×
Ad

ವೈದ್ಯಕೀಯ ಶಿಕ್ಷಣಕ್ಕೆ 1,614 ಕೋಟಿ ರೂ.

Update: 2016-03-18 23:35 IST

   


ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಟ್ಟಾರೆಯಾಗಿ 1,614 ಕೋಟಿ ರೂ.ಗಳನ್ನು ಒದಗಿಸಲಾಗಿದೆ. -ಕಾರವಾರ, ಚಾಮರಾಜನಗರ ಮತ್ತು ಮಡಿಕೇರಿಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು 2016-17ನೆ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗಲಿವೆ. -ಕಲಬುರಗಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು 50 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸುಧಾರಿತ ಹೆಚ್ಚುವರಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಎರಡನೆಯ ಹಂತದಲ್ಲಿ ಉನ್ನತೀಕರಿಸಲಾಗುವುದು.
-ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿ 150 ಎಂಬಿಬಿಎಸ್ ಸೀಟುಗಳ ಮಿತಿಯ ಒಂದು ಹೊಸ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲು ಉದ್ದೇಶಿಸಿದೆ.
-ಕೇಂದ್ರ ಸರಕಾರದ ಸಹಯೋಗದೊಂದಿಗೆ ಮಂಡ್ಯ, ಹಾಸನ, ಶಿವಮೊಗ್ಗ, ಬೆಳಗಾವಿ, ರಾಯಚೂರು ಮತ್ತು ಬೀದರ್ ಕಾಲೇಜುಗಳಲ್ಲಿನ ಎಂಬಿಬಿಎಸ್ ಪ್ರವೇಶ ಮಿತಿಯನ್ನು 100ರಿಂದ 150 ಸೀಟುಗಳಿಗೆ ಹೆಚ್ಚಿಸಲು ಕ್ರಮವಹಿಸಲಾಗುವುದು.

-ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ 46.35 ಕೋಟಿ ರೂ.ಗಳ ವೆಚ್ಚದಲ್ಲಿ ‘ಧಾರವಾಡದ ಮಾನಸಿಕ ಆರೋಗ್ಯ ಆಸ್ಪತ್ರೆ’ಯನ್ನು ನಿರ್ಮಿಸಲಾಗುವುದು.
-ಬೆಂಗಳೂರಿನ ಎಸ್‌ಡಿಎಸ್‌ಟಿಬಿ ಕ್ಷಯರೋಗ ಕೇಂದ್ರದ ಆವರಣದಲ್ಲಿನ ಗ್ಯಾಸ್ಟ್ರೊ ಎಂಟರೋಲಜಿ ಸಂಸ್ಥೆಯನ್ನು ಪ್ರತ್ಯೇಕವಾಗಿ 10 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಕ್ರಮವಹಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News