×
Ad

ಕಾನೂನು ಮತ್ತು ನ್ಯಾಯಾಲಯಗಳು

Update: 2016-03-18 23:24 IST

ರಾಜ್ಯದಲ್ಲಿನ ವಕೀಲರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ವಕೀಲರ ಪರಿಷತ್‌ಗೆ 5 ಕೋಟಿ ರೂ., ಅಡ್ವೋಕೇಟ್ ಜನರಲ್ ಕಚೇರಿಯ ಗಣಕೀಕರಣ. ರಾಜ್ಯದ ಎಲ್ಲ್ಲ ಜಿಲ್ಲಾ ನ್ಯಾಯಾಲಯ ಸಂಕೀರ್ಣಗಳಲ್ಲಿ ಕುಡಿಯುವ ನೀರಿನ ಘಟಕಗಳ ಸ್ಥಾಪನೆ. ಕೌಟುಂಬಿಕ ವ್ಯಾಜ್ಯ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಹೊಸದಾಗಿ 22 ಕುಟುಂಬ ನ್ಯಾಯಾಲಯಗಳ ಸ್ಥಾಪನೆ. 2016-17ನೇ ಸಾಲಿನಲ್ಲಿ ಕಾನೂನು ಮತ್ತು ನ್ಯಾಯಾಲಯಗಳ ಇಲಾಖೆಗೆ ಒಟ್ಟಾರೆಯಾಗಿ 671 ಕೋಟಿ ರೂ. ಗಳನ್ನು ಒದಗಿಸಲಾಗಿದೆ.


...........................


ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 1814 ಕೊಟಿ ರೂ.

ಕರ್ನಾಟಕದಲ್ಲಿ ಕೈಗಾರಿಕೆಯನ್ನು ಉತ್ತೇಜಿಸಲು, ಯೋಜನಾ ಪ್ರಸ್ತಾವನೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಮಾರುಕಟ್ಟೆ ಇಂಟಲಿಜೆನ್ಸ್ ಅಭಿವೃದ್ಧಿಪಡಿಸಲು ಇನ್‌ವೆಸ್ಟ್ ಕರ್ನಾಟಕ ಎಂಬ ಲಾಭ ನಿರೀಕ್ಷೆಯಿಲ್ಲದ ಕಂಪನಿಯನ್ನು ರಚಿಸಲಾಗುವುದು.
ಬೆಂಗಳೂರಿನ ಪೀಣ್ಯ ಮತ್ತು ಬೊಮ್ಮಸಂದ್ರ, ಮೈಸೂರು, ಬೆಳಗಾವಿ ಮತ್ತು ಹುಬ್ಬಳ್ಳಿಗಳಲ್ಲಿನ ಭಾರೀ ಕೈಗಾರಿಕಾ ಪ್ರದೇಶಗಳನ್ನು ಮತ್ತು ಎಸ್ಟೇಟ್‌ಗಳನ್ನು ಕೈಗಾರಿಕಾ ಪಟ್ಟಣ ಪ್ರದೇಶಗಳೆಂದು ಘೋಷಿಸಲು ಪ್ರಸ್ತಾಪಿಸಲಾಗಿದೆ.
ಪ್ರಸ್ತುತ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು 175 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಗೋಡಂಬಿ ತಂತ್ರಜ್ಞಾನ ತರಬೇತಿ ಕೇಂದ್ರವನ್ನು ಕುಮಟಾ, ಉತ್ತರ ಕನ್ನಡ ಜಿಲ್ಲೆ ಇಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಕೈಗಾರಿಕೆಗಳಿಗೆ ಭೂಮಿ ಕಳೆದುಕೊಂಡವರಿಗೆ ಮತ್ತು ಸ್ಥಳೀಯ ಗ್ರಾಮೀಣ ಯುವ ಜನತೆಗೆ, ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸಿ, ಸ್ಥಳೀಯ ಕೈಗಾರಿಕೆಗಳಲ್ಲಿ ಕಾರ್ಯಸ್ಥಳಗಳಲ್ಲಿಯೇ ಉದ್ಯೋಗ ತರಬೇತಿ ನೀಡಿ ಉದ್ಯೋಗ ಒದಗಿಸಲಾಗುವುದು.
 ಮಹಿಳಾ ಉದ್ಯಮ ಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಮಂಗಳೂರು, ಬಳ್ಳಾರಿ, ಧಾರವಾಡ ಹಾಗೂ ಮೈಸೂರಿನಲ್ಲಿ ಮಹಿಳಾ ಪಾರ್ಕ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.
ಜಪಾನ್ ದೇಶದ ಆರ್ಥಿಕ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಹಯೋಗದೊಂದಿಗೆ ತುಮಕೂರು ಜಿಲ್ಲೆ ವಸಂತ ನರಸಾಪುರದಲ್ಲಿ ‘ಜಪಾನೀಸ್ ಇಂಡಸ್ಟ್ರಿಯಲ್ ಟೌನ್‌ಶೀಪ್’ ಅಭಿವೃದ್ಧಿ.
ಭಾರತ ಸರಕಾರದೊಡನೆ ಶೇ.50 ರಷ್ಟು ವೆಚ್ಚವನ್ನು ಹಂಚಿಕೊಳ್ಳುವುದರೊಡನೆ ಬೆಂಗಳೂರಿನ ಸಮೀಪದಲ್ಲಿ 87 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ‘ಎಪಿಡಿಡಿಆರ್‌ಎಲ್’ರ ಸ್ಥಾಪನೆ.

 ಶೇ.50 ದರದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಕೆಐಎಡಿಬಿ-ಕೆಎಸ್‌ಎಸ್‌ಐಡಿಸಿಯಿಂದ ಶೆಡ್ ಮತ್ತು ಭೂಮಿಯನ್ನು ಹಂಚಿಕೆ ಮಾಡಲಾಗುವುದು. ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 3 ಕೋಟಿ ರೂ. ಸರಕಾರಿ ಅನುದಾನದೊಡನೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ಯಮಿಗಳ ಸಂಘದ ಮೂಲಕ ಕೌಶಲ್ಯ, ಇಡಿಪಿ ತರಬೇತಿ ಕೇಂದ್ರದ ಅಭಿವೃದ್ಧಿ.

ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ ಹೊರಬರುತ್ತಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ನೆಲೆಗೊಳಿಸಲು, ರಾಜ್ಯದಾದ್ಯಂತ ಜಿಟಿಟಿಸಿ ಉಪ ಕೇಂದ್ರಗಳಲ್ಲಿ ಶ್ರೇಷ್ಟತಾ ಕೇಂದ್ರಗಳನ್ನು (ಸಿಒಇ) ಸ್ಥಾಪಿಸಲು ಉದ್ದೇಶಿಸಲಾಗಿದೆ. ವಾಸದ ಮತ್ತು ಕೆಲಸದ ಶೆಡ್‌ಗಳನ್ನು ನಿರ್ಮಿಸಲು ನೇಕಾರರಿಗೆ ಹಲವಾರು ಯೋಜನೆಗಳ ಅಡಿಯಲ್ಲಿ ನೀಡಲಾದ 17 ಕೋಟಿ ರೂ.ಗಳ ಸಾಲ ಮತ್ತು ಬಡ್ಡಿಯ ಮನ್ನಾ.
ಕೈಮಗ್ಗ ಮತ್ತು ವಿದ್ಯುತ್ ವಗ್ಗಗಳ ನೇಕಾರರಿಗೆ ಸಹಕಾರ ಬ್ಯಾಂಕ್‌ಗಳು ಮತ್ತು ಸಂಘಗಳ ಮೂಲಕ ಶೇ.1ರ ಬಡ್ಡಿ ದರದಲ್ಲಿ 2 ಲಕ್ಷ ರೂ.ಗಳವರೆಗೆ ಸಾಲ ಮತ್ತು ಶೇ.3 ರ ಬಡ್ಡಿ ದರದಲ್ಲಿ 2ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ.
ಗ್ರಾಮೀಣ ಪ್ರದೇಶಗಳಲ್ಲಿರುವ ಸಣ್ಣ ಪ್ರಮಾಣದ ವಿದ್ಯುತ್ ಮಗ್ಗಗಳ ಘಟಕಗಳಿಗೆ 50% ಸಹಾಯಧನದೊಡನೆ ಸೌರಶಕ್ತಿ ಉಪಕರಣಗಳ ನೀಡಿಕೆ.
ಭಾರತ ಸರಕಾರದ ವಿದ್ಯುತ್ ಮಗ್ಗಗಳ ಆಧುನೀಕರಣ ಯೋಜನೆಯಡಿಯಲ್ಲಿ ವಿದ್ಯುತ್ ಮಗ್ಗಗಳನ್ನು ಉನ್ನತೀಕರಿಸಲು ರಾಜ್ಯ ಸರಕಾರದ ವತಿಯಿಂದ ಪ್ರತಿ ಮಗ್ಗಕ್ಕೆ 10,000 ರೂ.ಗಳ ಕೊಡುಗೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News