ಬರಡಾದ ಕೆಆರ್‌ಎಸ್..!!
Update: 2016-03-17 23:45 IST
ಬೇಸಿಗೆಯ ತಾಪಮಾನ ತೀವ್ರ ಏರಿಕೆಯಾಗಿರುವಂತೆಯೇ, ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ನೀರಿನ ಮಟ್ಟವು ತಳಕ್ಕೆ ಕುಸಿದಿದೆ. ಗುರುವಾರ ಅಣೆಕಟ್ಟಿನಲ್ಲಿ ನೀರಿನ ಮಟ್ಟವು 86 ಅಡಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟಿನಲ್ಲಿ ನೀರಿನ ಮಟ್ಟವು 104.15 ಅಡಿಗಳಷ್ಟಿತುತಿ. ಕೆಆರ್‌ಎಸ್ ಅಣೆಕಟ್ಟಿನ ಗರಿಷ್ಠ ನೀರಿನ ಮಟ್ಟ 120.80 ಅಡಿಗಳಾಗಿವೆ.