×
Ad

ಗ್ರಾಮೀಣಾಭಿವೃದ್ಧಿಗೆ ಮತ್ತು ಪಂಚಾಯತ್‌ಗೆ 13,018 ಕೋಟಿ ರೂ.

Update: 2016-03-18 23:31 IST

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಖಾಖೆಗೆ ಒಟ್ಟಾರೆ 13, 018 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳದಿಂದಾಗಿ ಏರಿಕೆಯಾಗುವ ರಾಜಸ್ವದಿಂದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 2016-17ನೆ ಸಾಲಿನಲ್ಲಿ 3609 ಕೋಟಿ ರೂ.ಗಳನ್ನು ಖರ್ಚು ಮಾಡಲು ನಿರ್ಧರಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಾಂದ್ರತೆ ಹೆಚ್ಚಾಗಿರುವ ಗ್ರಾಮಗಳಿಗೆ ಅನುಕ್ರಮವಾಗಿ 6 ಕಿ ಮೀ ಮತ್ತು 3 ಕಿಮೀ ರಸ್ತೆ ನಿರ್ಮಾಣ. ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮದಲ್ಲಿ ಬಾಕಿಯಿರುವ 6188 ಕಾಮಗಾರಿಗಳನ್ನು 1980 ರೂ. ವೆಚ್ಚದಲ್ಲಿ ಪೂರ್ಣಗೊಳಿಸುವುದು. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ 353 ಎಕರೆ ಭೂಮಿ ಖರೀದಿಸಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗುವುದು.
ರಾಜ್ಯದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಸಿದ್ಧ ತಾಣಗಳ ಗ್ರಾಮಗಳ ಪುನರ್ ನಿರ್ಮಾಣ ಕಾರ್ಯಗಳನ್ನು 10 ಕೋಟಿ ರೂ.ಗಳನ್ನು ಕೈಗೊಳ್ಳಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವಾಲಯ ಮತ್ತು 30 ಜಿಲ್ಲಾ ಪಂಚಾಯತ್ ಕಚೇರಿಗಳನ್ನು ಕನಿಷ್ಟ ಕಾಗದ ಬಳಕೆಯ ಕಚೇರಿಯನ್ನಾಗಿ ಪರಿವರ್ತಿಸಲು 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News