×
Ad

ಕೆಎಸ್ಸಾರ್ಟಿಸಿಯಲ್ಲಿ ಕ್ರಿಯಾತ್ಮಕ ದರ ನಿಗದಿ

Update: 2016-03-11 22:58 IST

ಬೆಂಗಳೂರು, ಮಾ. 11: ಬಸ್‌ಗಳಲ್ಲಿ ಮೂರು ತಿಂಗಳ ಅವಧಿಗೆ ಕ್ರಿಯಾತ್ಮಕ ದರಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.
ಅವತಾರ್ ವ್ಯವಸ್ಥೆ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಒಂದು ಖಾಲಿ ಆಸನಗಳ ಲಭ್ಯತೆ ಹಾಗೂ ಎರಡು ಮುಂಗಡ ಕಾಯ್ದಿರಿಸುವಿಕೆ ಕಾಲಾವಧಿ ಆಧಾರದ ಮೇಲೆ ಪ್ರಯಾಣ ದರ ವಿಧಿಸಲು ನಿರ್ಧರಿಸಿದ್ದು, ಇದರಿಂದ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಶೇ.20 ರಷ್ಟು ಕಡಿಮೆ ದರಗಳಲ್ಲಿ ಆಸನಗಳು ಲಭ್ಯವಾಗಲಿದೆ.
ಬಸ್ಸುಗಳಲ್ಲಿ ಟಿಕೆಟ್ ಪಡೆದು ಪ್ರಯಾಣಿಸುವವರಿಗೆ ಮುಂಗಡ ಟಿಕೆಟ್ ಪಡೆದಿರುವ ಕೊನೆಯ ಟಿಕೆಟ್‌ನ ದರಗಳ ಸಮನಾಗಿ ಪ್ರಯಾಣದರವನ್ನು ವಿಧಿಸಲಾಗುವುದು. ಮೊದಲು ಪ್ರಯಾಣ ದರಗಳನ್ನು ಪ್ರಾಯೋಗಿಕವಾಗಿ ಬೆಂಗಳೂರು, ಪುಣೆ, ಮುಂಬೈ, ಶಿರಡಿ ಮತ್ತು ಪಣಜಿ ಮಾರ್ಗದ ಐರಾವತ ಕ್ಲಾಸ್ ಸೇರಿ ಇನ್ನಿತರ ಎಸಿ ಸ್ಲೀಪರ್ ಸಾರಿಗೆಗಳಲ್ಲಿ ಜಾರಿಗೊಳಿಸಲಾಗುವುದು.
ಗುಂಪು ಟಿಕೆಟ್ ರಿಯಾಯಿತಿ ಹಾಗೂ ವಾಪಸ್ಸು ಪ್ರಯಾಣದ ರಿಯಾಯಿತಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿರುವ ಕೆಎಸ್ಸಾರ್ಟಿಸಿ, ಪ್ರಯಾಣಿಕರು ತಮ್ಮ ಅನಿಸಿಕೆ ಮತ್ತು ಸಲಹೆಗಳನ್ನು ಇ-ಮೇಲ್ ಡಿಠಿಚ್ಟಃಠ್ಟಠ್ಚಿ.ಟ್ಟಜಗೆ ಕಳುಹಿಸಲು ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News