×
Ad

ಕೃಷಿ: 4,344 ಕೋಟಿ ರೂ.ಅನುದಾನ

Update: 2016-03-18 23:49 IST

ರಾಜ್ಯದ ರೈತರ ಸಂಕಷ್ಟವನ್ನು ನಿವಾರಣೆ ಮಾಡಲು ಹಾಗೂ ಕೃಷಿ ಮತ್ತು ಇತರೆ ಇಲಾಖೆಗಳ ಕಾರ್ಯಕ್ರಮಗಳನ್ನು ಒಗ್ಗೂಡಿಸಲು ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚನೆ.

ಕೈಗಾರಿಕೆಗಳಿಗಾಗಿ ರಚಿಸಿರುವ ವಿಶೇಷ ಆರ್ಥಿಕ ವಲಯಗಳ ಮಾದರಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷ ಕೃಷಿ ವಲಯಗಳನ್ನು (Special Agricultural Zones) ಗುರುತಿಸಿ ರೈತರು ಹಾಗೂ ಅವರು ಅಳವಡಿಸಬಹುದಾದ ಪರಿಣಾಮಕಾರಿ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು.

ಸುವರ್ಣ ಕೃಷಿ ಗ್ರಾಮ ಯೋಜನೆ: ರಾಜ್ಯದ ಪ್ರತಿ ಕಂದಾಯ ವಿಭಾಗ ಕ್ಕೊಂದರಂತೆ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು ನೂರು ಗ್ರಾಮಗಳನ್ನು ಮಾದರಿ ಕೃಷಿ ಗ್ರಾಮಗಳನ್ನಾಗಿ ಮಾಡಲು ‘ಸುವರ್ಣ ಕೃಷಿ ಗ್ರಾಮ’ ಯೋಜನೆ ಜಾರಿಗೆ ತರಲಾಗುವುದು. 2016ನೆ ವರ್ಷವನ್ನು ಅಂತಾರಾಷ್ಟ್ರೀಯ ದ್ವಿದಳಧಾನ್ಯ ವರ್ಷವಾಗಿ ಆಚರಿಸುತ್ತಿರುವುದರಿಂದ ದ್ವಿದಳಧಾನ್ಯಗಳ ಉತ್ಪಾದಕತೆಯನ್ನು ಹೆಚ್ಚಿಸಲು ದ್ವಿದಳಧಾನ್ಯ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಆರ್‌ಕೆವಿವೈ, ಕೃಷಿ ಭಾಗ್ಯ ಹಾಗೂ ‘ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ’ ಅಡಿಯಲ್ಲಿ 1 ಲಕ್ಷ ರೈತರಿಗೆ ಶೇ.90ರಷ್ಟು ಸಹಾಯಧನದಲ್ಲಿ ತುಂತುರು ಹಾಗೂ ಹನಿ ನೀರಾವರಿ ಘಟಕಗಳನ್ನು ಒದಗಿಸಲಾಗುವುದು. ಈ ಉದ್ದೇಶಕ್ಕಾಗಿ 2016-17ನೆ ಸಾಲಿನಲ್ಲಿ 300 ಕೋಟಿ ರೂ. ಒದಗಿಸಲಾಗುವುದು.

ಸಾವಯವ ಭಾಗ್ಯ ಯೋಜನೆಯನ್ನು ಬಲಪಡಿಸಲು ಸ್ಥಾಪಿಸಲಾಗಿರುವ 14 ಪ್ರಾಂತೀಯ ಒಕ್ಕೂಟಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲ ಅವಶ್ಯವಿರುವ ಸಂಗ್ರಹಣಾ ವ್ಯವಸ್ಥೆ(ಗೋದಾಮು), ಸಾಗಾಣಿಕೆ, ಕ್ಲೀನಿಂಗ್/ವರ್ಗೀಕರಣ, ಪ್ಯಾಕಿಂಗ್, ಗುಣ ನಿಯಂತ್ರಣಕ್ಕಾಗಿ ಪ್ರಯೋಗಾಲಯ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ 10 ಕೋಟಿ ರೂ. ಒದಗಿಸಲಾಗುವುದು.

ಅತಿವೃಷ್ಠಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟವುಂಟಾದಾಗ ರೈತನ ನೆರವಿಗೆ ಬರಲು ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಸಲ್ ಬಿಮಾ ಯೋಜನೆ’ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ ರಾಜ್ಯ ಸರಕಾರದಿಂದ 675.38 ಕೋಟಿ ರೂ.ವಂತಿಗೆ ನೀಡಲು ನಿರ್ಧಾರ.

ಕೃಷಿ ಹಾಗೂ ಕೃಷಿ ಸಂಬಂತ ಚಟುವಟಿಕೆಗಳಿಗೆ ನೆರವಾಗುವ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನಗಳನ್ನು ಬಳಸಿ ಉದ್ದಿಮೆ ಸ್ಥಾಪಿಸಲು ‘ಕೃಷಿ ನವೋದ್ಯಮ’ಯೋಜನೆ ಸ್ಥಾಪನೆಗೆ 10 ಕೋಟಿ ರೂ.ಸೇರಿದಂತೆ 2016-17ನೇ ಸಾಲಿನಲ್ಲಿ ಕೃಷಿ ಇಲಾ ಖೆಗೆ ಒಟ್ಟಾರೆಯಾಗಿ 4344 ಕೋಟಿ ರೂ. ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News