×
Ad

ಮೈಸೂರು ನಗರ ಉದ್ವಿಗ್ನ ;ಕಲ್ಲು ತೂರಾಟದಿಂದ 3 ಬಸ್‌ಗಳು ಜಖಂ, ಬೈಕ್ ಗೆ ಬೆಂಕಿ

Update: 2016-03-14 13:35 IST

ಮೈಸೂರು, ಮಾ.14: ಬಿಜೆಪಿ ಕಾರ್ಯಕರ್ತ ರಾಜು ಹತ್ಯೆಯನ್ನು ಖಂಡಿಸಿ  ಬಿಜೆಪಿ ಸೋಮವಾರ ಕರೆ ನೀಡಿದ್ದ ಮೈಸೂರು ಬಂದ್‌ ವೇಳೆ ಅಲ್ಲಲ್ಲಿ ಅಹಿತಕರ ಘಟನೆ ನಡೆದಿರುವುದು ವರದಿಯಾಗಿದೆ.ಕಲ್ಲು ತೂರಾಟದಿಂದಾಗಿ ಮೂರು ಬಸ್‌ಗಳು ಜಖಂಗೊಂಡಿದೆ.
 ಮಂಡಿ ಮೊಹಲ್ಲಾದಲ್ಲಿ  ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಪೊಲೀಸ್‌ ಜೀಪ್‌ನ ಮೇಲೆ  ಕಲ್ಲೆಸೆದರು. ಬಿಪಿಪಿ ಕಾರ್ಯಕರ್ತರ ಪ್ರತಿಭಟನೆಯು ಹಿಂಸೆಗೆ ತಿರುಗುವ ಹಂತದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ  ಬಿಜೆಪಿ ಕಾರ್ಯಕರ್ತರನ್ನು ಚದುರಿಸಿದರು. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ದೇವರಾಜು ಮಾರ್ಕೆಟ್‌ನಲ್ಲಿ . ಬಲವಂತವಾಗಿ  ಅಂಗಡಿ ಮುಂಗಟ್ಟು ಗಳನ್ನು  ಮುಚ್ಚಿದ್ದಾರೆ. ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಕಲ್ಲು ತೂರಾಟ. ನಡೆಸಿದ ಪರಿಣಾಮವಾಗಿ 3 ಬಸ್‌ಗಳು ಜಖಂಗೊಂಡಿದೆ.  ದೇವರಾಜ  ಮಾರುಕಟ್ಟೆಯಲ್ಲಿ ಅಂಗಡಿ  ಮುಂಗಟ್ಟುಗಳನ್ನು ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದ್ದಾರೆ.ಹಣ್ಣು, ತರಕಾರಿ ಅಂಗಡಿಗಳ ಮೇಲೆ  ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ದುಷ್ಕರ್ಮಿಗಳು ಎನ್‌ಆರ್‌ ಮೊಹಾಲ್ಲಾದಲ್ಲಿ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಕಾರನ್ನು ಜಖಂಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News