×
Ad

ಇಂಧನ

Update: 2016-03-18 23:41 IST

 ಬೆಂಗಳೂರು, ಮಾ.18: ಇಂಧನ ಇಲಾಖೆಗೆ ಒಟ್ಟಾರೆ 12,632 ಕೋಟಿ ರೂ.ಒದಗಿಸಲಾಗಿದೆ. ರಾಜ್ಯವು 2016-17ನೆ ಸಾಲಿನಲ್ಲಿ ಯರಮರಸ್ ಘಟಕ-2ರಿಂದ 800 ಮೆ.ವಾ, ಕೇಂದ್ರ ಉತ್ಪಾದನಾ ಘಟಕದಿಂದ 705.40 ಮೆ.ವ್ಯಾ.ಮತ್ತು ಪರ್ಯಾಯ ಇಂಧನ ಮೂಲಗಳಿಂದ 1,150 ಮೆ.ವ್ಯಾ ಸೇರಿ 2,655.40 ಮೆ.ವ್ಯಾಟ್‌ಗಳಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಯೋಜನೆ ರೂಪಿಸಿದೆ. ಯಲಹಂಕದಲ್ಲಿ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪಿಸುವ ಕಾರ್ಯವು 2016-17ರಲ್ಲಿ ಪ್ರಾರಂಭವಾಗಲಿದೆ. 1,320 ಮೆ.ವ್ಯಾ. ಗುಲ್ಬರ್ಗಾ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಬಿಡ್‌ಗಳನ್ನು ಆಹ್ವಾನಿಸಲಾಗುವುದು. ಕೆಪಿಸಿಎಲ್ ವತಿಯಿಂದ 200 ಮೆ.ವ್ಯಾ ಸೌರವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಕಾರ್ಯವು ಪ್ರಾರಂಭವಾಗಲಿದೆ.

2 ಸಾವಿರ ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಪಾರ್ಕ್‌ನ್ನು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಸ್ಥಾಪಿಸಲು ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಮುಂದಿನ ಸಾಲಿನ ಮಾರ್ಚ್ ಅಂತ್ಯಕ್ಕೆ ಸುಮಾರು 600 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುವ ಸಂಭವವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News