ರೈತರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ
ಬೆಂಗಳೂರು, ಮಾ.18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ 2016-17ನೆ ಸಾಲಿನ ಬಜೆಟ್‌ನಲ್ಲಿ ರೈತರಿಗೆ ಭರ್ಜರಿ ಕೊಡುಗೆ ಪ್ರಕಟಿಸಿದ್ದಾರೆ.
ಮುಖ್ಯಾಂಶಗಳು ಕೆಳಗಿನಂತಿವೆ.
ಕೃಷಿ ಇಲಾಖೆಗೆ 4,344 ಕೋಟಿ ರೂ, ತೋಟಗಾರಿಕೆ ಇಲಾಖೆಗೆ 753 ಕೋಟಿ ರೂ. ,ಪಶುಸಂಗೋಪನಾ ಇಲಾಖೆಗೆ 1,886 ಕೋಟಿ ರೂ. ಅನುದಾನ
*ಕೃಷಿ ನವೋದ್ಯಮಕ್ಕೆ (ಅಗ್ರಿ ಸ್ಪಾರ್ಟ್ ಅಪ್) ಉತ್ತೇಜನ ನೀಡಲು 10 ಕೋಟಿ ರೂ.
*ಸುವರ್ಣ ಕೃಷಿ ಗ್ರಾಮ ಯೋಜನೆಯಡಿ ರಾಜ್ಯದ 100 ಮಾದರಿ ಗ್ರಾಮಗಳ ಅಭಿವೃದ್ಧಿ
*ಅರಕಲಗೂಡಿನಲ್ಲಿ ಹೊಸದಾಗಿ ಪಶು ಆಹಾರ ಉತ್ಪಾದನಾ ಘಟಕ ಸ್ಥಾಪನೆ, .
* 5 ಕೋಟಿ ಅನುದಾನದಲ್ಲಿ ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಮಹಾಮಂಡಳಿ ಸ್ಥಾಪನೆ
*ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲು ಶೇಕಡ 50ರಷ್ಟು ಸಹಾಯಧನ
* ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ರದ್ದುಗೊಳಿಸುವ ಚಿಂತನೆ.
*ಮಾರ್ಚ್ 30ರೊಳಗೆ ಪಾವತಿಸಿದ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ.