×
Ad

ಕಂದಾಯ ಇಲಾಖೆ: 5,532 ಕೋಟಿ ರೂ.ಅನುದಾನ

Update: 2016-03-18 23:42 IST

ಕಂದಾಯ ಇಲಾಖೆಗೆ ಒಟ್ಟಾರೆ 5,532 ಕೋಟಿ ರೂ.ಒದಗಿಸಲಾಗಿದೆ. ಭೂ ಮಾಲಕರಿಗೆ ಪಹಣಿ ಪತ್ರದಲ್ಲಿ ಆಗುವ ಬದಲಾವಣೆಗಳ ಕುರಿತು ಎಸ್‌ಎಂಎಸ್ ಮೂಲಕ ಮಾಹಿತಿ ರವಾನೆ ಮಾಡಲು ತಂತ್ರಾಂಶ ಅಭಿವೃದ್ಧಿ. ಸೆಕ್ಷನ್ 109 ಅಡಿಯಲ್ಲಿ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಿ ಸಕಾಲದಲ್ಲಿ ವಿಲೇ ಮಾಡಲು ತಂತ್ರಾಂಶ ಅಭಿವೃದ್ಧಿ.
 ಸ್ಪಂದನ ಜನಸೇವಾ ಏಕಗವಾಕ್ಷಿ ಕೇಂದ್ರಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸುವುದು. ಪೋಡಿ ಮುಕ್ತ ಗ್ರಾಮ ಯೋಜನೆಯನ್ನು 1,500 ಹಳ್ಳಿಗಳಿಗೆ ವಿಸ್ತರಣೆ. ಗ್ರಾಮ ಸಹಾಯಕರಿಗೆ ನೀಡಲಾಗುತ್ತಿರುವ ಮಾಸಿಕ ಗೌರವಧನ 7 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಹೆಚ್ಚಳ. ನೋಂದಣಿ ಇಲಾಖೆಯಲ್ಲಿ 1857ನೆ ಇಸವಿಯಿಂದ ಇರುವ ಶಾಶ್ವತ ದಾಖಲೆಗಳನ್ನು ಸ್ಕಾನ್ ಮಾಡಿ, ಮೈಕ್ರೋ ಫಿಲ್ಮ್ ಮತ್ತು ಮೈಕ್ರೋಫಿಶ್ ರೂಪದಲ್ಲಿ ಸಂರಕ್ಷಿಸಿಡುವ ಕಾರ್ಯಕ್ರಮವನ್ನು ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ 301 ಕೋಟಿ ರೂ.ವೆಚ್ಚದಲ್ಲಿ ತೆಗೆದುಕೊಳ್ಳಲು ನಿರ್ಧಾರ.
5 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರಿಗೆ ಸಂಬಂಧಿಸಿದ ಸ್ಮಾರಕಗಳು, ಪಾರಂಪರಿಕ ಕಟ್ಟಡಗಳು ಇತ್ಯಾದಿಗಳ ಸಂರಕ್ಷಣೆಗೆ ಮತ್ತು ಅಭಿವೃದ್ಧಿ ಉದ್ದೇಶದೊಂದಿಗೆ ನಾಡಪ್ರಭು ಕೆಂಪೇಗೌಡ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News