ಬಿಹಾರ : " ಮೋದಿ ಮೋದಿ " ಘೋಷಣೆ ನಿಲ್ಲಿಸಿದ ಪ್ರಧಾನಿ ಮೋದಿ
Update: 2016-03-12 17:26 IST
ಬಿಹಾರದ ಹಾಜಿಪುರದಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಬಿಹಾರ ಚುನಾವಣೆಯ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಹಾಗು ಮುಖ್ಯಮಂತ್ರಿ ನಿತೀಶ್ ಕುಮಾರ್ ಒಂದೇ ವೇದಿಕೆಯಲ್ಲಿದ್ದರು. ಮುಖ್ಯಮಂತ್ರಿ ಮಾತನಾಡುವಾಗ ಸಭಿಕರ ಒಂದು ಗುಂಪು " ಮೋದಿ, ಮೋದಿ " ಎಂದು ಒಂದೇ ಸಮನೆ ಘೋಷಣೆ ಕೂಗಲು ಪ್ರಾರಂಭಿಸಿತು. ತಕ್ಷಣ ಕುರ್ಚಿಯಿಂದ ಎದ್ದ ಪ್ರಧಾನಿ ಮೋದಿ ವೇದಿಕೆಯ ಮುಂಭಾಗಕ್ಕೆ ಹೋಗಿ ಅವರನ್ನು ಸುಮ್ಮನಿರುವಂತೆ ಸನ್ನೆ ಮಾಡಿ ಮತ್ತೆ ಹಿಂದೆ ಬಂದು ತಮ್ಮ ಆಸನದಲ್ಲಿ ಆಸೀನರಾದರು.
courtesy: hindustantimes.com