ಜಲಸಂಪನ್ಮೂಲ
2ನೆ ಹಂತದ ರಾಮ್‌ಥಾಲ್ ನೀರಾವರಿ ಯೋಜನೆಯಡಿಯಲ್ಲಿ 60 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಅಳವಡಿಕೆ. 2016-17ನೆ ಸಾಲಿನಲ್ಲಿ ಸುಮಾರು 3 ಸಾವಿರ ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕೊಳಚಿ ಬಲದಂಡೆ ಕಾಲುವೆಗಳ ಆಧುನೀಕರಣ, ಮಾರೇಹಳ್ಳಿ ಕೆರೆ ಕಾಲುವೆಗಳ ಆಧುನೀಕರಣ, ಹಾರಂಗಿ ಬಲದಂಡೆ ನಾಲೆಯ ಅಭಿವೃದ್ಧಿ, ತಾರಕ ಬಲದಂಡೆ ನಾಲೆಯ ಅಭಿವೃದ್ಧಿ, ಹೆಬ್ಬಾಳ್ಳ ಚೆನ್ನಯ್ಯ ಮುಖ್ಯ ಕಾಲುವೆಯ ಆಧುನೀಕರಣ, ಹೇಮಾವತಿ ಬಲದಂಡೆ ನಾಲೆಯ ತರಣಾ ನಾಲೆ 35 ರ ಆಧುನೀಕರಣ, ಕಬಿನಿ ಬಲದಂಡೆ ನಾಲೆ ತರಣಾ ನಾಲೆಗಳ ಅಭಿವೃದ್ಧಿ, ಶಿಂಷಾ ಬಲದಂಡೆ ನಾಲೆಯ ಆಧುನೀಕರಣ, ನುಗು ಯೋಜನೆಯ ಮೇಲ್ಮಟ್ಟದ ನಾಲೆಯ ಆಧುನೀಕರಣ, ತಾರಕ ಎಡದಂಡೆ ನಾಲೆಯ ಆಧುನೀಕರಣ, ಪೂರಿಗಾಲಿ ಸಮಗ್ರ ಹನಿ/ತುಂತುರು ನೀರಾವರಿ ಯೋಜನೆ, ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನಡಿ 16 ಕೆರೆಗಳನ್ನು ತುಂಬಿಸುವ ಸಂಕ ಮತ್ತು ಬುಯ್ಯಿರ್ ಯೋಜನೆಗಳು, ಕೂಡಲಸಂಗಮ-ಅಡಹಾಳ ಸೇತುವೆ ನಿರ್ಮಾಣ.
ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನಡಿ ಜಟ್ಟೂರು ಗ್ರಾಮದ ಬಳಿ ಕಾಗಿನ ನದಿಗೆ ಅಡ್ಡಲಾಗಿ ಜಟ್ಟೂರು ಬ್ರಿಡ್ಜ್ ಕಂ ಬ್ಯಾರೇಜ್, ನಂದವಾಡಗಿ ಏತ ನೀರಾವರಿ ಯೋಜನೆ, ವೆಂಕಟೇಶ್ವರ ಏತ ನೀರಾವರಿ ಯೋಜನೆಯ ಅನುಷ್ಠಾನ, ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಅನುಷ್ಠಾನ, ಬೆಣ್ಣೆತೊರ ಯೋಜನೆಯ ಆಧುನೀಕರಣ, ಪಿರಿಯಾಪಟ್ಟಣದ ಮುತ್ತಿನಮುಳಿಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರು ಎತ್ತಿ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕಾರಂಜ ಯೋಜನೆ ಮತ್ತು ಚುಲ್ಕಿ ಯೋಜನೆಗಳನ್ನು 2016-17ನೆ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.ಇದಲ್ಲದೇ 962 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಲಪ್ರಭಾ ನಾಲಾ ಆಧುನೀಕರಣ ಕಾಮಗಾರಿ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಶೀಘ್ರ ಹಾಗೂ ಪರಿಣಾಮಕಾರಿ ಅನುಷ್ಠ್ಠಾನಕ್ಕಾಗಿ ಸಮನ್ವಯ ಸಮಿತಿ ರಚನೆ. ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗಾಗಿಯೇ ಪ್ರತ್ಯೇಕ ನಿಗಮವನ್ನು ರಚನೆ. ಎತ್ತಿನಹೊಳೆ ಯೋಜನೆ ಜೊತೆಗೆ ಬೇರೆ ಬೇರೆ ಮೂಲಗಳಿಂದ ದೊರಕಬಹುದಾದ ಪರ್ಯಾಯ ನೀರಿನ ಲಭ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಬರ ಪೀಡಿತ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಬಗ್ಗೆ ವರದಿ ಸಲ್ಲಿಸಲು ತಜ್ಞರ ಸಮಿತಿ ರಚನೆ.