ಮಾ.30ಕ್ಕೆ ಆಯವ್ಯಯದ ಮೇಲಿನ ಚರ್ಚೆಗೆ ಸಿಎಂ ಉತ್ತರ
Update: 2016-03-22 23:51 IST
ಬೆಂಗಳೂರು, ಮಾ. 22: ವಿಧಾನ ಸಭೆಯಲ್ಲಿ ಮಂಡಿಸಿದ 2016-17ನೆ ಸಾಲಿನ ಆಯವ್ಯಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.30ರಂದು ಉತ್ತರ ನೀಡಲಿದ್ದಾರೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪಸದನದಲ್ಲಿ ಮಂಗಳವಾರ ಪ್ರಕಟಿಸಿದ್ದಾರೆ.
ಸೋಮವಾರ ನಡೆದ ವಿಧಾನಸಭೆ ಕಾರ್ಯಕಲಾಪಗಳ ಸಲಹಾ ಸಮಿತಿಯ ಸಭೆಯಲ್ಲಿ ಮಾ.29ರ ವರೆಗೆ ಆಯವ್ಯಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಆಯವ್ಯಯದ ಮೇಲೆ ನಡೆದ ಸಾಮಾನ್ಯ ಚರ್ಚೆಗೆ ಮುಖ್ಯಮಂತ್ರಿ ಮಾ.30ರಂದು ಉತ್ತರಿಸಲಿದ್ದಾರೆ.ನಂತರ ಅದೇ ದಿನದಂದು ಧನ ವಿನಿಯೋಗ ವಿಧೇಯಕ ಹಾಗೂ ಸಂಬಂಧಿತ ವಿಧೇಯಕಗಳನ್ನು ಅಂಗೀಕಾರ ಪಡೆಯಲು ಮಂಡಿಸಲಾಗುವುದು. ಪ್ರಸ್ತುತ ಅಧಿವೇಶನದಲ್ಲಿ ಪೂರಕ ಅಂದಾಜುಗಳ ಮಂಡನೆ, ಚರ್ಚೆ ಹಾಗೂ ಅಂಗೀಕಾರ ಆಗಲಿದೆ.ಧಿವೇಶನದ ಅವಧಿಯಲ್ಲಿ ಇತರೆ ವಿಧೇಯಕಗಳು ಬಂದಲ್ಲಿ ಅವುಗಳ ಮಂಡನೆ, ಪರ್ಯಾಲೋಚನೆಗೆ ತೆಗೆದುಕೊಳ್ಳಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸದನದಲ್ಲಿ ತಿಳಿಸಿದರು.