×
Ad

ಬುಡಕಟ್ಟುಜನರ ಕಲೆಗೆ ಉತ್ತೇಜನ: ಸಚಿವ ಮಹದೇವಪ್ರಸಾದ್

Update: 2016-03-21 23:41 IST

ಚಾಮರಾಜನಗರ, ಮಾ.21: ಅರಣ್ಯವಾಸಿಗಳು, ಗಿರಿಜನ, ಬುಡಕಟ್ಟು ಜನರ ಅಮೂಲ್ಯ ಸಾಂಪ್ರದಾಯಿಕ ಕಲೆ ಪರಂಪರೆ ಅಭಿವ್ಯಕ್ತಿಗೆ ಸರಕಾರ ಉತ್ತೇಜನ ನೀಡುತ್ತಿದೆ ಎಂದು ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ತಿಳಿಸಿದ್ದಾರೆ.

ಹನೂರು ವಲಯದ ಹೊಸಪೋಡು ವಿನಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬುಡಕಟ್ಟು ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬುಡಕಟ್ಟು ಜನರು ತಮ್ಮದೇ ಕಲೆ ಪ್ರಕಾರಗಳಾದ ನೃತ್ಯ, ಹಾಡುಗಾ ರಿಕೆಯಿಂದ ಗಮನ ಸೆಳೆಯುತ್ತಿದ್ದಾರೆ. ಅವರ ಪ್ರತಿಭೆ ಅನಾವರಣಕ್ಕೆ ಸಾರ್ವಜನಿಕವಾಗಿ ವೇದಿಕೆ ಒದಗಿಸಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬುಡಕಟ್ಟು ಉತ್ಸವವನ್ನು ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ಇಂತಹ ಉತ್ಸವಗಳನ್ನು ನಡೆಸುವ ಬದಲು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸು ತ್ತಿರುವುದರಿಂದ ವಿಶೇಷವಾಗಿ ಜನರನ್ನು ಸೆಳೆಯುತ್ತಿದೆ ಎಂದರು.ರಿಜನರು ಅರಣ್ಯವಾಸಿಗಳಿಗೆ ಅನುಕೂಲವಾ ಗುವಂತೆ ಜಿಲ್ಲಾ ಮಟ್ಟದಲ್ಲಿ ಸಮುದಾಯ ಭವನ ನಿರ್ಮಿಸುವ ಉದ್ದೇಶ ಹೊಂದ ಲಾಗಿತ್ತು, ಆದರೆ ಬುಡಕಟ್ಟು ಜನರು ಹೆಚ್ಚು ವಾಸಿಸುವ ಕೇಂದ್ರ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬ ಚಿಂತನೆ, ಚರ್ಚೆ ನಡೆದಿದ್ದು, ಸೂಕ್ತ ಸ್ಥಳದಲ್ಲಿ ಭವನ ಆರಂಭಿಸಲಾಗುವುದು ಎಂದು ತಿಳಿಸಿದರು.ಲ್ಲೆಯಲ್ಲಿ 1,915 ಮಂದಿಗೆ ಅರಣ್ಯ ಹಕ್ಕು ಕಾಯ್ದೆಯಡಿ 3,608 ಎಕರೆಯಷ್ಟು ಭೂಮಿ ನೀಡಲಾಗಿದೆ. ರಾಜ್ಯದಲ್ಲೇ ಅರಣ್ಯ ಹಕ್ಕು ಪತ್ರಗಳನ್ನು ಹೆಚ್ಚು ವಿತರಿಸಿದ ಕೀರ್ತಿಗೆ ಜಿಲ್ಲೆ ಪಾತ್ರವಾಗಿದೆ. ಗಿರಿಜನ ಪೋಡುಗಳಿಗೆ ಮೂಲ ಸೌಕರ್ಯವಾದ ವಸತಿ, ಕುಡಿಯುವ ನೀರು, ರಸ್ತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರಸಕ್ತ ಬಜೆಟ್‌ನಲ್ಲಿ ಎಲ್ಲಾ ಅರಣ್ಯವಾಸಿಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
 ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ಗಿರಿಜನರಿಗೆ ಆಶ್ರಮ ಶಾಲೆ, ವಸತಿನಿಲಯ ಸೇರಿದಂತೆ ಇತರೆ ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆ ಮಾಡಲಾಗಿದೆ. ಆಶ್ರಮ ಶಾಲೆಗಳಲ್ಲಿ ಖಾಯಂ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಮನವಿಯನ್ನು ಮಾಡಲಾಗಿದೆ ಎಂದರು.ಸಂದರ್ಭದಲ್ಲಿ ಶಾಸಕ ಆರ್. ನರೇಂದ್ರ, ಜಿಪಂ ಸದಸ್ಯ ಬಸವರಾಜು, ಜಿಲ್ಲಾಧಿಕಾರಿ ಬಿ. ರಾಮು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್. ಸರಸ್ವತಿ, ತಹಶೀಲ್ದಾರ್ ಮಹದೇವಯ್ಯ, ಮಹೇಶ್ ಮತ್ತಿತರರು ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News