×
Ad

ಮತ್ತೊಬ್ಬ ಗಾಯಾಳು ಸಾವು

Update: 2016-03-17 23:43 IST

ತುಮಕೂರು, ಮಾ.17: ಹೆತ್ತೇನಹಳ್ಳಿ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕೊಂಡ ಹಾಯಲು ಹೋಗಿ ಗಾಯಗೊಂಡಿದ್ದ ಗಾಯಾಳುಗಳಲ್ಲಿ ಒಬ್ಬರಾದ ಕುಮ್ಮಂಜಿ ಪಾಳ್ಯದ ಕೆ.ಎಸ್.ಸ್ವಾಮಿ(37) ಇಂದು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.

ಕುಮ್ಮಂಜಿ ಪಾಳ್ಯದ ಎಂ.ಎ.ಪದವೀಧರರಾದ ಕೆ.ಎಸ್.ಸ್ವಾಮಿ ನಗರದ ಉಮಾಪ್ರಗತಿ ಪತ್ತಿನ ಸಹಕಾರಿ ಸಂಘದಲ್ಲಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿ ನಂತರ ಕ್ಯಾತ್ಸಂದ್ರದ ಉಮಾ ಪ್ರಗತಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ.7ರಂದು ಬೆಳಗಿನ ಜಾವ ಹೆತ್ತೇನಹಳ್ಳಿ ಮಾರಮ್ಮದೇವಿ ಜಾತ್ರೆಯಲ್ಲಿ ನಿರ್ಮಿಸಿದ್ದ ಕೊಂಡ ಹಾಯಲು ಹೋಗಿ ಬಿದ್ದ ಗಾಯಗೊಂಡಿದ್ದ ಇವರನ್ನು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಬೆಂಗಳೂರಿನ ಅಪೂರ್ವ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News