×
Ad

ಮೌಲ್ಯ ಮಾಪನ ಬಹಿಷ್ಕರಿಸಲು ಪಿಯು ಉಪನ್ಯಾಸಕರು ನಿರ್ಧಾರ

Update: 2016-03-20 14:22 IST

ಬೆಂಗಳೂರು, ಮಾ.20: ಉಪನ್ಯಾಸಕರ ವೇತನ ತಾರತಮ್ಯ ನೀತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗಮನ ಹರಿಸದಿರುವುದನ್ನು ವಿರೋಧಿಸಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮೌಲ್ಯಮಾಪನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಪಿಯು ಉಪನ್ಯಾಸಕರ ಸಂಘದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಬೇಡಿಕೆಗೆ ಸಂಬಂಧಿಸಿ ಸರಕಾರ ಬಜೆಟ್‌ನಲ್ಲಿ ಯವುದೇ ಕ್ರಮ ಕೈಗೊಂಡಿಲ್ಲ.ಜಿ  ಕುಮಾರ್‌ ನಾಯಕ್‌ ವರದಿಯ ಶಿಫಾರಸುಗಳನ್ನು ಸರಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಉಪನ್ಯಾಸಕರು ಹೋರಾಟ ಮುಂದುವರಿಸಿದ್ದಾರೆ.
ಇಂದು ನಡೆದ ಉಪನ್ಯಾಸಕರ ಸಂಘದ ಸಭೆಯಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಪದವಿಪೂರ್ವ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀಕಂಠ ಗೌಡ ಮತ್ತು ಶಾಸಕ ಅರುಣ್‌ ಶಹಾಪೂರ‍್ ಸಭೆಯಲ್ಲಿ ಉಪಸ್ಥಿತರಿದ್ದರು.
,,,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News