ಜಿ.ಪಂ, ತಾ.ಪಂ ಮೀಸಲಾತಿ ಜಟಾಪಟಿ; ಬೋಪಯ್ಯಗೆ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್ ತೀವ್ರ ತರಾಟೆ..!
ಬೆಂಗಳೂರು, ಮಾ.23: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮೀಸಲಾತಿಯ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಸ್ವೀಕರ್ ಕೆ.ಜಿ. ಬೋಪಯ್ಯ ಅವರನ್ನು ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್ ತೀವ್ರ ತರಾಟೆಗೆ ತೀವ್ರ ತೆಗೆದುಕೊಂಡರೂ, ಬಿಜೆಪಿ ಶಾಸಕರು ಅವರ ರಕ್ಷಣೆಗೆ ಬಾರದೆ ದೂರ ಉಳಿದ ಘಟನೆ ಇಂದು ನಡೆದಿದೆ.
ಮಾಜಿ ಸ್ವೀಕರ್ ಬೋಪಯ್ಯ ಮಿಸಲಾತಿ ಬಗ್ಗೆ ಮಾತನಾಡುವಾಗ ಕೋಪಗೊಂಡ ಕಾಂಗ್ರೆಸ್ ಶಾಸಕ ಶಿವಮೂರ್ತಿ " ನ್ಯಾಯವಾಗಿ ಗೆದ್ದು ಬಂದವರನ್ನು ಅನರ್ಹಗೊಳಿಸಿದ್ದರು. ಶಾಸಕರಿಗೆ ಛೀಮಾರಿ ಹಾಕಿದ್ದೀರಿ. ಇವೆಲ್ಲವೂ ರೆಕಾರ್ಡ್‌ನಲ್ಲಿದೆ . ನಿಮಗೆ ಮೀಸಲಾತಿಯ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಮಧ್ಯೆ ಪ್ರವೇಶಿಸಿದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ "ಕೆ.ಜಿ ಬೋಪಯ್ಯ ಕೃತ್ಯದಿಂದ ಅನ್ಯಾಯವಾಗಿದ್ದು ನನಗೆ . ನಾನು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದೇನೆ ” ಎಂದು ಸಾಥ್ ನೀಡಿದರು.
ಸ್ವೀಕರ್ ಕಾಗೋಡು ತಿಮ್ಮಪ್ಪ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಜಿ.ಪಂ, ತಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಲು ಸರಕಾರ ತಡ ಮಾಡಿದಕ್ಕೆವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರಾಜ್ಯ ಸರಕಾರದ ವಿರುದ್ಧ ಗರಂ ಆಗಿ ಮಾತನಾಡಿದರು. ಎಲ್ಲ ಜಿಲ್ಲಾಧಿಕಾರಿಗಳಿಂದ ಪಟ್ಟಿ ತರಿಸಿಕೊಳ್ಳಲಾಗಿದೆ ಇನ್ನು ಎರಡು ಮೂರು ದಿನಗಳ ಒಳಗಾಗಿ ಮೀಸಲಾತಿ ಪಟ್ಟಿ ಪ್ರಕಕಟಿಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದರು..