಾನಿಕಾರಕ ಎಂದು ಹೇಳಿ ಹಸಿರು ನ್ಯಾಯ ಮಂಡಳಿ ಈಗಾಗಲೇ ಐದು ಕೋಟಿ ರೂ. ದಂಡ ವಿಧಿಸಿದೆ. ಈ ಕಾರ್ಯಕ್ರಮದಿಂದ ಜನತೆಗೆ ನಷ್ಟವೇ ವಿನಃ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ಗಡ್ಡ ಬಿಟ್ಟವರೆಲ್ಲರೂ ಗುರೂಜಿಗಳು ಆಗುವುದಿಲ್ಲ. ಇಂತಹವರನ್ನು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಗುರೂಜಿ ಎಂದು ಕರೆಸಿಕೊಳ್ಳುವವರನ್ನು ಮುಂದಿಟ್ಟುಕೊಂಡು ಇಂದು ಜನರ ಮನಸ್ಸು ಮತ್ತು ವಿಚಾರಗಳನ್ನು ಕೊಲ್ಲಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಈ ಕಾರ್ಯಕ್ರಮದಿಂದ ದೇಶದಲ್ಲಿ ಕೋಮುವಾದ ಇನ್ನಷ್ಟು ಪುಷ್ಟಿ ಪಡೆದುಕೊಳ್ಳಲಿದೆ ಎಂದು ಆರೋಪಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವು ದಾಗಿ ಒಪ್ಪಿಕೊಂಡಿದ್ದ ರಾಷ್ಟ್ರಪತಿಗಳು ಮತ್ತು ಪ್ರಧಾನಿಗಳು ಹಿಂದೆ ಸರಿಯುವ ಮೂಲಕ ಜನರಿಗೆ ಒಂದು ಉತ್ತಮವಾದ ಸಂದೇಶವನ್ನೇ ನೀಡಿದ್ದಾರೆ. ಘನ ನ್ಯಾಯಾ ಲಯ ಈಗಾಗಲೇ ದಂಡವನ್ನು ವಿಧಿಸಿದೆ. ಇದರಿಂದ ಕಾರ್ಯಕ್ರಮದ ಆಯೋಜಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಜನ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪಾಲ್ಗೊಳ್ಳದೆ ವಿರೋಧ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕಿ ಬಿ.ಟಿ.ಲಲಿತಾ ನಾಯಕ್, ರಾಷ್ಟ್ರ ರಕ್ಷಣೆಗೆ ಮತ್ತು ತುರ್ತು ಪರಿಸ್ಥಿತಿಗೆ ಸೀಮಿತವಾಗಿದ್ದ ಸೈನಿಕರನ್ನು ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೋ ಒಂದು ಧಾರ್ಮಿಕ ಗುಂಪಿಗೆ ಸೈನಿಕರನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಈ ಕಾರ್ಯಕ್ರಮದಿಂದ ಯಮುನಾ ನದಿಯ ಒಡಲು ವಿಷ ರಾಸಾಯನಿಕಗಳಿಂದ ಕಲುಷಿತಗೊಳ್ಳುವ ಸಂಭವವಿದೆ. ಇದರಿಂದ ಜೀವ ಸಂಕುಲಕ್ಕೆ ಮಾರಕವಾಗಲಿದೆ. ಆದುದರಿಂದ ಈ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಡೆಯದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಬೇಕು ಎಂದು ಒತ್ತಿ ಹೇಳಿದ ಅವರು, ಈ ಕಾರ್ಯ ಕ್ರಮದ ವಿರುದ್ಧ ಪ್ರಗತಿಪರ ಸಂಘಟನೆಗಳು ಸಂಘಟಿತರಾಗಬೇಕು ಎಂದರು.
ಪ್ರತಿಭಟನೆಯಲ್ಲಿ ಮಾನವನ ಹಕ್ಕುಗಳ ಹೋರಾಟಗಾರ ಟಿ.ನರಸಿಂಹಮೂರ್ತಿ, ಪೀಪಲ್ ಸಾಲಿಡಾರಿಟಿ ಕನ್ಸರ್ನ್ಸ್ ಅಧ್ಯಕ್ಷ ಜಗದೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News