×
Ad

ತಣ್ಣಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ಉದ್ವಿಗ್ನ

Update: 2016-03-14 14:18 IST

ಮೈಸೂರು, ಮಾ.14:  ಮೈಸೂರಿನ ಉದಯಗಿರಿಯಲ್ಲಿ ರವಿವಾರ ಸಂಜೆ ನಡೆದಿರುವ ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಖಂಡಿಸಿ ಇಂದು ಮೈಸೂರು ಬಂದ್ ಗೆ ಕರೆ ನೀಡಲಾಗಿದ್ದು,ಬಿಜೆಪಿ ಸೇರಿದಂತೆ ಕೆಲ ಹಿಂದೂಪರ ಸಂಘಟನೆಗಳು ನೀಡಿರುವ ಬಂದ್‌  ಕರೆಯಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದೆ.
ನಗರ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ನಗರದ ಬಹುತೇಕ ಕಡೆ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಅಡ್ಡಿಯಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಶವಾಗಾರಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ.: ಬಿಜೆಪಿ ಕಾರ್ಯಕರ್ತ ರಾಜು ಮೃತದೇಹವನ್ನಿರಿಸಲಾದ ಶವಾಗಾರಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳಿಯರಿಂದ ಮಾಹಿತಿ ಪಡೆದ ಪ್ರತಾಪ್ ಸಿಂಹ. ಮಾತುಕತೆ ನಡೆಸಿದರು.
ಮೈಸೂರಿನ ಕೇಂದ್ರ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಕಾರರು ಮೈಸೂರಿನಿಂದ ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್ ಗಳಿಗೆ ತಡೆಯೊಡ್ಡಿದ್ದಾರೆ.ಇದರಿಂದ ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು  ಪರದಾಡುತ್ತಿದ್ದಾರೆ.
ಮೈಸೂರಿನ ಫೈವ್ ಲೈಟ್ ವೃತ್ತದಲ್ಲಿ   ನಡೆದ ಕಲ್ಲು ತೂರಾಟದಿಂದ .ಮೂರು ಬಸ್‌ಗಳಿಗೆ ಹಾನಿಯಾಗಿದೆ. . ಕೆ ಆರ್‌ ಆಸ್ಪತ್ರೆಯ ಬಳಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾವೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

5 ಲಕ್ಷ ರೂ. ಪರಿಹಾರಕ್ಕೆ ಶಿಫಾರಸು: ರಾಜುಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News