×
Ad

ರಾಮನಗರ:ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿಜಿ ಹುನಗುಂದ ಭೇಟಿ

Update: 2016-03-19 23:44 IST

ರಾಮನಗರ, ಮಾ.19: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಸಿ.ಜಿ.ಹುನಗುಂದ ಅವರು ರಾಮನಗರ ಜಿಲ್ಲೆಗೆ ಭೇಟಿ ನೀಡಿದ್ದು, ಜಿಲ್ಲಾಸ್ಪತ್ರೆ, ವಿದ್ಯಾರ್ಥಿನಿಲಯಗಳು ಹಾಗೂ ಬಾಲಕಾರ್ಮಿಕರ ಪುನರ್ವಸತಿ ಕೇಂದ್ರ, ಅಂಗನವಾಡಿಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.ವರು ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ವಿಶೇಷ ಘಟಕ, ಸಾಮಾನ್ಯ ರೋಗಿಗಳ ವಿಭಾಗ, ಮಹಿಳಾ ವಿಭಾಗಗಳನ್ನು ಪರಿಶೀಲಿಸಿದರು. ಈ ವೇಳೆ ಶೌಚಾಲಯಗಳಲ್ಲಿ ನೀರು ಮತ್ತು ವಾರ್ಡ್‌ಗಳಲ್ಲಿ ಅಶುಚಿತ್ವ ಕಂಡುಬಂದಿತು. ಅಲ್ಲದೆ, ಈ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಸಹ ಕೇಳಿದವು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹುನಗುಂದ ಅವರು ವೈದ್ಯಾಕಾರಿಗಳಿಂದ ಸ್ಪಷ್ಟನೆ ಪಡೆದುಕೊಂಡರು. ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿರುವ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

ರೋಗಿಗಳ ಯೋಗಕ್ಷೇಮ ವಿಚಾರಿಸಿದ ಅವರು, ಸೂಕ್ತ ವೈದ್ಯಕೀಯ ಸೌಲಭ್ಯ, ಔಷಗಳು, ಊಟದ ವ್ಯವಸ್ಥೆ ಕಲ್ಪಿಸುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು. ರಾತ್ರಿ ವೇಳೆ ವಾರ್ಡ್‌ಗಳಲ್ಲಿ ಜೇನುನೊಣ ಹಾಗೂ ಮತ್ತಿತರ ಕೀಟಬಾಧೆ ಇರುವ ಕುರಿತು ರೋಗಿಗಳು ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಕಿಟಿಕಿಗಳಿಗೆ ಜಾಲರಿಗಳನ್ನು ಹಾಕುವಂತೆ, ವೈದ್ಯೋಪಚಾರದಲ್ಲಿ ಯಾವುದೇ ವ್ಯತ್ಯಯಗಳಾಗದಂತೆ ಹಾಗೂ ಡಯಾಲಿಸ್ ಸೇವೆಯನ್ನು ಎರಡು ಪಾಳಿಗಳಲ್ಲಿ ಒದಗಿಸುವಂತೆ ವೈದ್ಯಾಕಾರಿಗಳಿಗೆ ಸೂಚಿಸಿದರು.
ನಂತರ ನಗರಸಭೆ ಕಚೇರಿ ಎದುರಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ವೇಳೆ ಹಾಸ್ಟೆಲ್‌ಗಳಿಗೆ ಕುಡಿಯುವ ನೀರಿನ ಕೊರತೆ ಇರುವುದು ಕಂಡುಬಂದಿತು. ಮೋಟಾರ್ ಮತ್ತು ಕೊಳವೆ ಬಾವಿಗಳು ನಿಷ್ಕ್ರಿಯಗೊಂಡಿರುವುದು ಗಮನಕ್ಕೆ ಬಂತು. ನೀರನ್ನು ಶುದ್ಧೀಕರಿಸುವ ಯಂತ್ರ ಹದಗೆಟ್ಟಿದ್ದು, ಶುದ್ಧ ಕುಡಿಯುವ ನೀರನ್ನು ಮಕ್ಕಳಿಗೆ ಒದಗಿಸಲು ವಿಲವಾಗಿರುವ ಕುರಿತು ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.ಲ್ಲಾಸ್ಪತ್ರೆಯಲ್ಲಿರುವ ರೆಡ್‌ಕ್ರಾಸ್ ರಕ್ತನಿ ವಿಭಾಗಕ್ಕೆ ಭೇಟಿ ನೀಡಿ ಲಭ್ಯವಿರುವ ರಕ್ತದ ಮಾದರಿ ಮತ್ತು ಪ್ರಮಾಣವನ್ನು ಪರಿಶೀಲಿಸಿದರು. 24 ಗಂಟೆ ಈ ವಿಭಾಗ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುಗಳು ಕೇಳಿಬಂದಿದೆ. ದಿನದ 24 ಗಂಟೆಯೂ ವಿಭಾಗ ಕಾರ್ಯನಿರ್ವಹಿಸುವಂತೆ, ತಕ್ಷಣ ಸ್ಪಂದಿಸುವಂತೆ ಹಾಗೂ ಲಭ್ಯವಿರುವ ರಕ್ತದ ಪ್ರಮಾಣದ ಕುರಿತು ಗಣಕೀಕರಣಗೊಳಿಸುವಂತೆ ಅಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಜಿಪಂ ಸಿಇಒ ಕೆ.ಎಸ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದೇರ್ಶಕ ಸರ್ವೇಶ್ವರ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಕಾರಿ ರಂಗೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಕುಮಾರ್, ಜಿಲ್ಲಾ ಶಸ ಚಿಕಿತ್ಸಕ ಮುನಿರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News