ಸಣ್ಣ ನೀರಾವರಿ
ಕೋರಮಂಗಲ ಚಲ್ಲಘಟ್ಟ ಕಣಿವೆ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳನ್ನು ಏತನೀರಾವರಿ ಮೂಲಕ ತುಂಬಿಸುವ ಯೋಜನೆಯನ್ನು 1,280 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೂಡಲೇ ಪ್ರಾರಂಭಿಸುವುದು. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಆಯ್ದ ಕೆರೆಗಳಿಗೆ ಹೆಬ್ಬಾಳ ಕಣಿವೆಯಿಂದ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಿ ತುಂಬಿಸುವ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸುವುದು.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಸುಮಾರು 60 ಕೆರೆಗಳಿಗೆ ದಕ್ಷಿಣ ಪಿನಾಕಿನಿ ನದಿಗೆ ಹರಿಯುತ್ತಿರುವ ಬೆಂಗಳೂರು ನಗರದ ಸಂಸ್ಕರಿಸಿದ ಕೊಳಚೆ ನೀರನ್ನು ತುಂಬಿಸಲು ಮುತ್ತಸಂದ್ರ ಗ್ರಾಮದ ಸಮೀಪ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವುದು. 2016-17ನೆ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆಗೆ ಒಟ್ಟಾರೆಯಾಗಿ 14,477 ಕೋಟಿ ರೂ.ಒದಗಿಸಲಾಗಿದೆ. ಜಲಸಂಪನ್ಮೂಲ ವಲಯಕ್ಕೆ ನಾವು 5 ವಷರ್ದಲ್ಲಿ 50 ಸಾವಿರ ಕೋಟಿ ರೂ. ಒದಗಿಸಲು ಬದ್ಧತೆಯನ್ನು ವ್ಯಕ್ತಪಡಿಸಿದ್ದೆವು. ಈ ವಷರ್ದ ಹಂಚಿಕೆಯೊಡನೆ ನಮ್ಮ ಸರಕಾರದಿಂದ 2013-14ರಿಂದ ಈ ವಲಯಕ್ಕೆ ನೀಡಲ್ಪಟ್ಟ ಅನುದಾನದ ಮೊತ್ತ 46,931 ಕೋಟಿ ರೂ. ಎಂಬುದಾಗಿ ತಿಳಿಸಲು ಹರ್ಷಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.