×
Ad

2016-17 ನೇ ಸಾಲಿನ ರಾಜ್ಯ ಆಯವ್ಯಯ : ಮುಖ್ಯಾಂಶಗಳು

Update: 2016-03-18 16:09 IST

ಬೆಂಗಳೂರು.ಮಾ.18: ಅಹಿಂದ ಸಮುದಾಯಕ್ಕೆ ಹಿತಕರವಾದ, ಕೃಷಿಕರಿಗೆ ನೆರವಾಗುವ, ನೀರಾವರಿಗೆ ಆದ್ಯತೆ ಕೊಡುವ, ಬಡ, ಮಧ್ಯಮ ವರ್ಗದವರಿಗೆ ಮಿಶ್ರ ಫಲದ 1.61 ಲಕ್ಷ ಕೋಟಿ ರೂ ಗಾತ್ರದ 2016-17 ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲಿಂದು ಮಂಡಿಸಿದರು.

ಮುಖ್ಯಮಂತ್ರಿಯಾಗಿ ನಾಲ್ಕನೇ ಹಾಗೂ ತಮ್ಮ ರಾಜಕೀಯ ಬದುಕಿನ 11ನೇ ಆಯವ್ಯಯವನ್ನು ಮಂಡಿಸಿದ್ದು, ರಾಜಸ್ವ ಜಮೆಗಳ ಮೂಲಕ 1.30 ಲಕ್ಷ ಕೋಟಿ, ಹಲ ಮೂಲಗಳಿಂದ ಸಾಲ ಎತ್ತುವ ಮೂಲಕ 31 ಸಾವಿರ ಕೋಟಿ ರೂ ಆದಾಯವನ್ನು ನಿರೀಕ್ಷಿಸಿರುವ ಬಜೆಟ್ ಒಂದೂವರೆ ಲಕ್ಷ ಕೋಟಿ ರೂಪಾಯಿ ಗಾತ್ರ ಮೀರಿ ಹೊಸ ಇತಿಹಾಸ ನಿರ್ಮಿಸಿದೆ.

ಬೆಂಗಳೂರು.ಮಾ.18: ಅಹಿಂದ ಸಮುದಾಯಕ್ಕೆ ಹಿತಕರವಾದ, ಕೃಷಿಕರಿಗೆ ನೆರವಾಗುವ, ನೀರಾವರಿಗೆ ಆದ್ಯತೆ ಕೊಡುವ, ಬಡ, ಮಧ್ಯಮ ವರ್ಗದವರಿಗೆ
ಮಿಶ್ರ ಫಲದ 1.61 ಲಕ್ಷ ಕೋಟಿ ರೂ ಗಾತ್ರದ 2016-17 ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲಿಂದು ಮಂಡಿಸಿದರು.

ಮುಖ್ಯಮಂತ್ರಿಯಾಗಿ ನಾಲ್ಕನೇ ಹಾಗೂ ತಮ್ಮ ರಾಜಕೀಯ ಬದುಕಿನ 11ನೆೀ ಆಯವ್ಯಯವನ್ನು ಮಂಡಿಸಿದ್ದು, ರಾಜಸ್ವ ಜಮೆಗಳ ಮೂಲಕ 1.30 ಲಕ್ಷ ಕೋಟಿ, ಹಲ ಮೂಲಗಳಿಂದ ಸಾಲ ಎತ್ತುವ ಮೂಲಕ 31 ಸಾವಿರ ಕೋಟಿ ರೂ ಆದಾಯವನ್ನು ನಿರೀಕ್ಷಿಸಿರುವ ಬಜೆಟ್ ಒಂದೂವರೆ ಲಕ್ಷ ಕೋಟಿ ರೂಪಾಯಿ ಗಾತ್ರ ಮೀರಿ ಹೊಸ ಇತಿಹಾಸ ನಿರ್ಮಿಸಿದೆ.

ರಾಜ್ಯದ ಪ್ರತಿ ಕಂದಾಯ ವಿಭಾಗದ ನಾಲ್ಕು ಜಿಲ್ಲೆಗಳಿಗೆ ತಲಾ ನೂರರಂತೆ ಮಾದರಿ ಕೃಷಿ ಗ್ರಾಮಗಳನ್ನು ರೂಪಿಸಲು ಸುವರ್ಣ ಕೃಷಿ ಗ್ರಾಮ ಯೋಜನೆಯನ್ನು ಜಾರಿ, ಅದೇ ರೀತಿ ಮುಖ್ಯಮಂತ್ರಿಗಳ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರಾಜ್ಯದ ಒಂದು ಲಕ್ಷ ರೈತರಿಗೆ ಶೇಕಡಾ 90 ರಷ್ಟು ಸಹಾಯಧನದಲ್ಲಿ ತುಂತುರು ಹಾಗೂ ಹನಿ ನೀರಾವರಿ ಘಟಕಗಳನ್ನು ಒದಗಿಸುವ ಉಡುಗೊರೆ ಕೃಷಿಕರಿಗೆ ದೊರೆತಿದೆ. 2016-17 ನೇ ಸಾಲಿನಲ್ಲಿ ಇಪ್ಪತ್ಮೂರು ಲಕ್ಷ ರೈತರಿಗೆ 11 ಸಾವಿರ ಕೋಟಿ ರೂ ಸಾಲ ಒದಗಿಸುವುದಾಗಿ ಹೇಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ,ಯಶಸ್ವಿನಿ ಆರೋಗ್ಯ ಯೋಜನೆಯ ಲಾಭವನ್ನು ಇನ್ನಷ್ಟು ವಿಸ್ತರಿಸುವ ಸಲುವಾಗಿ 169.11 ಕೋಟಿ ರೂ ಒದಗಿಸುವ ಗುರಿ ನಿಗದಿ.ತೋಟಗಾರಿಕೆ ಪ್ರದೇಶವನ್ನು ಪ್ರತಿ ವರ್ಷ ಶೇಕಡಾ 5 ರಷ್ಟು ಮತ್ತು ಫಸಲಿನ ಪ್ರಮಾಣವನ್ನು ಶೇಕಡಾ 8.7 ರಷ್ಟು ಹೆಚ್ಚಿಸುವ, ತೋಟಗಾರಿಕೆ ವ್ಯವಸ್ಥೆಯನ್ನು ಕಾರ್ಪೋರೇಟ್ ವಲಯದ ಜತೆ ಸೇರಿಸಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ವಿಧವೆಯರ ಮತ್ತು ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಂತೆ ನೋಡಿಕೊಳ್ಳಲು ತಲಾ ಮೂರು ಕುರಿ ಅಥವಾ ಮೇಕೆಗಳನ್ನು
ನೀಡಲು ತೀರ್ಮಾನಿಸಲಾಗಿದ್ದು, ಇಂತಹ ಹತ್ತು ಸಾವಿರ ಘಟಕಗಳಿಗೆ 7.5 ಕೋಟಿ ರೂ ಒದಗಿಸುವ ಜತೆಗೆ ಯೋಜನೆಯ ಫಲಾನುಭವಿಗಳಿಗೆ ಶೇಕಡಾ 75 ರಷ್ಟು ಸಹಾಯ ಧನ ಒದಗಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಮೂರು ಸಾವಿರ ಕೋಟಿ ರೂ ವೆಚ್ಚದಲ್ಲಿ ಹಾರಂಗಿ ಬಲದಂಡೆ ನಾಲೆಯ ಅಭಿವೃದ್ಧಿ, ಕಬಿನಿ ಬಲದಂಡೆ ನಾಲೆಯ ಅಭಿವೃದ್ಧಿ, ಶಿಂಷಾ ಬಲದಂಡೆ ನಾಲೆಯ ಅಭಿವೃದ್ಧಿ, ನುಗು ಯೋಜನೆಯ ಮೇಲ್ಮಟ್ಟದ ನಾಲೆಂು ಆಧುನೀಕರಣ, ತಾರಕ ಎಡದಂಡೆ ನಾಲೆಯ ಆಧುನೀಕರಣ, ಪೂರಿಗಾಲಿ ಸಮಗ್ರ ಹನಿ, ತುಂತುತು ನೀರಾವರಿ ಯೋಜನೆಯ ಅಭಿವೃದ್ಧಿ, ಪಿರಿಯಾಪಟ್ಟಣ ಮುತ್ತಿನಮುಳಿಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರು ಎತ್ತಿ ನೂರೈವತು್ತ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಎತ್ತಿನ ಹೊಳೆ ಯೋಜನೆಗಳಿಗಾಗಿಯೆೀ ಪ್ರತ್ಯೇಕ ನಿಗಮಗಳ ಸ್ಥಾಪನೆ. ಪ್ರಸಕ್ತ ವರ್ಷ ನೀರಾವರಿಗಾಗಿಯೇ ಇದೆೀ ಮೊದಲ ಬಾರಿಗೆ ಅತಿ ಹೆಚ್ಚು ಹಣ ನಿಗದಿ ಮಾಡಿದ್ದು, 14,477 ಕೋಟಿ ರೂಗಳನ್ನು ಒದಗಿಸಲಾಗಿದೆ. ಅಧಿಕಾರಕ್ಕೆ ಬರುವ ಮುನ್ನ ಪ್ರತಿವರ್ಷ ಹತ್ತು ಸಾವಿರ ಕೋಟಿ ರೂಗಳಂತೆ ನೀರಾವರಿಗೆ ಒಟ್ಟು 50000 ಕೋಟಿ ರೂ ನೀಡುವುದಾಗಿ ಹೇಳಿದ್ದೆವು.ಆದೆ ಈಗಾಗಲೇ ಇದುವರೆಗೆ 46,931 ಕೋಟಿ ರೂ ಒದಗಿಸಿದ್ದೇವೆ ಎಂದು ಹಷರ್
ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿಯುವ ಮಕ್ಕಳಿಗೆ ರಜೆಯಲ್ಲಿ ಪೂರಕ ಭೋಧನೆಯ ವ್ಯವಸ್ಥೆ ರೂಪಿಸುವ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಲ್ಲ ಮಕ್ಕಳಿಗೆ ಇ-ವಿಷಯಾಧಾರಿತ ಶಿಕ್ಷಣ ಒದಗಿಸುವ ಐಟಿ ಸ್ಕೂಲ್ಸ್ ಇನ್ ಕರ್ನಾಟ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸುವ, ಸರ್ಕಾರಿ ಶಾಲೆಗಳಲ್ಲಿ ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಪಠ್ಯಕ್ರಮ ಅಳವಡಿಸಲು ಅನುಮತಿ, ಈ ವರ್ಷದೊಳಗಾಗಿ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳ ವಿವರವನ್ನು ಒಳಗೊಂಡ ಆಧಾರ್ ಕಾರ್ಡ್ ಒದಗಿಸುವ ಜತೆಗೆ, ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಅಡುಗೆಯವರಿಗೆ ನೀಡಲಾಗುವ ಗೌರವಧನದ ಪ್ರಮಾಣವನು್ನ 30 ರೂ ಹೆಚ್ಚಿಸುವ ಘೋಷಣೆ ಮಾಡಿದ್ದಾರೆ. ಆತ್ಮಹತ್ಯೆಗೆ ಒಳಗಾದ ರೈತರ ಕುಟುಂಬದ ಸದಸ್ಯರಿಗೆ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸಲು ಇಂದಿರಾ ಸುರಕ್ಷಾ ಯೋಜನೆ, ಆರೈೆ ಯೋಜನೆಯಡಿಯಲ್ಲಿ ಜಿಲ್ಲಾ ಆಸ್ಪತ್ರೆ, ತಾಯಿ, ಮಕ್ಕಳ ಆಸ್ಪತ್ರೆಗಳಲ್ಲಿ
ಸಾರ್ವಜನಿಕ ಸಹಭಾಗಿತ್ವದೊಂದಿಗೆ ಶೌಚಾಲಯ, ಕುಡಿಯುವ ನೀರು, ರೋಗಿಗಳ ಕುಟುಂಬದವರಿಗೆ ತಂಗುದಾಣ ನಿರ್ಮಾಣ, ಆಪದ್ಭಾಂದವ ಯೋಜನೆಯಡಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಕ್ಕೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಐದು ಕಡೆ ಅಪಘಾತ ಚಿಕಿತ್ಸಾ ಕೇಂದ್ರಗಳನ್ನು 52.96 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು. ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಎಲ್ಲೆಡೆ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯುವುದಲ್ಲದೇ, ಸಂಚಾರಿ ಆರೋಗ್ಯ ಹಾಗೂ ಮೊಬೈಲ್ ಸೇವಾ ಘಟಕಗಳ ಮೂಲಕ ಸಂಚಾರ ವ್ಯವಸ್ಥೆ ಇಲ್ಲದ ಹಳ್ಳಿಗಳಲ್ಲಿ ಆರೋಗ್ಯ ಸೇವೆಯನ್ನು ಉತ್ತಮ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ವಿವರಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಇರುವ ರೋಗ ಯಾವುದೆಂದು ನಿರ್ಣಯಿಸಲು ಉಚಿತ ಪ್ರಯೋಗ ಶಾಲೆ ಸೇವೆಗಳನ್ನು ಆರಂಭಿಸಲಾಗುವುದು, ದಾವಣಗೆರೆ, ಚಿಕ್ಕಬಳ್ಳಾಪುರಗಳಲ್ಲಿ ಐವತ್ತು ಹಾಸಿಗೆಗಳ, ಟಿ.ನರಸೀಪು ಸೇರಿದಂತೆ ಹಲವೆಡೆ ಹತ್ತು ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಯುಷ್ ಇಂಟಿಗ್ರೇಟೆ್ ಆಸ್ಪತ್ರೆಗಳನ್ನು ಆರು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು. ಮೈಸೂರು ನಗರದಲ್ಲಿ 60 ಕೋಟಿ ರೂ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಿಸುವುದು,ತೀರಿಕೊಂಡ ನಂತರ ಅಂಗದಾನ ಮಾಡಲು ಇಚ್ಚಿಸುವವರು ಮತ್ತು ಅದನ್ನು ಬಳಸುವವರಿಗಾಗಿ ಜೀವ ಸಾರ್ಥಕತೆ ಎಂಬ ಯೋಜನೆ ಪ್ರಾರಂಭ, ಚಾಮರಾಜನಗರ, ಮಡಿಕೇರಿ ಹಾಗೂ ಕಾರವಾರಗಳಲ್ಲಿ ಪ್ರಸಕ್ತ ವರ್ಷ ಹೊಸ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. ರಾಯಚೂರಿನ ರಾಜೀವ್ ಗಾಂದಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮೂವತ್ತೈದು ಕೋಟಿ ರೂಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕೆಲಸ ನಡೆಯಲಿದೆ. ಮಂಡ್ಯ, ರಾಯಚೂರು ಸೇರಿದಂತೆ ಆರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಮಿತಿಯನ್ನು 100 ರಿಂದ 150 ಕ್ಕೇರಿಸಲಾಗುವುದು, ಬಾಲಪೋಷ ಯೋಜನೆಯಡಿಯಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಇಪ್ಪತ್ತೈದು ಸಾವಿರ ಮಕ್ಕಳಿಗೆ ನೂರಿಪ್ಪತ್ತೈದು ದಿನಗಳ ಕಾಲ ಪ್ರತಿ ದಿನ ಎರಡು ಗ್ರಾಂ ಸ್ಪಿರುಲಿನಾವನ್ನು ಒದಗಿಸಲು ನಿರ್ಧರಿಸಲಾಗಿದೆ.

ಅಂಗನವಾಡಿ ಮಕ್ಕಳಿಗೆ ಈಗ ನೀಡಲಾಗುತ್ತಿರುವ ಕೆನೆ ರಹಿತ ಹಾಲಿನ ಬದಲಾಗಿ ಕ್ಷೀರಭಾಗ್ಯ ಯೋಜನೆಯಡಿ ಕೆನೆ ಸಹಿತ ಹಾಲನ್ನು ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ 42.50 ಕೋಟಿ ರೂ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ನಾಲ್ಕು ಸಾವಿರ ಹೊಸ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.ಹತ್ತು ಸಾವಿರ ಅಂಗನವಾಡಿ ಕೇಂದ್ರಗಳನ್ನು ಶಿಶು ಸ್ನೇಹ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದು ವಿವರಿಸಿದರು. ಬಹುಪೌಷ್ಟಿಕ ಕೊರತೆಯಿಂದ ನರಳುತ್ತಿರುವ ಮಕ್ಕಳಿಗೆ ನೀಡಲಾಗುತ್ತಿರುವ 750 ರೂಪಾಯಿಗಳನ್ನು ಎರಡು ಸಾವಿರ ರೂಪಾಯಿಗಳಿಗೆ ಏರಿಕೆ, ನಿರಾಶ್ರಿತ ಮಕ್ಕ ಕುಟೀರದಲ್ಲಿರುವ ಮಕ್ಕಳಿಗೆ ಈಗ ನೀಡಲಾಗುತ್ತಿರುವ 400 ರೂಗಳ ಬದಲು 1000 ರೂಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಮಹಿಳಾ ಕಲ್ಯಾಣ ಸಮಿತಿಗಳನು್ನ ರಚಿಸಲಾಗುವುದು.ರಾಜ್ಯ ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಸಂಪನ್ಮೂಲ ಕೋಶವನ್ನು ಆರಂಭಿಸಲಾಗುವುದು ಎಂದು ಅವರು ವಿವರ ನೀಡಿದರು. ನಿರಾಶ್ರಿತ ಬುದ್ದಿ ಮಾಂದ್ಯ ಪುರುಷರು ಹಾಗೂ ಮಹಿಳೆಯರಿಗಾಗಿ ವಿಭಾಗಾವಾರು ಕೇಂದ್ರಗಳನ್ನು ತೆರೆಯಲಾಗುವುದು. ವಿಕಲ ಚೇತನ ವ್ಯಕ್ತಿಗಳಿೆ ಅಗತ್ಯವಾದ ಸಾಧನೆ, ಸಲಕರಣೆಗಳನ್ನು ಒದಗಿಸಲು ಇದುವರೆೆ ಒದಗಿಸಲಾಗುತ್ತಿದ್ದ ಹಣದ ಪ್ರಮಾಣವನ್ನು ಹದಿನೈದು ಸಾವಿರ ರೂಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಹದಿನಾರು ಜಿಲ್ಲೆಗಳಲ್ಲಿರುವ ಪುನರ್ವಸತಿ ಕೇಂದ್ರಗಳನ್ನು ರಾಜ್ಯದ ಉಳಿದ ಹದಿನಾಲ್ಕು ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.ರಸ್ತೆ ಪಕ್ಕ ಸಣ್ಣ,ಪುಟ್ಟ ವ್ಯಾಪಾರ ನಡೆಸುತ್ತಿರುವ ಹತ್ತು ಸಾವಿರ ಮಹಿಳೆಯರಿಗಾಗಿ ಸಮೃದ್ಧಿ ಯೋಜನೆಯಡಿಯಲ್ಲಿ ಹತ್ತು ಕೋಟಿ ರೂ ಒದಗಿಸಲಾಗುವುದು ಎಂದು ಅವರು
ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News