ಪ್ರಶ್ನೆ ಪತ್ರಿಕೆ ಸೋರಿಕೆ;ದ್ವಿತೀಯ ಪಿಯು ರಸಾಯನ ಶಾಸ್ತ್ರ ಪರೀಕ್ಷೆ ರದ್ದು
Update: 2016-03-21 20:00 IST
ಬೆಂಗಳೂರು, ಮಾ.21: ರಾಜ್ಯಾದ್ಯಂತ ಇಂದು ನಡೆದಿದ್ದ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣದಿಂದಾಗಿ ರದ್ದಾಗಿದೆ.
ಶೀಘ್ರದಲ್ಲೇ ಪದವಿ ಪೂರ್ವ ಶಿಕ್ಷಣ ಮಂಡಳಿ ಮರು ಪರೀಕ್ಷೆ ನಡೆಸಲಿದೆ.
ಬಳ್ಳಾರಿಯ ಗಾಂಧಿನಗರದ ಮಹಿಳಾ ಪದವಿ ಪೂರ್ವ ಕಾಲೇಜು ಮತ್ತು ಕೋಲಾರದ ಮಾಲೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ಎರಡು ಪರೀಕ್ಷಾ ಕೇಂದ್ರಗಳನ್ನು ಬದಲಾವಣೆಗೆ ನಿರ್ಧಾರ ಕೈಗೊಂಡಿರುವ ಪಪೂ ಮಂಡಳಿ ಎರಡು ಪರೀಕ್ಷಾ ಕೇಂದ್ರಗಳ ಅಧೀಕ್ಷಕರು ಮತ್ತು ಸಹಾಯಕ ಅಧೀಕ್ಷಕರನ್ನು ಅಮಾನತುಗೊಳಿಸಿದೆ ಎಂದು ಪ.ಪೂ ಶಿಕ್ಷಣ ಮಂಡಳಿಯ ನಿರ್ದೇಶಕಿ ಪಲ್ಲವಿ ಆಕೃತಿ ತಿಳಿಸಿದ್ದಾರೆ.