ಕ್ರೀಡಾ ಮತ್ತು ಯುವಜನ ಸೇವೆಯ ಹೊಸ ಯೋಜನೆಗಳು
Update: 2016-03-18 23:44 IST
ಜನಪ್ರಿಯ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಉತ್ತೇಜಿಸುವ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ರಾಜ್ಯ ಕಬಡ್ಡಿ ಆಟಗಾರರನ್ನು ತಯಾರು ಮಾಡುವ ದಿಸೆಯಲ್ಲಿ ಪ್ರತಿಯೊಂದು ಜಿಲ್ಲೆಗೂ ಎರಡು ಕಬಡ್ಡಿ ಮ್ಯಾಟ್‌ಗಳನ್ನು ಒದಗಿಸಲಾಗುವುದು. ಈ ಉದ್ದೇಶಕ್ಕಾಗಿ 3.60 ಕೋಟಿ ರೂ. ಹಂಚಿಕೆ ಮಾಡಲಾಗುವುದು.
ಒಲಂಪಿಕ್‌ನ ಎಲ್ಲ ಕ್ರೀಡಾ ವಿಭಾಗಗಳಲ್ಲಿ ಎಲ್ಲ ವಯೋಮಾನ ಪ್ರವರ್ಗಗಳಿಗಾಗಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ನಡೆಸುವ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕಾಗಿ 3 ಕೋಟಿ ರೂ. ಅನುದಾನವನ್ನು ಒದಗಿಸುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಆಯ್ದ ಗ್ರಾಮಗಳಲ್ಲಿ ವಾಲಿಬಾಲ್, ಕಬಡ್ಡಿ, ಖೋಖೋ ಹಾಗೂ ಥ್ರೋಬಾಲ್ ಅಂಕಣಗಳಂಥ ಸೌಲಭ್ಯಗಳುಳ್ಳ ಆಟದ ಮೈದಾನಗಳನ್ನು ಅಭಿವೃದ್ಧಿಪಡಿಸುವುದು.
ಯುವಜನ ಸೇವೆ ಇಲಾಖೆಯಿಂದ ಗ್ರಾಮಗಳಲ್ಲಿ ಯುವಜನ ಕ್ರೀಡಾ ಸಂಘಗಳನ್ನು ರಚಿಸಿ ಅವುಗಳಿಗೆ ಕ್ರೀಡಾ ಸಲಕರಣೆಗಳನ್ನು ಒದಗಿಸುವುದು.