×
Ad

ವಸತಿ

Update: 2016-03-18 23:37 IST

ವಸತಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ 2016-17 ಮತ್ತು 2017-18ನೆ ಸಾಲಿನ ಗುರಿಗಳಿಗೆ ಅನುಗುಣವಾಗಿ ಆರು ಲಕ್ಷ ಫಲಾನುಭವಿಗಳನ್ನು (ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ ಅಡಿಯಲ್ಲಿ 2.5 ಲಕ್ಷ, ಬಸವ ಗ್ರಾಮೀಣ ವಸತಿ ಯೋಜನೆ ಅಡಿ 2.10ಲಕ್ಷ, ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ 80 ಸಾವಿರ, ವಾಜಪೇಯಿ ನಗರ ವಸತಿ ಯೋಜನೆ ಅಡಿ 40 ಸಾವಿರ ಮತ್ತು ‘ದೇವರಾಜ್ ಅರಸು ವಸತಿ ಯೋಜನೆ’ ಅಡಿ 20 ಸಾವಿರ ಮನೆಗಳು) ಏಕಕಾಲಕ್ಕೆ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. 2016-17ನೆ ವರ್ಷದಲ್ಲಿ 3 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುವುದು. ವಾಜಪೇಯಿ ನಗರ ವಸತಿ ಯೋಜನೆ ಅಡಿ 40 ಸಾವಿರ ಮನೆಗಳ ಘಟಕ ವೆಚ್ಚವನ್ನು ತಲಾ 3.5 ಲಕ್ಷ ರೂ.ಹೆಚ್ಚಿಸಲಾಗಿದೆ. ಈ ವೆಚ್ಚವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ 1.5ಲಕ್ಷ ರೂ. ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮತ್ತು ಇತರ ವರ್ಗದವರಿಗೆ ಕ್ರಮವಾಗಿ 1.8 ಲಕ್ಷ ರೂ. ಮತ್ತು 1.2 ಲಕ್ಷ ರೂ. ಸಹಾಯಧನವನ್ನು ಒಳಗೊಂಡಿದೆ. ಉಳಿದ ಮೊತ್ತವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ.
 10 ಸಾವಿರ ನಿವೇಶನಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 10 ಸಾವಿರ ನಿವೇಶಗಳನ್ನು ನಗರ ಪ್ರದೇಶಗಳಲ್ಲಿ ನಿವೇಶನ ರಹಿತ ಬಡ ಫಲಾನುಭವಿಗಳಿಗೆ ವಿತರಣೆಯ ಗುರಿ. ರಾಜ್ಯ ಗೃಹ ಮಂಡಳಿ ಮತ್ತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ನಡೆಸುವ ವಿವಿಧ ಚಟುವಟಿಕೆಗಳ ಗಣಕೀಕರಣ. 2016-17ನೆ ಸಾಲಿನಲ್ಲಿ 200 ಕೋಟಿ ರೂ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಗಳನ್ನು ಪ್ರಾರಂಭಿಸಲಾಗುವುದು. 2016-17ನೆ ಸಾಲಿನಲ್ಲಿ ವಸತಿ ಇಲಾಖೆಗೆ ಒಟ್ಟಾರೆಯಾಗಿ 3,890 ಕೋಟಿ ರೂ.ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News