ಹುಬ್ಬಳ್ಳಿ: ಕಾರು ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸ್ಪಾಟ್‌ಡೆತ್
Update: 2016-03-17 16:48 IST
ಮುಂಡಗೋಡ : ಬೈಕ್ ಇಂಡಿಕಾ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟು ಇರ್ನ್ನೋವ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ಶಿರಸಿ ರಸ್ತೆಯ ಮಹಾಲೆ ರೈಸ್ ಮಿಲ್ ಹತ್ತಿರ ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವನನ್ನು ಶಿಗ್ಗಾಂವ ತಾಲೂಕಿನ ತೋಟದಹುನಗುಂದ ಗ್ರಾಮದ ನಾಗರಾಜ ಭೈರಪ್ಪ ಲಕ್ಕೊಳ್ಳಿ (45)ಹಾಗು ಗಾಯಗೊಂಡವನನ್ನು ಅದೇ ಗ್ರಾಮದ ಮಂಜುನಾಥ ಬಸವಂತಪ್ಪ ಬೆಳ್ಳೊಳ್ಳಿ (27) ಎಂದು ಹೇಳಲಾಗಿದೆ.
ಇಂಡಿಕಾ ಕಾರು ಹುಬ್ಬಳ್ಳಿ ದಿಕ್ಕಿ ನಡೆ ಹಾಗು ಪಲ್ಸರಬೈಕ್ ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮಕ್ಕೆ ತೆರಳುತ್ತಿದ್ದಾಗ ಮುಖಾ ಮುಖಿಯಾಗಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ
ಘಟನಾ ಸ್ಥಳಕ್ಕೆ ಪಿ.ಆಯ್. ಎಸ್.ಸಿ.ಪಾಟೀಲ, ಪಿ.ಎಸ್.ಆಯ್ ಲಕ್ಕಪ್ಪ ನಾಯಕ ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.