×
Ad

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಜ್ಞ್ಞಾನ ಮತ್ತು ತಂತ್ರಜ್ಞಾನ

Update: 2016-03-18 23:25 IST


2016-17ನೆ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಜ್ಞ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಒಟ್ಟಾರೆಯಾಗಿ 222 ಕೋಟಿ ರೂ.ಗಳನ್ನು ಒದಗಿಸಲಾಗಿದೆ. -ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಆನಿಮೇಶೀನ್ ಇತ್ಯಾದಿ ವಲಯಗಳಲ್ಲಿ ಶ್ರೇಷ್ಠತಾ ಕೇಂದ್ರಗಳು ಮತ್ತು ಫಿನಿಷಿಂಗ್ ಶಾಲೆಗಳನ್ನು ಸೃಜಿಸಲು ವಿಶವ್ವಿದ್ಯಾನಿಲಯಗಳು, ಮತ್ತಿತರ ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮಗಳ ಸಹಯೋಗದೊಂದಿಗೆ ಕಾರ್ಯಗತಗೊಳಿಸಲು ಪ್ರಸ್ತಾಪಿಸಲಾಗಿದೆ.
-2ನೆ ಹಂತದ ಬಿಟಿಎಫ್‌ಎಸ್ ಕಾರ್ಯಕ್ರಮವನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಆರಂಭಿಸಲಾಗುವುದು. ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರು ತಾವಾಗಿಯೇ ಕೌಶಲ್ಯಗಳೊಂದಿಗೆ ಸಜ್ಜುಗೊಳ್ಳುವ ಅವಕಾಶವನ್ನು ಕಲ್ಪಿಸಲು ಕೆಲವು ಫಿನಿಷಿಂಗ್ ಸ್ಕೂಲ್‌ಗಳನ್ನೂ ಸಹ ವಿನ್ಯಾಸಗೊಳಿಸಲಾಗಿದೆ.
 -ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನವೋದ್ಯಮಗಳ ಬೆಳವಣಿಗೆಗಾಗಿ ಮತ್ತು ಸಂಶೋಧನೆಯನ್ನು ಬಲಪಡಿಸಲು ಬಾಗಲಕೋಟೆಯಲ್ಲಿ ಇನ್‌ಕ್ಯೂಬೇಟರ್ ಸ್ಥಾಪನೆ.

-ನ್ಯೂಏಜ್ ಇನ್‌ಕ್ಯುಬೇಷನ್ ನೆಟ್‌ವರ್ಕ್‌ಅಡಿ ರಾಜ್ಯದಾದ್ಯಂತ ಸ್ನಾತಕೋತ್ತರ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ 10 ಹೊಸ ಇನ್‌ಕ್ಯುಬೇಟರ್‌ಗಳ ಸ್ಥಾಪನೆ.
-2016-17ನೆ ಸಾಲಿನಲ್ಲಿ ರಾಜ್ಯಾದ್ಯಂತ ಹಂತಹಂತವಾಗಿ ಇಂಟರ್‌ನೆಟ್ ಆಫ್ ಥಿಂಗ್ಸ್, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್, ರೋಬೋಟಿಕ್ಸ್, 3ಡಿ ಪ್ರಿಂಟಿಂಗ್, ನ್ಯಾನೋ ಟೆಕ್ನಾಲಜಿ, ಮೆಡಿಕಲ್ ಡಿವೈಸಸ್, ಹೆಲ್ತ್ ಟೆಕ್ನಾಲಜಿ, ಕ್ಲೀನ್ ಟೆಕ್ನಾಲಜಿ, ಮೊದಲಾದ ಸಂಭಾವ್ಯ ಕ್ಷೇತ್ರಗಳಲ್ಲಿ 4 ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್‌ಗಳ ಸ್ಥಾಪನೆಗೆ ನೆರವು.
-ಬೆಂಗಳೂರು ಮತ್ತು ಶಿವಮೊಗ್ಗ, ಬಾಗಲಕೋಟೆ ಮತ್ತು ಕಲ್ಬುರ್ಗಿ ಐಟಿ ಪಾರ್ಕುಗಳಲ್ಲಿ ಕಿಯೋನಿಕ್ಸ್ ಸಂಸ್ಥೆಯು ಇನ್‌ಕ್ಯುಬೇಟರ್ ಮತ್ತು ಸಾಮಾನ್ಯ ಇನ್ಸ್‌ಟ್ರುಮೆಂಟೇಷನ್ ಸೌಲಭ್ಯಗಳನ್ನು ಒದಗಿಸುವುದು. ಬೆಳಗಾವಿ, ಬೀದರ್ ಮತ್ತು ಜಯಪುರಗಳಲ್ಲಿ ಹೊಸ ಐಟಿ ಪಾರ್ಕ್- ಇನ್‌ಕ್ಯೂಬೇಟರ್‌ಗಳನ್ನು ಸ್ಥಾಪಿಸಲು ಪೂರ್ವಭಾವಿ ಸಿದ್ಧತೆ.
-ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ತಾಲೂಕುಗಳ 500 ಪ್ರೌಢಶಾಲೆಗಳಿಗೆ ಸೈನ್ಸ್ ಲ್ಯಾಬ್-ಇನ್‌ಎ ಬಾಕ್ಸ್ ಕಿಟ್‌ಗಳನ್ನು ತಯಾರಿಸುವ ಮುಖಾಂತರ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಮೂಲಜ್ಞಾನದ ಬೋಧನೆ ಮತ್ತು ಕಲಿಕಾ ಸಾಮರ್ಥ್ಯವನ್ನು ಬಲಪಡಿಸಲು ಉದ್ದೇಶಿಸಲಾಗಿದೆ.
-ವಿಜಯಪುರದಲ್ಲಿ ಕಿರು ತಾರಾಲಯ ಸ್ಥಾಪನೆ.
-ಜ್ಞಾನ ಮತ್ತು ತಂತ್ರಜ್ಞಾನ ಕುರಿತ ಉನ್ನತ ಕಲಿಕಾ ಕೇಂದ್ರಗಳಲ್ಲಿ ಮಾಹಿತಿ ಗುಣಮಟ್ಟ ಇತ್ಯಾದಿಗಳನ್ನು ಮತ್ತಷ್ಟು ಉತ್ತಮಪಡಿಸುವ ಉದ್ದೇಶದಿಂದ 2016-17ನೇ ಸಾಲಿನಲ್ಲಿ 8 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News