×
Ad

ಬಿಜೆಪಿಯಿಂದ ದೇಶದಲ್ಲಿ ಹಿಟ್ಲರ್ ಕಾರ್ಯತಂತ್ರ ಪ್ರಯೋಗ: ಸಚಿವ ದಿನೇಶ್ ಗುಂಡೂರಾವ್

Update: 2016-03-19 22:36 IST

ಬೆಂಗಳೂರು, ಮಾ. 19: ನರೇಂದ್ರ ಮೋದಿ ಬಿಜೆಪಿ ಸರಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಂಘ ಪರಿವಾರಗಳ ಮೂಲಕ ದೇಶದಲ್ಲಿ ಹಿಟ್ಲರ್ ಕಾರ್ಯತಂತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸಚಿವ ದಿನೇಶ್‌ಗುಂಡೂರಾವ್ ಆರೋಪಿಸಿದ್ದಾರೆ.
ಶನಿವಾರ ನಗರದ ಕಾಂಗ್ರೆಸ್ ವನದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿಒಕ್ಕೂಟ ಆಯೋಜಿಸಿದ್ದ ರಾಜ್ಯ ಕಾರ್ಯ ಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ವಿಚಾರಗಳನ್ನು ವ್ಯಕ್ತಪಡಿಸುವಂತಿಲ್ಲ, ಇಷ್ಟ ಬಂದ ಊಟವನ್ನು ತಿನ್ನುವಂತಿಲ್ಲ, ಇಷ್ಟವಾದ ಧರ್ಮವನ್ನು ಅನುಸರಿಸುವಂತಿಲ್ಲ, ಬಿಜೆಪಿ ಸಂಘ ಪರಿವಾರಗಳ ಧೋರಣೆಗಳ ವಿರುದ್ಧ ಪ್ರತಿಭಟಿಸುವ ಹಕ್ಕಿಲ್ಲದಂತಾಗಿದೆ ಎಂದರು.
ಒಟ್ಟಾರೆ ಕೇಂದ್ರ ಸರಕಾರ ಸಂಘಪರಿವಾರಗಳ ಮೂಲಕ ೇಶ ದಲ್ಲಿ ಸರ್ವಾಧಿಕಾರಿ ಹಿಟ್ಲರ್ ಕಾರ್ಯತಂತ್ರವನ್ನು ಪ್ರಯೋಗ ಮಾಡುತ್ತಿ ದ್ದಾರೆ. ಈ ಮೂಲಕ ದೇಶಲ್ಲಿ ಸಂಘ ಪರಿವಾರದ ವಿರುದ್ಧ ಧ್ವನಿಎತ್ತುವವರನ್ನು ದಮನ ಮಾಡುತ್ತಿ ದ್ದಾರೆ. ಅಲ್ಲದೆ ದೇಶದ ಅಸಹನೆಗೆ ಸಂಘ ಪರಿವಾರದವರೇ ಪುಷ್ಟಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
 ಬಿಜೆಪಿಯವರಿಗೆ ಸ್ವಾಮಿ ವಿವೇಕಾ ನಂದರು, ಭಗತ್‌ಸಿಂಗ್, ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಸಿದ್ಧಾಂತಕ್ಕೆ ಯಾವುದೇ ಹೊಂದಾಣಿಕೆ ಇಲ್ಲ. ಆದರೂ ಬಿಜೆಪಿ ನಾಯಕರು ಅವರನ್ನು ಹೈಜಾಕ್ ಮಾಡಿಕೊಂಡು ಅವರ ಫೋಟೊಗಳನ್ನು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಆದರೆ ಈ ಮಹಾ ನುಭಾವರ ಸಿದ್ಧಾಂತಗಳನ್ನು ಮಾತ್ರ ಪಾಲಿಸುತ್ತಿಲ್ಲ ಎಂದು ದೂರಿದರು.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಐಐಟಿ ಕಾಲೇಜಿನಲ್ಲಿ ನಡೆದ ಪ್ರಕರಣ, ಹೈದರಾಬಾದ್‌ನ ವಿಶ್ವವಿದ್ಯಾನಿಲಯದ ರೋಹಿತ್ ವೇಮುಲಾ ಪ್ರಕರಣ, ಪೂನಾದ ಫಿಲ್ಮ್ ಇನ್ಸ್‌ಟಿಟ್ಯೂಟ್ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ದಿಲ್ಲಿಯ ಜವಾಹರಲಾಲ್ ನೆಹು ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನೆಳೇ ತಾಜಾ ಉದಾಹರಣೆ. ಇಂತಹ ದರ ವಿರುದ್ಧ ವಿದ್ಯಾರ್ಥಿ ಕಾಂಗ್ರೆಸ್ ಹೋರಾ
 ಡುವ ಅಗತ್ಯವಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಕೂಡ ವಿದ್ಯಾರ್ಥಿ ಸಂಘಟನೆಗಳಿಗೆ ಹೆಚ್ಚಿನ ಒತ್ತು ನೀಡಿರ ಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ವಿದ್ಯಾರ್ಥಿ ಕಾಂಗ್ರೆಸ್ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸಲಿ, ಆದರೆ ಅದು ವಿದ್ಯಾರ್ಥಿಗಳ ಪರವಾಗಿರಬೇಕು ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಎನ್‌ಎಸ್‌ಯುಐನ ರಾಷ್ಟ್ರಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಸಾಮಾಜಿಕ ಸಮಸ್ಯೆ ಮತ್ತು ವಿದ್ಯಾರ್ಥಿ ಹಕ್ಕುಗಳ ಪರ ಹೋರಾಟ ಮಾಡುವ ಕ್ರಾಂತಿಕಾರಿ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗುತ್ತಿದೆ. ದೇಶದಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆತಂಕಪಟ್ಟರು.
ಕಾರ್ಯಕ್ರಮದಲ್ಲಿ ಪದಾಧಿಕಾರಿ ಗಳಾದ ವಿ.ಎಸ್.ಆರಾಧ್ಯ, ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್‌ಕುಮಾರ್, ಎನ್.ಎಸ್.ಯು.ಐ. ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಭಾರತ್ ಮಾತಾ ಕಿ ಜೈ, ಇಂಕ್ವಿಲಾಬ್ ಜಿಂದಾಬಾದ್, ವಂದೇಮಾತರಂ ಘೋಷಣೆಗಳನ್ನು ಬಿಜೆಪಿ ತಮ್ಮ ಪಕ್ಷದ ಘೋಷಣೆಗಳೆಂದೇ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇವು ಸರ್ವ ಜನಾಂಗದ ಘೋಷಣೆಗಳು ಎಂಬುದು ಅವರ ಅರಿವಿಗೆ ಬಂದಿಲ್ಲ.                                                                                                                 -ದಿನೇಶ್ ಗುಂಡೂರಾವ್ ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News