×
Ad

ಬಡವರ ಹಣದಲ್ಲಿ ಮಜ ಮಾಡುತ್ತಿರುವ ಉದ್ಯಮಿಗಳು

Update: 2016-03-19 23:40 IST

ತುಮಕೂರು, ಮಾ.19: ಬಡವರು ಬ್ಯಾಂಕಿನಲ್ಲಿ ಕೂಡಿಟ್ಟ ಹಣವನ್ನು ಕೆಲ ಉದ್ಯಮಿಗಳು ಸಾಲ ಪಡೆದು ಮಜ ಮಾಡುತ್ತಿದ್ದು, ಇದರ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.

ಲೀಡ್ ಬ್ಯಾಂಕ್ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಸಿದ್ದ 2016-17ನೆ ಸಾಲಿನ ತುಮಕೂರು ಜಿಲ್ಲಾ ಸಾಲ ಯೋಜನೆ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ 130 ಕೋಟಿಗೂ ಅಕ ದೇಶವಾಸಿಗಳ ಸಂಪತ್ತು ಕೆಲವೇ ಕೆಲವು ಕಾರ್ಪೊರೇಟ್ ಸಂಸ್ಥೆಗಳ ಹಿಡಿತದಲ್ಲಿರುವುದರಿಂದ ಶ್ರೀಸಾಮಾನ್ಯರಿಗೆ ಸಾಲ ಸೌಲಭ್ಯ ದೊರೆಯುತ್ತಿಲ್ಲ. ದೇಶದ ಜನಸಾಮಾನ್ಯರಿಗೆ ಸಾಲ ನೀಡಲು ಸರಕಾರದಿಂದಲೇ ಮಾನ್ಯತೆ ಪಡೆದ ರಾಷ್ಟ್ರೀಕೃತ ಬ್ಯಾಂಕ್‌ಗಳು ಹತ್ತಾರು ಕಾನೂನುಗಳನ್ನು ರೂಪಿಸಿ ಇಲ್ಲ ಸಲ್ಲದ ದಾಖಲೆಗಳನ್ನು ಕೇಳುತ್ತವೆ. ಆದರೆ, ಕಾರ್ಪೊರೇಟ್ ವಲಯದ ಸಂಸ್ಥೆಗಳಿಗೆ ಅವುಗಳ ಭದ್ರತೆ ಹಾಗೂ ಆಸ್ತಿಗಿಂತ ಹೆಚ್ಚಿನ ಪ್ರಮಾಣ ಸಾಲ ನೀಡಿ ವಸೂಲಿ ಮಾಡಲಾಗದೆ ಪರದಾಡುವುದು ದುರಾದೃಷ್ಠಕರ ಸಂಗತಿ ಎಂದರು.ೀ ದೇಶದಲ್ಲಿ ರೈತರ ಸಾಲ ಇರುವುದು ಕೇವಲ 65 ಸಾವಿರ ಕೋಟಿ ರೂ. ಆದರೆ, ಕಾರ್ಪೊರೇಟ್ ವಲಯದ ಸಾಲದ ಪ್ರಮಾಣ 1 ಲಕ್ಷ ಕೋಟಿ ರೂ. ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವನೆಗಳು ಬಂದರೆ ರೈತರಿಂದ ಬ್ಯಾಂಕುಗಳು ನಷ್ಟ ಅನುಭವಿಸುತ್ತವೆ ಎಂದು ಬೊಬ್ಬಿಡುವ ಬ್ಯಾಂಕ್ ಅಕಾರಿಗಳು, ಉದ್ಯಮಿಗಳಿಗೆ ಅವರ ಆಸ್ತಿಗಿಂತ ಹೆಚ್ಚು ಸಾಲ ನೀಡಿ ವಸೂಲಿ ಮಾಡಲಾಗದೆ ಪರಿತಪಿಸುತ್ತಿವೆ. ಈ ರೀತಿಯ ತಾರತಮ್ಯ ನೀತಿಯನ್ನು ಬ್ಯಾಂಕ್‌ಗಳು ಕೈಬಿಡಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸಿರುವ ಅನೇಕ ಯೋಜನೆಗಳು ಅರ್ಹ ಬಡವರಿಗೆ ತಲುಪುತ್ತಿಲ್ಲ. ಅವುಗಳ ಬಗ್ಗೆ ಬ್ಯಾಂಕ್ ಹಾಗೂ ಸ್ಥಳೀಯ ಸಂಸ್ಥೆಗಳು ಅರಿವು ಮೂಡಿಸಬೇಕಿದೆ ಎಂದ ಸಂಸದರು, ಬ್ಯಾಂಕ್ ಅಕಾರಿಗಳು ಮತ್ತು ಸಿಬ್ಬಂದಿ ಆರ್ಹ ಲಾನುಭವಿಗಳನ್ನು ಗುರುತಿಸಿ ಸೌಲಭ್ಯ ನೀಡಲು ಯೋಜನೆ ರೂಪಿಸಬೇಕು ಎಂದರು.ಬ್ರಾಂಡ್ ಹೆಸರಿನಲ್ಲಿ ಸಾಲ ನೀಡುವುದು ನಿಲ್ಲಬೇಕು:ಸರಿಯಾದ ದಾಖಲೆ, ಆಸ್ತಿ ಭದ್ರತೆ ಇಲ್ಲದೆ ಇದ್ದರೂ ಸಹ ಕಂಪೆನಿಯ ಬ್ಯಾಂಡ್ ಹೆಸರಿಗೆ ಮಾರುಹೋಗಿ ಕೋಟ್ಯಂತರ ರೂ. ಸಾಲ ನೀಡುವ ಪದ್ದತಿಯನ್ನು ಬ್ಯಾಂಕ್‌ಗಳು ನಿಲ್ಲಿಸಬೇಕು. ಅಂತವರಿಗೆ ಹಣ ನೀಡುವುದರಿಂದ ದೇಶದ ಗ್ರಾಮೀಭ ಭಾಗದ ಜನರು ಆರ್ಥಿಕ ಸದೃಢತೆಯನ್ನು ಸಾಸಲು ಸಾಧ್ಯವಿಲ್ಲ ಎಂದರು.ಪಂ ಸಿಇಒ ಡಾ.ಬಿ.ಆರ್.ಮಮತಾ ಮಾತನಾಡಿ, ಈ ವರ್ಷದ ಸಾಲ ಯೋಜನೆಯಲ್ಲಿ ಆದ್ಯತಾ ವಲಯಕ್ಕೆ ಶೇ.84ರಷ್ಟು ಹಣವನ್ನು ಮೀಸಲಿಡಲಾಗಿದೆ. ಹಾಗೆಯೇ ಕೃಷಿ ವಲಯಕ್ಕೆ 2,514 ಕೋಟಿ ಅಂದರೆ ಒಟ್ಟಾರೆ ಯೋಜನೆಯ ಶೇ.52ರಷ್ಟು ಪಾಲು ನೀಡಲಾಗಿದೆ. ಅನೇಕ ವರ್ಷಗಳಿಂದ ಅರ್ಹರಿಗೆ ಸೌಲಭ್ಯ ದೊರೆಯುವುದಿಲ್ಲ ಎಂಬ ದೂರುಗಳಿದ್ದರೂ ಸಹ ಈ ವರ್ಷ ಯೋಜನೆಯ ಪ್ರಕಟನೆ ನೀಡಿದ ನಂತರ ಬಂದ ಎಲ್ಲಾ ಅರ್ಜಿಗಳನ್ನು ಬ್ಯಾಂಕ್‌ಗಳಿಗೆ ಕಳುಹಿಸಿಕೊಡಲಾಗಿದೆ ಎಂದರು.
ಬ್ಯಾಂಕ್‌ಗಳ ಸಾಮಾಜಿಕ ಕಳಕಳಿಯ ಭಾಗವಾಗಿ ಗ್ರಾಮಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗಬೇಕು. ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೋತ್ಸಾಹ ಹಾಗೂ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯಾವಸ್ಥಾಪಕ ಜಯರಾಮಯ್ಯ, ಎಸ್‌ಬಿಎಂ ಕೇಂದ್ರ ಕಚೇರಿಯ ಜಿಎಂ ಸುರೇಶ್, ಡಿಜಿಎಂ ಮುರುಳೀಧರನ್.ವಿ, ಕೆ.ಸ್ವರೂಪ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವೀರಭದ್ರನ್, ಆರ್‌ಬಿಐ ಎಲ್‌ಡಿಒ ಡಾ.ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.

5,256 ಕೋಟಿ ರೂ. ಸಾಲ ಯೋಜನೆ 
ತುಮಕೂರು: ಪ್ರಸಕ್ತ ಹಣಕಾಸು ವರ್ಷವಾದ 2016-17ನೆ ಸಾಲಿಗೆ ಒಟ್ಟು ಸಾಲ ಯೋಜನೆ ರೂ.5,256 ಕೋಟಿ ಆಗಿದ್ದು, ಆದ್ಯತಾ ವಲಯದ ಸಾಲಗಳಿಗೆ 4,540 ಕೋಟಿ ರೂ. ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಮೊತ್ತದಲ್ಲಿ ಬೆಳೆ ಸಾಲಕ್ಕೆ 1,834 ಕೋಟಿ ರೂ., ಸಣ್ಣ ನೀರಾವರಿಗೆ 125 ಕೋಟಿ ರೂ., ಭೂ ಅಭಿವೃದ್ಧಿಗೆ 173 ಕೋಟಿ ರೂ., ಕೃಷಿ ಯಾಂತ್ರೀಕರಣಕ್ಕೆ 94 ಕೋಟಿ ರೂ., ತೋಟಗಾರಿಕೆಗೆ 84 ಕೋಟಿ ರೂ., ಇತರೆ 67 ಕೋಟಿ ರೂ., ಹೈನುಗಾರಿಕೆ 72 ಕೋಟಿ, ಕೋಳಿ ಸಾಕಣೆ 21 ಕೋಟಿ ರೂ., ಕುರಿ-ಮೇಕೆ, ಹಂದಿ ಸಾಕಣೆಗೆ 26 ಕೋಟಿ ರೂ., ಮೀನುಗಾರಿಕೆಗೆ 1 ಕೋಟಿ ರೂ., ಅರಣ್ಯಾಭಿವೃದ್ಧಿ ಮತ್ತು ಇತರೆ 17 ಕೋಟಿ ರೂ., ಗುಡಿ ಮತ್ತು ಸಣ್ಣ ಕೈಗಾರಿಕೆಗೆ 799 ಕೋಟಿ ರೂ., ಶಿಕ್ಷಣ ಸಾಲ 90 ಕೋಟಿ ರೂ., ವ್ಯಾಪಾರ ಮತ್ತು ಇತರೆ ಸೇವೆಗೆ 791 ಕೋಟಿ ರೂ. ಗುರಿ ನಿಗದಿಪಡಿಸಲಾಗಿದೆ. ಇತರೆ ವಲಯದಲ್ಲಿ 716 ಕೋಟಿ ರೂ. ಸಾಲ ವಿತರಣೆಯ ಯೋಜನೆ ಇದೆ.

ಪ್ರಸಕ್ತ ಸಾಲ ಯೋಜನೆಯಲ್ಲಿ ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು ಹಾಗೂ ಇದರಿಂದ ಪ್ರಾಯೋಜಿತಗೊಂಡ ಕಾವೇರಿ ಗ್ರಾಮೀಣ ಬ್ಯಾಂಕ್ ಒಟ್ಟಾರೆಯಾಗಿ 1,816 ಕೋಟಿ ರೂ.ಗಳ ಸಾಲ ಯೋಜನೆಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News