×
Ad

ಮೂಲಸೌಲಭ್ಯ ಅಭಿವೃದ್ಧಿ

Update: 2016-03-18 23:37 IST

ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಒಟ್ಟಾರೆಯಾಗಿ 780 ಕೋಟಿ ರೂ. ಗಳನ್ನು ಒದಗಿಸಲಾಗಿದೆ.

ರಾಮನಗರ-ಮೈಸೂರು ಜೋಡಿ ಹಳಿ ಯೋಜನೆ ಸಂಚಾರಕ್ಕೆ ತೆರವುಗೊಳಿಸಲಾಗಿದೆ.
ಬಾಗಲ ಕೋಟೆ-ಕುಡುಚಿ, ಚಿಕ್ಕಮಗಳೂರು-ಸಕಲೇಶಪುರ, ಗದಗ-ವಾಡಿ, ತುಮಕೂರು-ರಾಯದುರ್ಗ ಮತ್ತು ಗಿಣಿಗೇರ-ರಾಯಚೂರು ರೈಲು ಮಾರ್ಗಗಳ ನಿರ್ಮಾಣಕ್ಕೆ ರಾಜ್ಯ ಸರಕಾರವು ಅನುಮೋದನೆ ನೀಡಿದ್ದು, ಭೂಸ್ವಾಧೀನಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ.
ರಸ್ತೆ ಮೇಲುಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣವನ್ನು ರೈಲ್ವೆ ಮಂತ್ರಾಲಯದೊಂದಿಗೆ ಶೇ.50:50 ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಸ್ತರಣೆಗಾಗಿ 588 ಎಕರೆ ಭೂಮಿ ಹಸ್ತಾಂತರಿಸಲಾಗಿದೆ. ಇದರಿಂದ ಎ320 ಮತ್ತು ಎ321 ಮಾದರಿಯ ವಿಮಾನಗಳ ಹಾರಾಟ ಸಾಧ್ಯವಾಗಲಿದೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ 370 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ರನ್‌ವೇ ವಿಸ್ತರಣಾ ಮತ್ತು ವಿಮಾನ ನಿಲ್ದಾಣಗಳ ವಿಸ್ತರಣೆಯು 2016-17ರಲ್ಲಿಪೂರ್ಣಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News