×
Ad

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ 4,497 ಕೋಟಿ ರೂ.

Update: 2016-03-18 23:23 IST

ಬಾಲ ಪೋಷಕ ಯೋಜನೆಯ ಅಡಿಯಲ್ಲಿ 3.6 ಕೋಟಿ ರೂ.ಗಳ ವೆಚ್ಚದಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 25 ಸಾವಿರ ಮಕ್ಕಳಿಗೆ 180 ದಿನಗಳ ಅವಧಿಗೆ ಪ್ರತಿದಿನ 2 ಗ್ರಾಂಗಳ ಸ್ಪಿರುಲಿನಾವನ್ನು ಒದಗಿಸಲು ಉದ್ದೇಶಿಸಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಿಂದುಳಿದ ತಾಲೂಕುಗಳಲ್ಲಿನ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೈಕ್ರೋನ್ಯೂಟ್ರಿಯಂಟ್ಸ್‌ಗಳನ್ನು ಒದಗಿಸಲು 42 ಕೋಟಿ ರೂ.ವೆಚ್ಚದಲ್ಲಿ ಮಾತೃಪುಷ್ಠಿವರ್ಧಿನಿ ಯೋಜನೆಯನ್ನು ಜಾರಿಗೊಳಿಸಲಾಗುವುದು.
ಅಂಗನವಾಡಿ ಮಕ್ಕಳಿಗೆ ಈಗ ನೀಡುತ್ತಿರುವ ಕೆನೆರಹಿತ ಹಾಲಿನ ಬದಲಾಗಿ, ಕ್ಷೀರಭಾಗ್ಯ ಯೋಜನೆಯಡಿ 42.50 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚದಲ್ಲಿ ಕೆನೆಸಹಿತ ಹಾಲನ್ನು ನೀಡಲು ಉದ್ದೇಶಿಸಿದೆ.
 ಕಟ್ಟಡಗಳನ್ನು ಹಾಗೂ ಎಸ್‌ಡಿಪಿ ಅಡಿಯಲ್ಲಿ 500 ಅಂಗನವಾಡಿ ಕಟ್ಟಡಗಳನ್ನು ಅಂದರೆ ಒಟ್ಟು 4 ಸಾವಿರ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಬಾಲ ಸ್ನೇಹಿ ಕೇಂದ್ರಗಳ ಯೋಜನೆ ಅಡಿ 10 ಸಾವಿರ ಅಂಗನವಾಡಿ ಕೇಂದ್ರಗಳನ್ನು ಶಿಶು ಸ್ನೇಹಿ ಕೇಂದ್ರಗಳನ್ನಾಗಿ ಪರಿವರ್ತಿಸಲು ಉದ್ದೇಶಿಸಿದ್ದು, ಒಂದು ಕೇಂದ್ರಕ್ಕೆ 10 ಸಾವಿರ ರೂ.ಗಳನ್ನು ನೀಡಲಾಗುವುದು.
 
ಬಹುಪೌಷ್ಟಿಕ ಆಹಾರದ ಕೊರತೆಯಿರುವ ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಣೆ ಮಾಡಲು ಹಾಗೂ ಅವರನ್ನು ಸಾಮಾನ್ಯ ಮಗುವಿನ ಮಟ್ಟಕ್ಕೆ ತರುವಂತೆ ಮಾಡಲು ಪ್ರಸ್ತುತ ನೀಡುತ್ತಿರುವ 750 ರೂ.ಗಳಿಗೆ ಬದಲಾಗಿ 2 ಸಾವಿರ ರೂ.ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕೆ ಹೆಚ್ಚುವರಿಯಾಗಿ 3.12 ಕೋಟಿ ರೂ.ಒದಗಿಸಲಾಗಿದೆ. ಸ್ತ್ರೀ ಶಕ್ತಿ ಸಮೃದ್ಧಿ ಯೋಜನೆ ಅಡಿಯಲ್ಲಿ ಕರ್ನಾಟಕ ಸಹಕಾರ ಸಂಘ ಅಧಿನಿಯಮ, 1960ರ ಅಡಿ ಜಿಲ್ಲಾ ಸ್ತ್ರೀ ಶಕ್ತಿ ಗುಂಪುಗಳನ್ನು ನೋಂದಾಯಿಸಲು ಉದ್ದೇಶಿಸಿದ್ದು, ಇದಕ್ಕೆ 30 ಲಕ್ಷ ರೂ. ಒದಗಿಸಲಾಗುವುದು.
ರಸ್ತೆ ಪಕ್ಕದಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ 10 ಸಾವಿರ ಮಹಿಳೆಯರಿಗೆ ಸಮೃದ್ಧಿ ಯೋಜನೆ ಅಡಿಯಲ್ಲಿ 10 ಕೋಟಿ ರೂ.ಗಳ ಸಹಾಯ ಧನವನ್ನು ನೀಡಲಾಗುವುದು.
ಶಿಶು ಕೇಂದ್ರೀಕೃತ ಯೋಜನೆಯಡಿ ಬುದ್ಧಿಮಾಂದ್ಯ ಮಕ್ಕಳ ಶಾಲೆಗಳಿಗೆ ಪ್ರತಿ ಮಗುವಿಗೆ ನೀಡುತ್ತಿರುವ ಅನುದಾನವನ್ನು ವಸತಿ ಶಾಲೆಗಳಲ್ಲಿ 5 ಸಾವಿರದಿಂದ 5,600ಕ್ಕೆ ಮತ್ತು ವಸತಿ ರಹಿತ ಶಾಲೆಗಳಿಗೆ 4 ಸಾವಿರದಿಂದ 4,800ಕ್ಕೆ ಪರಿಷ್ಕರಣೆ ಮಾಡಲಾಗುವುದು.
ಸ್ತ್ರೀ ಶಕ್ತಿ ಗುಂಪುಗಳ ಮಹಿಳೆಯರಿಗೆ ಕರ್ನಾಟಕ ರಾಜ್ಯ ಉದ್ಯೋಗ ತರಬೇತಿ ಇಲಾಖೆಯಿಂದ ನಡೆಸುವ ತರಬೇತಿ ಕಾರ್ಯಕ್ರಮಗಳ ಮೂಲಕ ತರಬೇತಿ ನೀಡಿ ಇವರನ್ನು ಸ್ವತಂತ್ರ ಉದ್ಯಮಿಗಳನ್ನಾಗಿ ರೂಪಿಸಲು ಸ್ತ್ರೀ ಶಕ್ತಿ ಕೌಶಲ್ಯ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಇದಕ್ಕೆ 2.50 ಕೋಟಿ ರೂ.ಒದಗಿಸಲಾಗುವುದು.
ಎಚ್‌ಐವಿ ಸೋಂಕಿತ ಸಂತ್ರಸ್ತೆಯರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಪ್ರತಿ ಫಲಾನುಭವಿಗೆ 40 ಸಾವಿರ ರೂ.ಸಾಲವಾಗಿ ಹಾಗೂ 10 ಸಾವಿರ ರೂ. ಸಹಾಯಧನವಾಗಿ ಧನಶ್ರೀ ಯೋಜನೆಯಡಿ ನೀಡಲು 5 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಒಟ್ಟಾರೆಯಾಗಿ 4,497 ಕೋಟಿ ರೂ. ಗಳನ್ನು ಒದಗಿಸಲಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News