×
Ad

ಕಾಸರಗೋಡು: ಮಾ. 24ರಿಂದ ಎಸ್ ವೈ ಎಸ್ ರಾಜ್ಯ ಮಟ್ಟದ ನಾಯಕರಿಂದ ಧರ್ಮ ಸಂಚಾರ

Update: 2016-03-22 14:18 IST

ಕಾಸರಗೋಡು, ಮಾ.22: ಯುವಜನತೆ ನಾಡಿನ  ಆಧಾರಸ್ಥಂಭ ಎಂಬ ಘೋಷಣೆ ಯೊಂದಿಗೆ  ಎಸ್ ವೈ ಎಸ್ ರಾಜ್ಯ ಮಟ್ಟದ ನಾಯಕರ ನೇತ್ರತ್ವದಲ್ಲಿ  ಧರ್ಮ ಸಂಚಾರ   ಮಾರ್ಚ್  24 ರಂದು  ಮಂಜೇಶ್ವರದಿಂದ ಪ್ರಯಾಣ ಬೆಳೆಸಲಿದೆ.
ಬೆಳಗ್ಗೆ 9 ಗಂಟೆಗೆ ಹೊರಡುವ  ಯಾತ್ರೆಗೆ  ಸಮಸ್ತ ಕೇರಳ  ಜಮಾಅತುಲ್  ಉಲೆಮಾ ಉಪಾಧ್ಯಕ್ಷ  ಎಂ . ಅಲಿಕುಞಿ  ಮುಸ್ಲಿಯಾರ್ ಶಿರಿಯ ಉದ್ಘಾಟಿಸುವರು. 


ಎಸ್ ವೈ ಎಸ್  ರಾಜ್ಯ  ಅಧ್ಯಕ್ಷ  ಪೇರೋಡ್ ಅಬ್ದುಲ್  ರಹಮಾನ್ ಸಖಾಫಿ  ಅಧ್ಯಕ್ಷತೆ ವಹಿಸುವರು  ಎಂದು ಪದಾಧಿಕಾರಿಗಳು  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಜೀದ್ ಕಕ್ಕೊಡ್  ಮುಖ್ಯ ಭಾಷಣ ಮಾಡುವರು.
ಕೇರಳ ಮುಸ್ಲಿಂ ಜಮಾ ಅತ್  ಜಿಲ್ಲಾಧ್ಯಕ್ಷ   ಸಯ್ಯದ್ ಮುಹಮ್ಮದ್ ಇಬ್ರಾಹಿಂ  ಪೂಕುನ್ಚಿ ತಂಙಲ್ ಪ್ರಾರ್ಥನೆ ನೆರವೇರಿಸುವರು.
ರಾಜ್ಯದ 132 ವಲಯಗಳಲ್ಲಿ  ಪರ್ಯಟನೆ ನಡೆಸುವ ಯಾತ್ರೆ  ಎಪ್ರಿಲ್ 15 ರಂದು ತಿರುವನಂತಪುರದಲ್ಲಿ  ಕೊನೆಗೊಳ್ಳಲಿದೆ. ಕಾಸರಗೋಡು ಜಿಲ್ಲೆಯ  12 ಕೇಂದ್ರಗಳಲ್ಲಿ ಸ್ವಾಗತ ನೀಡಲಾಗುವುದು ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ  ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ , ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಸಯ್ಯದ್  ಪಿ .ಎಸ್  ಆಟ್ಟ ಕೋಯಾ  ತಂಗಲ್ , ಎನ್. ಪಿ ಮುಹಮ್ಮದ್ ಸಖಾಫಿ  ಪಾತೂರು , ಅಬ್ದುಲ್ ಖಾದರ್ ಸಖಾಫಿ , ಕಂದಲ್ ಸೂಫಿ  ಮದನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News