×
Ad

ಉಡುಪಿ, ಉ.ಕ. ಜಿಲ್ಲೆಯಲ್ಲಿ ಇಂಥ ಆದರ್ಶದ ಮೊದಲ ನಿದರ್ಶನ

Update: 2016-03-22 22:04 IST

ಕಳೆದ ಮಾ.14ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮಾವಿನಕುರ್ವೆ ಬಳಿ ನಡೆದ ಬೈಕ್- ಗೂಡ್ಸ್ ರಿಕ್ಷಾ ಮುಖಾಮುಖಿ ಡಿಕ್ಕಿಯಲ್ಲಿ 30 ವರ್ಷ ಪ್ರಾಯದ ಪುರುಷೋತ್ತಮ ಲಚ್ಚಮಯ್ಯ ನಾಯ್ಕಾ ತಲೆಗೆ ತೀವ್ರವಾಗಿ ಗಾಯಗೊಂಡು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕಣ್ಣು ಮತ್ತು ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಆತ ಇಂದು ಮುಂಜಾನೆ ‘ಮೆದುಳು ನಿಷ್ಕೃಿಯ’ ( ಬ್ರೈನ್ ಡೆಡ್) ಸ್ಥಿತಿಗೆ ತಲುಪಿದ್ದು, ಆತನ ಸಹೋದರರ ಮನ ಒಲಿಸಿದ ವೈದ್ಯರು ಹಾಗೂ ಇತರರು ಆತನ ಪ್ರಮುಖ ಅಂಗಾಂಗಳನ್ನು ದಾನ ಮಾಡಲು ಒಪ್ಪಿಗೆ ಪಡೆದರು.

 ಅದರಂತೆ ಕಾರ್ಯಪ್ರವೃತ್ತರಾದ ಕೆಎಂಸಿಯ ಮೆಡಿಕಲ್ ಸುಪರಿಂಟೆಂಡೆಂಟ್ ಹಾಗೂ ಸಿಓಓ ಡಾ.(ಕ) ಎಂ.ದಯಾನಂದ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಅದಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆ ನಡೆಸಿ ಸಂಜೆ 7:20ರ ಸುಮಾರಿಗೆ ಪುರುಷೋತ್ತಮನ ಎರಡು ಕಿಡ್ನಿ, ಹೃದಯದ ಎರಡು ಕವಾಟು ಹಾಗೂ ಒಂದು ಲೀವರ್ ದಾನಕ್ಕೆ ಪಡೆದುಕೊಂಡರು.

ಇವುಗಳಲ್ಲಿ ಒಂದು ಕಿಡ್ನಿಯನ್ನು ಕೆಎಂಸಿ ಮಣಿಪಾಲದ ಕಿಡ್ನಿಯ ತುರ್ತು ಅಗತ್ಯವಿರುವ ರೋಗಿಗೆ ನೀಡಲು ವೈದ್ಯರು ನಿರ್ದರಿಸಿದ್ದು, ಒಂದು ಕಿಡ್ನಿ, ಲೀವರ್ ಹಾಗೂ ಹೃದಯದ ಕವಾಟ (ಹಾರ್ಟ್ ವಾಲ್ವ್)ವನ್ನು ವಿಶೇಷ ಅಂಬುಲೆನ್ಸ್‌ನಲ್ಲಿ ಉದ್ದಕ್ಕೂ -ಗ್ರೀನ್ ಕಾರಿಡಾರ್- ವ್ಯವಸ್ಥೆಯೊಂದಿಗೆ ಬಜ್ವೆಯ ವಿಮಾನ ನಿಲ್ದಾಣಕ್ಕೆ ಒಯ್ದಿದ್ದು, ಅಲ್ಲಿಂದ 8:15ರ ಸುಮಾರಿಗೆ ಬೆಂಗಳೂರಿಗೆ ಕೊಂಡೊಯ್ದು, ಅಲ್ಲೂ -ಗ್ರೀನ್ ಕಾರಿಡಾರ್ (ಝೀರೋ ಟ್ರಾಪಿಕ್) ವ್ಯವಸ್ಥೆ- ಯೊಂದಿಗೆ ಅವುಗಳನ್ನು ಯಶವಂತಪುರದಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಒಯ್ದು ಅಲ್ಲಿ ಇದಕ್ಕಾಗಿ ಕಾಯುತಿದ್ದ ರೋಗಿಗಳಿಗೆ ನೀಡಲು ಏರ್ಪಾಡು ಮಾಡಲಾಯಿತು.

 ಇದಕ್ಕೆ ಮುನ್ನ ಅಂಗಾಂಗ ದಾನವನ್ನು ಪರೀಶಿಲಿಸಲು ನಿಯೋಜಿತವಾಗಿರುವ ಕರ್ನಾಟಕ ವಲಯ ಸಂಯೋಜಕ ಸಮಿತಿ (ಝಡ್‌ಸಿಸಿಕೆ)ಯ ಸದಸ್ಯರಾದ ತಿಪ್ಪೇಸ್ವಾಮಿ ಹಾಗೂ ನೌಶಾದ್ ಅವರು ಬೆಂಗಳೂರಿನಿಂದ ಬಂದು ಅಂಗಾಂಗ ದಾನಕ್ಕೆ ಮಾಡಬೇಕಾದ ಪೂರ್ವಸಿದ್ಧತೆಗಳನ್ನು ನಡೆಸಿತ್ತು. ಯಾವ, ಯಾವ ಅಂಗಾಂಗಳ ದಾನಕ್ಕೆ ದಾನಿಯ ಹೆತ್ತವರು ಅಥವಾ ಸಂಬಂಧಿಕರು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಪರಿಶೀಲಿಸಿ ಅವರ ಒಪ್ಪಿಗೆ ಪತ್ರವನ್ನು ಪಡೆದು ಅದರಂತೆ ದಾಖಲೆಗಳನ್ನು ಪಡೆಯಿತು. ಡಾ.ದಯಾನಂದ ಅಲ್ಲದೇ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟರು.

ಸಮಿತಿಯೊಂದಿಗೆ ಬಂದ ತಜ್ಞ ವೈದ್ಯೆ ಡಾ.ಸುಮನ ಅವರು ಸ್ಥಳೀಯ ವೈದ್ಯರ ನೆರವಿನೊಂದಿಗೆ ದಾನಿಯಿಂದ ಎರಡು ಕಿಡ್ನಿ, ಎರಡು ಹೃದಯ ಕವಾಟ ಹಾಗೂ ಲೀವರ್‌ನ್ನು ಪಡೆದುಕೊಂಡು, ವಿಶೇಷ ವ್ಯವಸ್ಥೆಯಲ್ಲಿ ಅವುಗಳನ್ನು ತಕ್ಷಣವೇ ಕಾದು ನಿಂತಿದ್ದ ಅಂಬುಲೆನ್ಸ್‌ಗೆ ಹಾಕಿ ಅಲ್ಲಿಂದ ರವಾನಿಸಲಾಯಿತು. ಮಣಿಪಾಲದಿಂದ ರಾ.ಹೆದ್ದಾರಿಯುದ್ದಕ್ಕೂ ‘ಗ್ರೀನ್ ಕಾರಿಡಾರ್’ ವ್ಯವಸ್ಥೆಗೊಳಿಸಲಾಗಿತ್ತು. ಸಮಿತಿಯೊಂದಿಗೆ ಬಂದ ತಜ್ಞ ವೈದ್ಯೆ ಡಾ.ಸುಮನ ಅವರು ಸ್ಥಳೀಯ ವೈದ್ಯರ ನೆರವಿನೊಂದಿಗೆ ದಾನಿಯಿಂದ ಎರಡು ಕಿಡ್ನಿ, ಎರಡು ಹೃದಯ ಕವಾಟ ಹಾಗೂ ಲೀವರ್‌ನ್ನು ಪಡೆದುಕೊಂಡು, ವಿಶೇಷ ವ್ಯವಸ್ಥೆಯಲ್ಲಿ ಅವುಗಳನ್ನು ತಕ್ಷಣವೇ ಕಾದು ನಿಂತಿದ್ದ ಅಂಬುಲೆನ್ಸ್‌ಗೆ ಹಾಕಿ ಅಲ್ಲಿಂದ ರವಾನಿಸಲಾಯಿತು. ಮಣಿಪಾಲದಿಂದ ರಾ.ಹೆದ್ದಾರಿಯುದ್ದಕ್ಕೂ ‘ಗ್ರೀನ್ ಕಾರಿಡಾರ್’ ವ್ಯವಸ್ಥೆಗೊಳಿಸಲಾಗಿತ್ತು. ಅಪಘಾತದಿಂದ ದಾನಿ ಪುರುಷೋತ್ತಮ ಅವರ ಎರಡು ಕಣ್ಣುಗಳಿಗೆ ಹಾನಿಯಾಗಿದ್ದರಿಂದ ಅವುಗಳನ್ನು ಪಡೆಯಲಾಗಲಿಲ್ಲ. ಹೃದಯವನ್ನು ಸಾಗಿಸಲು ಅತೀ ಕಡಿಮೆ ಕಾಲಾವಕಾಶ ಬೇಕಾಗಿದ್ದರಿಂದ ಅದನ್ನು ಪಡೆಯದೇ ಕೇವಲ ಹೃದಯದ ಎರಡು ಕವಾಟಗಳನ್ನು ಪಡೆದುಕೊಳ್ಳಲಾಯಿತು ಎಂದು ಡಾ. ವಿಶಾಲ್ ತಿಳಿಸಿದರು. ಅಪಘಾತದಿಂದ ದಾನಿ ಪುರುಷೋತ್ತಮ ಅವರ ಎರಡು ಕಣ್ಣುಗಳಿಗೆ ಹಾನಿಯಾಗಿದ್ದರಿಂದ ಅವುಗಳನ್ನು ಪಡೆಯಲಾಗಲಿಲ್ಲ. ಹೃದಯವನ್ನು ಸಾಗಿಸಲು ಅತೀ ಕಡಿಮೆ ಕಾಲಾವಕಾಶ ಬೇಕಾಗಿದ್ದರಿಂದ ಅದನ್ನು ಪಡೆಯದೇ ಕೇವಲ ಹೃದಯದ ಎರಡು ಕವಾಟಗಳನ್ನು ಪಡೆದುಕೊಳ್ಳಲಾಯಿತು ಎಂದು ಡಾ. ವಿಶಾಲ್ ತಿಳಿಸಿದರು. ಪುರುಷೋತ್ತಮ ಅವರ ಆದರ್ಶದಿಂದ ಸ್ಪೂರ್ತಿ ಪಡೆದು ಹೆಚ್ಚು ಹೆಚ್ಚು ಮಂದಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ಈಗ ಕೇರಳ ‘ಅಂಗಾಂಗ ದಾನಿಗಳ ರಾಜ್ಯ’ವಾಗಿ ಪರಿಗಣಿತವಾಗಿದ್ದು, ನಾವು ಅದನ್ನು ಅನುಸರಿಸಬಹುದು ಎಂದು ಡಾ.ವಿಶಾಲ್ ನುಡಿದರು. ಇಂಥ ಸಂದರ್ಭದಲ್ಲಿ ಅಗತ್ಯಕ್ಕೆ ಒದಗುವ ಹೆಲಿಕಾಫ್ಟರ್‌ನ್ನು ಇಲ್ಲಿ ಖಾಯಂ ಆಗಿ ಉಳಿಸಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು ಎಂದರು.

 ಭಟ್ಕಳದ ನಿವೃತ್ತ ಶಿಕ್ಷಕರಾದ ಪಾಂಡು ನಾಯಕ್ ಎಂಬವರು ಅಂಗಾಂಗ ದಾನದ ಮಹತ್ವದ ಬಗ್ಗೆ ಪುರುಷೋತ್ತಮ ನಾಯ್ಕೆ ಅವರ ಸಹೋದರರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಇದರೊಂದಿಗೆ ಮಣಿಪಾಲದ ಸಮುದಾಯಿಕ ಆರೋಗ್ಯ ವಿಭಾಗದ ಲೇನಾ ಅಶೋಕ್ ಹಾಗೂ ಟೆಡ್ಡಿ ಆಂಡ್ರೋಸ್ ಅವರು ಪುರುಷೋತ್ತಮ ಅವರ ಸಹೋದರ ರಾಜೇಶ್ ನಾಯ್ಕೋಗೆ ಮನ ಒಲಿಸಿ ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಅಂಗಾಂಗ ದಾನಕ್ಕೆ ಒಪ್ಪಿಸಿದರು ಎಂದು ಡಾ.ವಿಶಾಲ್ ನುಡಿದರು.

‘ಬೂದಿಯಾಗುವ ಬದಲು ಇನ್ನೊಬ್ಬರಿಗೆ ಬೆಳಕಾಗಲಿ’

 ಪುರುಷೋತ್ತಮ ಲಚ್ಚಮಯ್ಯ ನಾಯ್ಕ ಭಟ್ಕಳದ 30ರ ಹರೆಯದ ಯುವಕ. ಭಟ್ಕಳದಲ್ಲಿ ಹರಿಶ್ಚಂದ್ರ ನಾಯ್ಕ ಎಂಬವರ ಮೀನುಗಾರಿಕಾ ಬೋಟ್‌ನಲ್ಲಿ ದುಡಿಯುತ್ತಿರುವ ಪುರುಷೋತ್ತಮ್, ತುಂಬಾ ಒಳ್ಳೆಯ ಹುಡು. ಬೇರೆಯವರಿಗೆ ಸಹಾಯ ಮಾಡುವ ಗುಣ ಆತನಿಗಿತ್ತು ಎಂಬುದು ಹರಿಶ್ಚಂದ್ರರ ಮಾತು.

ಮಾ.14ರಂದು ಪುರುಷೋತ್ತಮನಿಗೆ ರಜೆಯಿತ್ತು. ಹೀಗಾಗಿ ಬೈಕ್‌ನಲ್ಲಿ ಭಟ್ಕಳಕ್ಕೆ ತೆರಳಿ ರಾತ್ರಿ 8 ಗಂಟೆ ಸುಮಾರಿಗೆ ತರಗೋಡಿನಲ್ಲಿರುವ ಮನೆಗೆ ಮರಳುತಿದ್ದಾಗ ಮಾವಿನಕುರ್ವೆ ನಾಗಬನದ ಬಳಿ ಎದುರಿನಿಂದ ವೇಗವಾಗಿ ಬಂದ ಗೂಡ್ಸ್ ರಿಕ್ಷಾ ನೇರವಾಗಿ ಡಿಕ್ಕಿ ಹೊಡೆದಿತ್ತು. ಪುರುಷೋತ್ತಮರ ಕಣ್ಣು ಹಾಗೂ ತಲೆಗೆ ಮಾತ್ರ ತೀವ್ರ ಪೆಟ್ಟಾಗಿತ್ತು. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿ, ರಾತ್ರಿಯೇ ಅಲ್ಲಿಂದ ಮಣಿಪಾಲಕ್ಕೆ ಕರೆತರಲಾಗಿತ್ತು. ಮಾ.14ರಂದು ಪುರುಷೋತ್ತಮನಿಗೆ ರಜೆಯಿತ್ತು. ಹೀಗಾಗಿ ಬೈಕ್‌ನಲ್ಲಿ ಬಟ್ಕಳಕ್ಕೆ ತೆರಳಿ ರಾತ್ರಿ 8 ಗಂಟೆ ಸುಮಾರಿಗೆ ತರಗೋಡಿನಲ್ಲಿರುವ ಮನೆಗೆ ಮರಳುತಿದ್ದಾಗ ಮಾವಿನಕುರ್ವೆನಾಗಬನದ ಬಳಿ ಎದುರಿನಿಂದ ವೇಗವಾಗಿ ಬಂದ ಗೂಡ್ಸ್‌ರಿಕ್ಷಾ ನೇರವಾಗಿ ಡಿಕ್ಕಿ ಹೊಡೆದಿತ್ತು. ಪುರುಷೋತ್ತಮರ ಕಣ್ಣು ಹಾಗೂ ತಲೆಗೆ ಮಾತ್ರ ತೀವ್ರಪೆಟ್ಟಾಗಿತ್ತು. ಬಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿ, ರಾತ್ರಿಯೇ ಅಲ್ಲಿಂದ ಮಣಿಪಾಲಕ್ಕೆ ಕರೆತರಲಾಗಿತ್ತು. ಮೆದುಳಿಗೆ ತೀವ್ರವಾಗಿ ಗಾಯವಾದ ಕಾರಣ ಆತ ಬದುಕುಳಿಯುವುದು ಕಷ್ಟವೆಂದು ಅರಿವಿದ್ದರೂ, ವೈದ್ಯರು ತಮ್ಮ ಕೈಲಾದುದೆಲ್ಲವನ್ನೂ ಮಾಡಿದ್ದರು. ಆದರೆ ಇಂದು ಬೆಳಗಿನ ಜಾವ 2:00 ಗಂಟೆ ಸುಮಾರಿಗೆ ಆತನ ‘ಮಿದುಳು ನಿಷ್ಕೃಿಯ’ ಸ್ಥಿತಿಗೆ ತಲುಪಿದೆ ಎಂದು ವೈದ್ಯರು ಘೋಷಿಸಿದರು. ಇದರಿಂದ ಆರೋಗ್ಯವಂತ ಯುವಕನಾಗಿದ್ದ ಪುರುಷೋತ್ತಮರ ಅಂಗಗಳು ಉಳಿದವರಿಗೆ ನೆರವಿಗೆ ಬರಬಹುದೆನ್ನುವ ದೂರಾಲೋಚನೆಯಲ್ಲಿ ಮೊದಲು ಅವರ ಸಹೋದರ ರಾಜೇಶ್ ನಾಯ್ಕಿರ ಮನ ಒಲಿಸಲಾಯಿತು. ಮೆದುಳಿಗೆ ತೀವ್ರವಾಗಿ ಗಾಯವಾದ ಕಾರಣ ಆತ ಬದುಕುಳಿಯುವುದು ಕಷ್ಟವೆಂದು ಅರಿವಿದ್ದರೂ, ವೈದ್ಯರು ತಮ್ಮ ಕೈಲಾದುದೆಲ್ಲವನ್ನೂ ಮಾಡಿದ್ದರು. ಆದರೆ ಇಂದು ಬೆಳಗಿನ ಜಾವ 2:00 ಗಂಟೆ ಸುಮಾರಿಗೆ ಆತನ ‘ಮಿದುಳು ನಿಷ್ಕೃಿಯ’ ಸ್ಥಿತಿಗೆ ತಲುಪಿದೆ ಎಂದು ವೈದ್ಯರು ಘೋಷಿಸಿದರು. ಇದರಿಂದ ಆರೋಗ್ಯವಂತ ಯುವಕನಾಗಿದ್ದ ಪುರುಷೋತ್ತಮರ ಅಂಗಗಳು ಉಳಿದವರಿಗೆ ನೆರವಿಗೆ ಬರಬಹುದೆನ್ನುವ ದೂರಾಲೋಚನೆಯಲ್ಲಿ ಮೊದಲು ಅವರ ಸಹೋದರ ರಾಜೇಶ್ ನಾಯ್ಕಿರ ಮನ ಒಲಿಸಲಾಯಿತು. ಊರಿನಲ್ಲಿದ್ದ ನಾಲ್ವರು ಮಲ ಸಹೋದರರನ್ನು ಪಾಂಡು ನಾಯ್ಕಿ ಅಂಗಾಂಗ ದಾನಕ್ಕೆ ಮನ ಒಲಿಸಿದರು. ಅಂಗಾಂಗ ದಾನಕ್ಕೆ ಮುಂದಾದ ಕುರಿತು ರಾಜೇಶ್ ಅವರ ಬಳಿ ಕೇಳಿದಾಗ, ಸಹೋದರನಿನ್ನು ಮರಳಿ ಬರುವುದಿಲ್ಲ. ಆತನ ಅಂಗಾಂಗಗಳು ಸುಟ್ಟು ಬೂದಿಯಾಗುವ ಬದಲು ನಾಲ್ಕು ಜನರ ಮೂಲಕ ಅವು ಜೀವಂತವಾಗುಳಿಯಲಿ ಎಂಬುದು ನಮ್ಮ ಆಶೆ ಎಂದರು.

ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ, ಬೆಂಗಳೂರಿನ ಯುವಕ ಹರೀಶ್ ಅವರ ಅಂಗಾಂಗ ದಾನದ ಆದರ್ಶದಿಂದ ಸ್ಪೂರ್ತಿ ಪಡೆದು ತಾನು ಇದಕ್ಕೆ ಒಪ್ಪಿಗೆ ಸೂಚಿಸಿದೆ ಎಂದರು. ಊರಿನಲ್ಲಿ ಕೃಷಿಕನಾಗಿರುವ ರಾಜೇಶ್, ತನ್ನ ಉಳಿದ ಸಹೋದರರ ಮನಸ್ಸನ್ನು ಸಹ ಒಲಿಸಿ ತಮ್ಮನ ಅಂಗಾಂಗ ದಾನಕ್ಕೆ ಮುಂದಾಗಿ ಆದರ್ಶ ಮೆರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News